ಪುತ್ತೂರು: ಜೀವನ ಪಾಠಕ್ಕಿಂತ ಮಿಗಿಲಾದ ಪಾಠ ಬೇರೊಂದಿಲ್ಲ. ಓರ್ವನ ಅನುಭವ ಇನ್ನೊಬ್ಬನಿಗೆ ಕೈದೀವಿಗೆಯಾಗುತ್ತದೆ. ಶ್ರಮದ ಮೂಲಕ ಬದುಕನ್ನು ಕಟ್ಟುವುದು ಹೇಳಿದಷ್ಟು ಸುಲಭವಲ್ಲ. ಈ ರೀತಿ ಬೆಳೆದ ರಘುನಾಥ ರಾಯರು ವೃತ್ತಿ ಬದ್ಧತೆಯಿಂದ ಮುದ್ರಣ ಕ್ಷೇತ್ರಕ್ಕೆ ಗೌರವ ತಂದಿದ್ದಾರೆ. ರಾಜೇಶ್ ಪವರ್ ಪ್ರೆಸ್ ಪುತ್ತೂರಿನ ಹೆಮ್ಮೆಯ ಸಂಸ್ಥೆಯಾಗಿ ಬೆಳೆದಿದೆ ಎಂದು ಸವಣೂರಿನ ವಿದ್ಯಾರಶ್ಮೀ ಸಮೂಹ ವಿದ್ಯಾಸಂಸ್ಥೆಗಳ ಸಂಚಾಲಕ ಸವಣೂರು ಸೀತಾರಾಮ ರೈ ಹೇಳಿದರು.
ದರ್ಭೆಯ ರಾಜೇಶ್ ಪವರ್ ಪ್ರೆಸ್ಸಿನಲ್ಲಿ ಜರುಗಿದ ಸರಳ ಸಮಾರಂಭದಲ್ಲಿ ಎಂ.ಎಸ್.ರಘುನಾಥ ರಾಯರ ವೃತ್ತಿ ಬದುಕಿನ ಅನುಭವ ಗಾಥೆ ‘ಅಕ್ಷರಯಾನ’ ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡುತ್ತಾ, “ಹಿರಿಯರು ಬದುಕಿ ತೋರಿಸಿದ ಜೀವನದ ದರ್ಶನಗಳು ಯುವಕರಿಗೆ ಸ್ಫೂರ್ತಿಯ ದೀವಿಗೆಯಾಗುತ್ತದೆ. ಅಕ್ಷರಯಾನವು ಕಾಲದ ದಾಖಲಾತಿಯಾಗುವುದರಲ್ಲಿ ಸಂಶಯವಿಲ್ಲ.” ಎಂದರು.
ಅಕ್ಷರಯಾನದ ಸಂಪಾದಕ ಹಾಗೂ ಪತ್ರಕರ್ತ, ಲೇಖಕ ನಾ. ಕಾರಂತ ಪೆರಾಜೆಯವರು ಕೃತಿಯನ್ನು ಪರಿಚಯಿಸುತ್ತಾ, “ಮುದ್ರಣ ಕ್ಷೇತ್ರದಲ್ಲಿ ಇಂತಹ ಅನುಭವ ಕಥನ ಅಪರೂಪ” ಎಂದರು.
ಹಿರಿಯ ಸಾಹಿತಿ ಗೋಪಾಲಕೃಷ್ಣ ಶಗ್ರಿತ್ತಾಯರು ರಘುನಾಥ ರಾಯರ ಒಟ್ಟೂ ಬದುಕನ್ನು ಹಾಡಿನ ಮೂಲಕ ಪ್ರಸ್ತುತಪಡಿಸಿ ಅಭಿನಂದಿಸಿದರು. ಕಲಾವಿದ ಪ್ರಸನ್ನ ರೈ ಸವಣೂರು, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮುಖ್ಯಗುರು ಆಶಾ ಬೆಳ್ಳಾರೆ, ವಿವೇಕಾನಂದ ಶಿಶುಮಂದಿರದ ಆಡಳಿತ ಮಂಡಳಿಯ ಅಧ್ಯಕ್ಷ ಅಶೋಕ ಕುಂಬಳೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ರಘುನಾಥ ರಾಯರು ಸ್ವಾಗತಿಸಿದರು. ನಾರಾಯಣ ನಿರ್ವಹಿಸಿ, ವಂದಿಸಿದರು. ಶ್ಯಾಮಲಾ ರಘುನಾಥ ರಾವ್, ರಾಜೇಶ್, ಸ್ವಪ್ನಾ, ಕು.ಅನಘಾ, ಕು.ಅನನ್ಯಾ.. ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದರು. ಪ್ರೆಸ್ಸಿನ ಲೆಕ್ಕಪತ್ರಗಳ ಉಸ್ತುವಾರಿಯಾಗಿರುವ ಲೋನಾ ಪಿಂಟೋ ಸಹಿತ ಸಿಬ್ಬಂದಿಗಳು ಈ ಸಮಾರಂಭಕ್ಕೆ ಸಾಕ್ಷಿಯಾದರು.
ದ ಕ ಜಿಲ್ಲೆಯಲ್ಲಿ ಅಡಿಕೆಗೆ ಕೊಳೆರೋಗ ಭಾದಿಸಿದ್ದು ಇದರಿಂದ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ…
15.08.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…
ಒಂದು ಹಸುವಿನ ಸಗಣಿಯಿಂದ ಪ್ರತಿ ವರ್ಷ 225 ಲೀಟರ್ ಪೆಟ್ರೋಲ್‌ಗೆ ಸಮಾನವಾದ ಮೀಥೇನ್…
ಕನ್ನಡದ ಸ್ಥಿತಿ ಇಂದು ಬೇಲಿ ಇಲ್ಲದ ತೋಟದಂತೆ, ಬಾಗಿಲಿಲ್ಲದ ಮನೆಯಂತಾಗಿದ್ದು, ನಾಲಿಗೆ ಶುದ್ಧೀಕರಣ,…
ಮಿಜೋರಾಂನ ಚಾಂಫೈನಲ್ಲಿ ಅಸ್ಸಾಂ ರೈಫಲ್ಸ್ 466 ಚೀಲ ಅಡಿಕೆಯನ್ನು ವಶಕ್ಕೆ ಪಡೆದಿದೆ. ಈ…
ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿ ಇರುವ ದೇವಾಲಯಗಳಲ್ಲಿ ಕಡ್ಡಾಯವಾಗಿ ನೀರಿನ ಬಾಟಲ್ ಸೇರಿದಂತೆ ಪ್ಲಾಸ್ಟಿಕ್ …