ಮುಕ್ಕೂರು : ಕುಂಡಡ್ಕ-ಮುಕ್ಕೂರು ನೇಸರ ಯುವಕ ಮಂಡಲ ಮತ್ತು ಸಾರ್ವಜನಿಕ ಗಣೇಶೋತ್ಸವ ಸಮಿತಿ ಇದರ ಆಶ್ರಯದಲ್ಲಿ ದಾನಿಗಳ ನೆರವಿನೊಂದಿಗೆ ಎರಡನೆ ಹಂತದಲ್ಲಿ 20 ಕುಟುಂಬಗಳಿಗೆ 12 ಅಗತ್ಯ ಆಹಾರ ಸಾಮಗ್ರಿಗಳ ಕಿಟ್ ವಿತರಿಸಲಾಯಿತು.
ಮುಕ್ಕೂರು, ಕುಂಡಡ್ಕ, ಕಾನಾವು, ಚೆನ್ನಾವರ, ಅನವುಗುಂಡಿ ಆಸುಪಾಸಿನ ಪ್ರದೇಶದಲ್ಲಿ ಈ ತನಕ ಆಹಾರ ಕಿಟ್ ಸಿಗದೆ ಇರುವ 19 ಕುಟುಂಬಗಳಿಗೆ ಹಾಗೂ ಇತರ 1 ಕುಟುಂಬಕ್ಕೆ ಅಗತ್ಯ ವಸ್ತುಗಳಿರುವ ಕಿಟ್ ವಿತರಿಸಲಾಯಿತು.
ಮನೆ ಮನೆಗೆ ಕಿಟ್ ವಿತರಣೆಗೆ ಚಾಲನೆ ನೀಡಿದ ಸಮಿತಿ ಗೌರವಾಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಮಾತನಾಡಿ, ಜಾತಿ, ಮತ, ಪಕ್ಷದ ಬೇಧಭಾವ ಇಲ್ಲದೆ ಸೇವಾ ಮನೋಭಾವದ ಪರಿಕಲ್ಪನೆಯೊಂದಿಗೆ ಹುಟ್ಟಿಕೊಂಡ ನೇಸರ ಯುವಕ ಮಂಡಲ ಮತ್ತು ಸಾರ್ವಜನಿಕ ಗಣೇಶೋತ್ಸವ ಸಮಿತಿ ಸಮಾಜಮುಖಿ ಚಿಂತನೆ ಪೂರಕವಾಗಿ ಈಗಾಗಲೇ ಹತ್ತಾರು ಚಟುವಟಿಕೆಗಳನ್ನು ಹಮ್ಮಿಕೊಂಡಿದೆ.ಸಮಾಜಪರ ಕಾರ್ಯಗಳಿಗೆ ಸದಾ ಬೆಂಬಲ ನೀಡುವ ಈ ಊರಿನ ದಾನಿಗಳ ಸಹಯೋಗದೊಂದಿಗೆ ಕೊರೊನಾ ಕಷ್ಟಕಾಲದಲ್ಲಿ ಮೊದಲ ಹಂತದಲ್ಲಿ 10 ಮತ್ತು ಎರಡನೇ ಹಂತದಲ್ಲಿ 20 ಕುಟುಂಬಗಳಿಗೆ ಸೇರಿದಂತೆ ಒಟ್ಟು 30 ಮನೆಗಳಿಗೆ ಕಿಟ್ ವಿತರಿಸಿದ್ದೇವೆ ಎಂದರು.
ಈ ಸಂದರ್ಭದಲ್ಲಿ ದಾನಿಗಳಾದ ಯತೀಶ್ ಕಾನಾವು ಜಾಲು, ಗೋಪಾಲಕೃಷ್ಣ ಭಟ್ ಕಾನಾವು, ರಾಧಾಕೃಷ್ಣ ರೈ ಕನ್ನೆಜಾಲು, ಮಹೇಶ್ ಕುಂಡಡ್ಕ, ರಾಮಚಂದ್ರ ಕೋಡಿಬೈಲು, ಜಯಪ್ರಕಾಶ್ ರೈ ಕನ್ನೆಜಾಲು, ಕುಂಬ್ರ ದಯಾಕರ ಆಳ್ವ, ನಿವೃತ್ತ ಶಿಕ್ಷಕ ಬಾಬು ಎನ್, ಗೋಪಾಲಕೃಷ್ಣ ಭಟ್ ಮನವಳಿಕೆ, ರಾಮಚಂದ್ರ ಬರೆಪ್ಪಾಡಿ, ಕುಸುಮಾಧರ ಪೂಜಾರಿ ಅಡ್ಯತಕಂಡ, ಪ್ರಸಾದ್ ಎನ್ ಕುಂಡಡ್ಕ, ರಮೇಶ್ ಪೂಜಾರಿ ಮುಕ್ಕೂರು, ನೇಸರ ಯುವಕ ಮಂಡಲ ಅಧ್ಯಕ್ಷ ರಮೇಶ್ ಕಾನಾವು, ಕಾರ್ಯದರ್ಶಿ ಶಶಿಕುಮಾರ್ ಬಿ.ಎನ್., ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಪೂವಪ್ಪ ನಾಯ್ಕ ಕೊಂಡೆಪ್ಪಾಡಿ, ಕಾರ್ಯದರ್ಶಿ ರಕ್ಷಿತ್ ಗೌಡ ಒರುಂಕು ಮೊದಲಾದವರು ಸಹಕರಿಸಿದರು.
20 ಕುಟುಂಬಕ್ಕೆ ಆಹಾರ್ ಸಾಮಾಗ್ರಿ ವಿತರಣೆ:
ಪ್ರತಿ ಕುಟುಂಬಕ್ಕೆ ಹಾಲು, ಸಕ್ಕರೆ, ಚಾ ಹುಡಿ, ಅವಲಕ್ಕಿ, ಕೆಂಪು ಕಡಲೆ, ಕುಮ್ಟೆ ಮೆಣಸು, ಈರುಳ್ಳಿ, ಟೊಮ್ಯಾಟೊ, ಬಟಾಟೆ, ಉಪ್ಪು, ಸಾಬೂನು ಸೇರಿದಂತೆ 12 ವಸ್ತುಗಳು ಇರುವ ಕಿಟ್ ಅನ್ನು ಒಟ್ಟು 20 ಕುಟುಂಬಗಳಿಗೆ ವಿತರಿಸಲಾಯಿತು.
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…