ಬೆಳ್ಳಾರೆ: ಕರ್ನಾಟಕ ರಾಜ್ಯ ಸುನ್ನೀ ಸ್ಟುಡೆಂಟ್ಸ್ ಫೆಡರೇಶನ್ ಎಸ್.ಎಸ್.ಎಫ್ ಸುಳ್ಯ ಡಿವಿಷನ್ ಸಮಿತಿಯ ವಾರ್ಷಿಕ ಮಹಾಸಭೆಯು ಬೆಳ್ಳಾರೆ ಸುನ್ನೀ ಸೆಂಟರಿನಲ್ಲಿ ಸಮಿತಿಯ ಅಧ್ಯಕ್ಷರಾದ ಜಿ. ಕೆ ಇಬ್ರಾಹಿಂ ಅಮ್ಜದಿಯವರ ಅಧ್ಯಕ್ಷತೆಯಲ್ಲಿ ಜರಗಿತು. ದಾರುಲ್ ಹಿಕ್ಮ ಅಧ್ಯಕ್ಷರಾದ ಹಸನ್ ಸಖಾಫಿ ಬೆಳ್ಳಾರೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರಧಾನ ಕಾರ್ಯದರ್ಶಿ ಜುನೈದ್ ಸಖಾಫಿ ಜೀರ್ಮುಕ್ಕಿ ವರದಿ ವಾಚಿಸಿ, ಕೋಶಾಧಿಕಾರಿ ಹಸೈನಾರ್ ನೆಕ್ಕಿಲ ಲೆಕ್ಕಪತ್ರ ಮಂಡಿಸಿದರು. ನಂತರ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು.
ಜಿ.ಕೆ ಇಬ್ರಾಹಿಂ ಅಮ್ಜದಿ ಮಂಡೆಕೋಲು(ಅಧ್ಯಕ್ಷರು), ಫೈಝಲ್ ಝುಹ್ರಿ ಕಲ್ಲುಗುಂಡಿ, ಖಲೀಲ್ ಝುಹ್ರಿ ನೆಕ್ಕಿಲ(ಉಪಾಧ್ಯಕ್ಷರು), ಸಿರಾಜುದ್ದೀನ್ ಹಿಮಮಿ ಕುಂಬಕ್ಕೋಡು(ಪ್ರ. ಕಾರ್ಯದರ್ಶಿ), ಸಫ್ವಾನ್ ಸುಣ್ಣಮೂಲೆ, ರಿಯಾಝ್ ನೆಕ್ಕಿಲ(ಜೊತೆ ಕಾರ್ಯದರ್ಶಿಗಳು), ಸ್ವಾದಿಖ್ ಕಲ್ಲುಗುಂಡಿ(ಕ್ಯಾಂಪಸ್ ಕಾರ್ಯದರ್ಶಿ), ಹಸೈನಾರ್ ನೆಕ್ಕಿಲ(ಕೋಶಾಧಿಕಾರಿ), ಜುನೈದ್ ಸಖಾಫಿ ಜೀರ್ಮುಕ್ಕಿ, ಅಬ್ದುರ್ರಹ್ಮಾನ್ ಸಖಾಫಿ ಟಿ.ಎಂ, ಅಬ್ದುನ್ನಾಸಿರ್ ಬಾ ಹಸನಿ, ಮುನೀರ್ ಹನೀಫಿ, ಕಲಾಂ ಝುಹ್ರಿ, ಸ್ವಬಾಹ್ ಹಿಮಮಿ ಸಖಾಫಿ, ಸಿರಾಜ್ ಸಅದಿ, ಸಿದ್ದೀಖ್ ಗೂನಡ್ಕ, ನೌಶಾದ್ ಕೆರೆಮೂಲೆ, ಶಮೀರ್ ಡಿ. ಎಚ್(ಸದಸ್ಯರುಗಳು) ಆಗಿ ಆಯ್ಕೆಗೊಂಡರು.
ವೀಕ್ಷಕರಾಗಿ ದ.ಕ ಈಸ್ಟ್ ಝೋನ್ ಪ್ರ. ಕಾರ್ಯದರ್ಶಿ ಶಫೀಕ್ ಮಾಸ್ಟರ್ ತಿಂಗಳಾಡಿ ಆಗಮಿಸಿ ಮಹಾಸಭೆಯ ಪ್ರಕ್ರಿಯೆಗಳನ್ನು ನಡೆಸಿದರು. ಜಿಲ್ಲಾ ನಾಯಕರಾದ ತೌಸೀಫ್ ಸಅದಿ ತರಗತಿ ಮಂಡಿಸಿದರು. ಡಿವಿಷನ್ ಉಸ್ತುವಾರಿ ಶಾಹುಲ್ ಹಮೀದ್ ಸಖಾಫಿ ಪಾಣಾಜೆ, ಝೋನ್ ಬ್ಲಡ್ ಸೈಬೋ ಅಮೀರ್ ಇಮ್ರಾನ್ ರೆಂಜಲಾಡಿ, ಡಿವಿಷನ್ ಮಾಜಿ ಪ್ರ.ಕಾರ್ಯದರ್ಶಿ ಸಂಶುದ್ದೀನ್ ಪಳ್ಳಿಮಜಲು ಮುಖ್ಯ ಅತಿಥಿಗಳಾಗಿದ್ದರು. ಜೊತೆ ಕಾರ್ಯದರ್ಶಿ ಮುನೀರ್ ಹನೀಫಿ ಸ್ವಾಗತಿಸಿ, ನೂತನ ಪ್ರ. ಕಾರ್ಯದರ್ಶಿ ಸಿರಾಜುದ್ದೀನ್ ಹಿಮಮಿ ಕುಂಬಕ್ಕೋಡು ವಂದಿಸಿದರು.
ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಹಾಗೂ ಸಿಬಂದಿ ವರ್ಗದವರ ಜಂಟಿ…
ನವೆಂಬರ್ 9 ಅಥವಾ 10 ರಿಂದ ದಕ್ಷಿಣ ಕರ್ನಾಟಕದಲ್ಲಿ ಹಿಂಗಾರು ಮಳೆ ಮತ್ತೆ…
ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
ಗ್ರಾಮೀಣ ಮಹಿಳೆಯರು ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಅರಣ್ಯ, ಪರಿಸರ ಸಚಿವ ಈಶ್ವರ ಬಿ.ಖಂಡ್ರೆ…
ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ 2024025 ನೇ ಸಾಲಿನಲ್ಲಿ ಎಫ್‌ಎಕ್ಯೂ ಗುಣಮಟ್ಟದ…
ದೀಪಾವಳಿ ಅಂಗವಾಗಿ ಚಿಕ್ಕಮಗಳೂರು ಜಿಲ್ಲೆಯ ಬಿಂಡಿಗ ದೇವಿರಮ್ಮ ಬೆಟ್ಟಕ್ಕೆ ಸಾವಿರಾರು ಭಕ್ತರು ಆಗಮಿಸಿ,…