ಧಾರಾ ರಾಮಾಯಾಣ ಕಾರಣ -ಸ್ಮರಣ ಕಾರ್ಯಕ್ರಮ
ಬೆಂಗಳೂರು: ಯಾವಾಗಲೂ ನನ್ನದು ಎಂಬ ಭಾವ ಬರಬಾರದು ಎಲ್ಲವೂ ನಿನ್ನದು ಎಂಬುದು ಬರಬೇಕು ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಅಭಿಪ್ರಾಯಪಟ್ಟರು.
ಗಿರಿನಗರ ಶ್ರೀರಾಮಾಶ್ರಮದ ಪುನರ್ವಸುಭವನದಲ್ಲಿ ಭಾನುವಾರ ನಡೆದ ಧಾರಾ-ರಾಮಾಯಣ ಕಾರಣ-ಸ್ಮರಣ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ನನ್ನ ನಿನ್ನ(ದೇವರ) ಮಧ್ಯೆ ಭೇದವಿಲ್ಲವಾಗಿಯೂ ಕೂಡ ಪ್ರಭು ನಾನು ನಿನ್ನವನು ಎನ್ನುವಾಗ ತುಂಬ ಸಮರ್ಪಣಾ ಭಾವ ಇದೆ ಹೊರತು ನೀನು ನನ್ನವನು ಎನ್ನುವಾಗ ನೀನು ನನ್ನವನು ಮಾತ್ರ ಎಂಬುದು ಬಂದಾಗ ಎಲ್ಲ ತಂಟೆ, ತಕರಾರುಗಳು ಶುರುವಾಗುತ್ತದೆ. ಸಮುದ್ರ ಮತ್ತು ಅಲೆ ಬೇರೆಯಾಗಿ ಕಂಡರೂ ಬೇರೆ ಅಲ್ಲ. ಆ ಅಲೆಯು ಅದೇ ಸಮುದ್ರದಿಂದ ತನ್ನ ವಿಲಾಸವನ್ನು ತೋರಿದೆ ಅದರಲ್ಲೇ ಒಂದಾಗಿದೆ. ಹಾಗೇ ನಾವು ಕೂಡ ರಾಮನು ಸಮುದ್ರವಾದರೆ ನಾವು ಎಲ್ಲ ಅಲೆಗಳು. ಅಲೆಯ ಮೂಲ ಸಮುದ್ರ ನಮ್ಮ ಮೂಲ ರಾಮಸಾಗರವಾಗಿದೆ ಎಂದು ಹೇಳಿದರು.
ರಾಮಾಯಣ ಇಲ್ಲದೇ ಭಾರತೀಯ ಸಂಸ್ಕೃತಿ ಇಲ್ಲ. ಮೂಲ ವಾಲ್ಮೀಕಿಯವರ ರಾಮಾಯಣವು ಎಲ್ಲಿಯೂ ಪಠ್ಯವಾಗಿಲ್ಲ. ಈಗಿನ ಪಠ್ಯಗಳಲ್ಲಿ ಅಲ್ಲಿಂದ ಇಲ್ಲಿಂದ ಸೇರಿ ತುಣುಕುಗಳ ರಾಮಾಯಣಗಳು ಸೇರಿವೆ. ನಮಗೆಲ್ಲ ಯಕ್ಷಗಾನ ಸೇರಿದಂತೆ ಮುಂತಾದ ಗ್ರಾಮ್ಯಕಲೆಗಳಿಂದ ನಮಗೆ ರಾಮಾಯಣಗಳು ತಿಳಿದು ಬಂದಿದೆ. ಇತ್ತೀಚೆಗೆ ಹೇಗೆ ಆಗಿದೆ ಎಂದರೆ ಮೂಲ ರಾಮಾಯಣವನ್ನು ಬಿಟ್ಟು ರಾಮಾಯಣದ ಗ್ರಂಥ ರಚನೆ ಮಾಡಿ ನಿನ್ನ ಕಥೆ ಬೇರೆ ಮಾಡು ಎಂಬಂತಾಗಿದೆ. ಕೆಲವು ಗ್ರಂಥಗಳಲ್ಲಿ ತತ್ವ, ಪಾತ್ರಗಳಿಗೆ ಅಪಚಾರವಾಗಿದೆ. ಕೆಲವು ಕಡೆ ಸೊಗಸು,ಸಂದೇಶ ಬಂದಿರುವ ಸಾಧ್ಯತೆಯೂ ಇದೆ. ಮೂಲ ರಾಮಾಯಣಕ್ಕೆ ಯಾವ ವಿಷಯ ವಿರೋಧವಾಗಿದೆಯೋ ಅದನ್ನು ಒಪ್ಪುವುದಕ್ಕೆ ಆಗುವುದಿಲ್ಲ. ಅಂತಹದ್ದನ್ನು ಕೈ ಬಿಡಬೇಕಾಗುತ್ತದೆ ಅದನ್ನು ಒಪ್ಪಲು ಸಾಧ್ಯವಿಲ್ಲ. ವಿಷ್ಣುಗುಪ್ತ ವಿಶ್ವವಿದ್ಯಾಪೀಠದಲ್ಲಿ ವಾಲ್ಮೀಕಿ ರಾಮಾಯಣವೂ ಅನಿವಾರ್ಯ ಪಠ್ಯವಾಗಿರಲಿದ್ದು ಇದರಿಂದ ಇಡೀ ಸಂಸ್ಕೃತಿ, ಜೀವನವೂ ಗೊತ್ತಾಗುತ್ತದೆ ಎಂದು ತಿಳಿಸಿದರು.
ಅಜ್ಞಾತ ರಾಮಾಯಣ ಎಂಬ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ವಿದ್ವಾನ್ ಜಗದೀಶ ಶರ್ಮಾ ಸಂಪ, ವಿದ್ವಾನ್ ಪಾದೇಕಲ್ಲು ವಿಷ್ಣುಭಟ್, ವಿದ್ವಾನ್ ರಾಘವೇಂದ್ರ ಭಟ್ ಕ್ಯಾದಗಿ, ಮೋಹನ ಭಾಸ್ಕರ ಹೆಗಡೆ ಭಾಗಿಯಾಗಿ ಕೇಳಿದ ರಾಮಾಯಣದ ಬಗೆಗಿನ ಪ್ರಶ್ನೆಗಳಿಗೆ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿಯವರು ಉತ್ತರಿಸಿದರು.
ಸ್ಮರಣ ಕಾರ್ಯಕ್ರಮದಲ್ಲಿ ಧಾರಾ ರಾಮಾಯಣ ಪ್ರವಚನ ಆಲಿಸಿದ ರಾಘವೇಂದ್ರ ಭಟ್ ಕ್ಯಾದಗಿ, ಶಾರದಾ ಜಯಗೋವಿಂದ, ರಮ್ಯಾ, ನೀರ್ನಳ್ಳಿಗಣಪತಿ ಭಟ್, ಗೋವಿಂದರಾಜ್ ಕೋರಿಕ್ಕಾರ್ ತಮ್ಮ ಅನುಭವ ಕಥನವನ್ನು ಹೇಳಿದರು.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…