ನಿಂತಿಕಲ್ಲು: ಸುಳ್ಯ ತಾಲೂಕಿನಿಂದ ಬೇರ್ಪಟ್ಟು ನೂತನ ಕಡಬ ತಾಲೂಕಿಗೆ ಸೇರ್ಪಡೆಗೊಂಡ ಎಣ್ಮೂರು ಗ್ರಾಮವನ್ನು ಗ್ರಾಮ ಪಂಚಾಯತ್ ಆಗಿ ಕಡಬ ತಾಲೂಕಿನೊಳಗೆ ಉಳಿಸಬೇಕೆಂದು ಎಣ್ಮೂರು ನಾಗರೀಕರು ಕಡಬ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಸುಳ್ಯ ತಾಲೂಕಿನ ಮುರುಳ್ಯ ಹಾಗು ಎಣ್ಮೂರು ಈ ಎರಡು ಗ್ರಾಮಗಳು ಎಣ್ಮೂರು ಗ್ರಾಮ ಪಂಚಾಯತ್ ವ್ಯಾಪ್ತಿಗೊಳಪಟ್ಟಿತ್ತು. ಇತ್ತೀಚೆಗೆ ನೂತನವಾಗಿ ರಚನೆಯಾದ ಕಡಬ ತಾಲೂಕಿಗೆ ಎಣ್ಮೂರು ಸೇರ್ಪಡೆಯಾಗಿದೆ. ಮುರುಳ್ಯ ಗ್ರಾಮವು ಸುಳ್ಯ ತಾಲೂಕಿನಲ್ಲಿಯೇ ಉಳಿದುಕೊಂಡಿದ್ದು, ಇವುಗಳೆರಡಕ್ಕೂ ಐತಿಹಾಸಿಕ ಹಿನ್ನೆಲೆಯಿದೆ. ಈಗಾಗಲೇ ಎಲ್ಲಾ ಬಗೆಯ ಮೂಲ ಸೌಕರ್ಯಗಳೊಂದಿಗೆ ಕಾರ್ಯನಿರ್ವಹಿಸುತ್ತಿರುವ ಎಣ್ಮೂರು ಗ್ರಾಮ ಪಂಚಾಯತ್ ಎಣ್ಮೂರಿನಲ್ಲಿಯೇ ಕಾರ್ಯಾಚರಿಸುತ್ತಿದ್ದು ಎಲ್ಲಾ ವ್ಯವಸ್ಥೆ ಹೊಂದಿದೆ. ಹೀಗಾಗಿ ಎಣ್ಮೂರು ಗ್ರಾಮ ಪಂಚಾಯತ್ ಆಗಿಯೇ ಕಡಬ ತಾಲೂಕಿನಲ್ಲಿ ಉಳಿಸಬೇಕೆಂದು ರಮೇಶ್ ಕೋಟೆಯವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭ ಎನ್.ಜಿ ಪ್ರಭಾಕರ ರೈ, ಎನ್.ಜಿ ಲೋಕನಾಥ ರೈ, ಎಣ್ಮೂರು ಗ್ರಾಮ ಪಂಚಾಯತ್ ಸದಸ್ಯ ರಘುಪ್ರಸಾದ್ ರೈ, ಸಾದಿಕ್ ನರ್ಲಡ್ಕ, ಜನಾರ್ಧನ ,ಮಾಯಿಲಪ್ಪ ಗೌಡ, ಮಹಮ್ಮದ್ ಎಣ್ಮೂರು ಉಪಸ್ಥಿತರಿದ್ದರು.
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.
ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…
ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…
ಅಡಿಕೆಯ ಮೈಟ್ ಬಗ್ಗೆ ಸಿಪಿಸಿಆರ್‌ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…
ಈ ಬಾರಿ ಫೆಬ್ರವರಿ ತಿಂಗಳಲ್ಲಿ 34 ಡಿಗ್ರಿ ಉಷ್ಣಾಂಶ ದಾಖಲಾಗಿದೆ ಎಂದು ಹವಾಮಾನ…