ಸುಳ್ಯ : ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ ಎಸ್ಸೆಸ್ಸೆಫ್ ಗಾಂಧಿನಗರ ಶಾಖೆಯ ವಾರ್ಷಿಕ ಕೌನ್ಸಿಲ್ ಸಂಗಮ ಜನವರಿ 19ರಂದು ಶಾಖಾಧ್ಯಕ್ಷ ಸಿದ್ದೀಖ್ ಬಿ.ಎ ಅಧ್ಯಕ್ಷತೆಯಲ್ಲಿ ಸುನ್ನಿ ಸೆಂಟರ್ ನಲ್ಲಿ ಜರಗಿತು. ಶಾಖಾ ಎಸ್ಸೆಸ್ಸೆಫ್ ನ ಉಪಾಧ್ಯಕ್ಷ ರಶೀದ್ ಝೈನಿ ದುಆ ನೆರವೇರಿಸಿದರು.
ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಸಮಿತಿ ಸದಸ್ಯರಾದ ರಫೀಖ್ ಅಂಜದಿ ಇಂದ್ರಾಜೆ ಉದ್ಘಾಟಿಸಿದರು. ಕೆ.ಸಿ.ಎಫ್ ಅಬುಧಾಬಿ ಸದಸ್ಯ ಕಬೀರ್ ಜಟ್ಟಿಪಳ್ಳ ಸಂಘಟನಾ ತರಬೇತಿ ನಡೆಸಿದರು. ಎಸ್.ವೈ.ಎಸ್ ಜಿಲ್ಲಾ ಸಮಿತಿ ಸದಸ್ಯ ಸಿದ್ದೀಖ್ ಕಟ್ಟೆಕಾರ್ ಮುಖ್ಯ ಅತಿಥಿಯಾಗಿದ್ದರು. ಸುಳ್ಯ ಸೆಕ್ಟರ್ ಎಸ್ಸೆಸ್ಸೆಫ್ ಸದಸ್ಯ ಶರೀಫ್ ಜಯನಗರ ವೀಕ್ಷಕರಾಗಿದ್ದರು.
ಈ ಸಂಘಟನಾ ಅವಧಿಯ ಒಂದು ವರ್ಷದಲ್ಲಿ ಗಾಂಧಿನಗರದಾದ್ಯಂತ ಐದೂವರೆ ಲಕ್ಷಗಳ ಸಾಂತ್ವನ ಕಾರ್ಯಾಚರಣೆಗಳ ವರದಿ ಹಾಗೂ ಲೆಕ್ಕ ಪತ್ರವನ್ನು ಪ್ರ. ಕಾರ್ಯದರ್ಶಿ ಬಶೀರ್ ಕಲ್ಲುಮುಟ್ಲು ಹಾಗೂ ಕೋಶಾಧಿಕಾರಿ ನಾಫಿ ಕೆರೆಮೂಲೆ ಮಂಡಿಸಿದರು.
ಬಶೀರ್ ಕಲ್ಲುಮುಟ್ಲು ಸ್ವಾಗತಿಸಿ ಇಲ್ಯಾಸ್ ಗುರುಂಪು ವಂದಿಸಿದರು.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.
ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…
ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…
ಅಡಿಕೆಯ ಮೈಟ್ ಬಗ್ಗೆ ಸಿಪಿಸಿಆರ್ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…