ಹಯಾತುಲ್ ಇಸ್ಲಾಂ ಮದ್ರಸ ಪೈಂಬೆಚ್ಚಾಲು ಇದರ ವತಿಯಿಂದ ಗ್ರ್ಯಾಂಡ್ ಅಜ್ಮೀರ್ ಆಂಡ್ ನೇರ್ಚೆ ಹಾಗೂ ಏಕದಿನ ಮತಪ್ರಭಾಷಣ ಎ.7ರಂದು ಪೈಂಬೆಚ್ಚಾಲು ಬದ್ರಿಯಾ ಜಮ್ಮಾ ಮಸೀದಿ ವಠಾರದಲ್ಲಿ ನಡೆಯಲಿದೆ.
ಸ್ಥಳೀಯ ಜಮಾಅತ್ ಅಧ್ಯಕ್ಷರಾದ ಅಬ್ದುಲ್ ಖಾದರ್ ಟಿ.ಎಂ. ದ್ವಜಾ
ರೋಹಣ ನಡೆಸಲಿದ್ದು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ನಂತರ ಮೌಲೂದ್ ಪಾರಾಯಣ ಹಾಗೂ ಖತಮುಲ್ ಖುರ್‍ಆನ್ ಅಸ್ಸಯ್ಯದ್ ಖಮರುಲ್ ಜಿಫ್ರಿ ಅಲ್ ಹನೀಫಿ ಹಾಗೂ ಜಾಫರ್ ಸಅದಿ ಪಳ್ಳತ್ತೂರು
ರವರ ನೇತೃತ್ವದಲ್ಲಿ ನಡೆಯಲಿದೆ. ಸಂಜೆ 8 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು ಮುಖ್ಯ ಪ್ರಭಾಷಣ
ಕಾರರಾಗಿ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಪ್ರಥಮ ಬಾರಿಗೆ ಪೈಂಬೆಚ್ಚಾ
ಲಿಗೆ ಆಗಮಿಸಲಿದ್ದಾರೆ. ದುಆ ನೇತೃತ್ವ
ವನ್ನು ಅಸ್ಸಯ್ಯದ್ ಫಝಲ್ ಕೋಯ
ಮ್ಮ ತಂಞಳ್ ಕೂರತ್ ನೀಡಲಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಝೈನುಲ್ ಉಲಾಮಾ ಮಾಣಿ ಉಸ್ತಾದ್ ವಹಿಸಲಿದ್ದಾರೆ. ಉದ್ಘಾಟನೆಯನ್ನು ಅಲ್‍ಕಾಮಿಲ್ ಸಖಾಫಿ ಅಲ್ ಬುಖಾರಿ ನಿರ್ವಹಿಸಲಿದ್ದಾರೆ. ಪ್ರಸ್ತಾವಿಕ ಭಾಷಣ ಶೈಖುನಾ ಅಲ್‍ಹಾಝ್ ಮಹ್‍ಮೂದುಲ್ ಫೈಝಿ ಓಲೆಮುಂಡೋವು ಉಸ್ತಾದರು ನಿರ್ವಹಿಸಲಿದ್ದಾರೆ ಹಾಗೂ ವಿವಿಧ ಉಲಾಮಾ ನೇತಾರರು, ಸೈಯದರು, ಗಣ್ಯರು ಭಾಗವಹಿಸಲಿದ್ದಾರೆ ಎಂದು ಸ್ಥಳೀಯ ಖತೀಬರಾದ ಅಬ್ದುಲ್ ನಾಸಿರ್ ಸುಖೈಫಿ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ. ಗೋಷ್ಟಿಯಲ್ಲಿ ಜಮಾಅತ್ ಅಧ್ಯಕ್ಷ ಅಬ್ದುಲ್ ಖಾದರ್ ಟಿ.ಎಂ. ಮದರಸ ಸದರ್ ಮುಅಲ್ಲೀಂ ಇಸ್ಮಾಯಿಲ್ ಸಖಾಫಿ, ಪಿ.ಎಂ ಅಬ್ದುಲ್ ರಹಿಮಾನ್ ಉಪಸ್ಥಿತರಿದ್ದರು.
ಚಂದನ ಸಾಹಿತ್ಯ ವೇದಿಕೆಯಿಂದ ಕವಿಗೋಷ್ಠಿ ಕೃತಿ ಬಿಡುಗಡೆ – ಸನ್ಮಾನ ಕಾರ್ಯಕ್ರಮ
ಸುಳ್ಯದ ಚಂದನ ಸಾಹಿತ್ಯ ವೇದಿಕೆ ಆಶ್ರಯದಲ್ಲಿ ಮಹಿಳಾ ಸಮಾಜ ಸುಳ್ಯ ಸಹಯೋಗದಿಂದ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಕವಿಗೋಷ್ಠಿ – ಕೃತಿ ಬಿಡುಗಡೆ -ಸನ್ಮಾನ ಸಮಾರಂಭವು ಮಾ.29ರಂದು ಮಹಿಳಾ ಸಮಾಜದ ಸಭಾಂಗಣದಲ್ಲಿ ನಡೆಯಿತು. ಜಿಲ್ಲಾ ಮಹಿಳಾ ಮಂಡಲ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಹರಿಣಿ ಸದಾಶಿವ ಉದ್ಘಾಟಿಸಿ, “ರಾಷ್ಟ್ರದ ಉನ್ನತಿಯಲ್ಲಿ ಮಹಿಳೆಯರ ಪಾತ್ರವೂ ಇದೆ. ಎಲ್ಲ ಕ್ಷೇತ್ರಗಳಲ್ಲಿ ಮಹಿಳೆ ಸಾಧನೆ ತೋರಿದ್ದಾಳೆ. ಮಹಿಳಾ ಸಮಾನತೆಗೆ ಹೋರಾಡುವ ಅಗತ್ಯ ಇಂದಿಲ್ಲ. ಮಹಿಳಾ ಆತ್ಮಸ್ಥೈರ್ಯ ಹೆಚ್ಚಿಸುವುದಕ್ಕೆ ಮನೆಯಿಂದ ಪೂರಕ ವಾತಾವರಣ ನಿರ್ಮಾಣವಾಗಬೇಕು” ಎಂದರು. ಹಿರಿಯ ಮಹಿಳಾ ಸಾಹಿತಿ ಜಯಮ್ಮ ಚೆಟ್ಟಿಮಾಡ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಉದ್ಯಮಿ ಆದಿಶೇಷ ರೆಡ್ಡಿ, ಸಾಹಿತಿ ಯು ಸುಬ್ರಾಯ ಗೌಡ ಉಪಸ್ಥಿತರಿದ್ದರು. ಹಿರಿಯ ಸಾಹಿತಿಗಳಾದ ಶೀಲಾವತಿ ಕೊಳಂಬೆ, ಆಧ್ಯಾತ್ಮಿಕ ಚಿಂತಕಿ ಉಮಾದೇವಿ, ಸಾಂಸ್ಕೃತಿಕ ಕಲಾವಿದೆ ಸಂಧ್ಯಾ ಮಂಡೆಕೋಲು ಅವರನ್ನು ಸನ್ಮಾನಿಸಲಾಯಿತು. ದೇವರಕಳಿಯ ಚೈತನ್ಯ ಸೇವಾಶ್ರಮದ ಸಂಚಾಲಕ ಯೋಗೇಶ್ವರಾನಂದ ಸರಸ್ವತಿ ಸ್ವಾಮೀಜಿ ಉಪಸ್ಥಿತರಿದ್ದರು. ಅವರ 154 ನೇ ಕೃತಿ ಅಮ್ಮ ತೋರಿದ ದಾರಿ ಬಿಡುಗಡೆಗೊಳಿಸಲಾಯಿತು. ಚಂದನ ಸಾಹಿತ್ಯ ವೇದಿಕೆ ಅಧ್ಯಕ್ಷ ಎಚ್ ಭೀಮರಾವ್ ವಾಷ್ಠರ್ ಪ್ರಸ್ತಾವನೆಗೈದರು. ಶ್ರೀಮತಿ ಸುಧಾ ಶ್ರೀಧರ ಅವರಿಗೆ ಅದೃಷ್ಠವಂತ ಮಹಿಳೆ ಎಂದು ಗೌರವಿಸಲಾಯಿತು. ಮಹಿಳೆಯರಿಗೆ ಅಕ್ಷರ ಜೋಡಣೆ ಸ್ಪರ್ಧೆ ನಡೆಸಿ ವಿಜೇತರಿಗೆ ಬಹುಮಾನ ನೀಡಿ ಸತ್ಕರಿಸಲಾಯಿತು. ಕವಿಗೋಷ್ಠಿ ಯಲ್ಲಿ ಪುತ್ತೂರಿನ ಗೋಪಾಲಕೃಷ್ಣ ಭಟ್ ಕಟ್ಟತ್ತಿಲ, ಕಾಸರಗೋಡಿನ ಶಂಕರನಾರಾಯಣ ಭಟ್ ಕಕ್ಕೆಪಾಡಿ, ತಾರಾನಾಥ್ ಎಲಿಮಲೆ, ಭೀಮರಾವ್ ವಾಷ್ಠರ್, ಸಹನಾ ಗಿರೀಶ್ ಬಾಳಿಲ, ಯುಸುಗೌ, ಸುಮಂಗಲಾ ಲಕ್ಷ್ಮಣ ಕೋಳಿವಾಡ ಇನ್ನಿತರರು ಕವನ ವಾಚಿಸಿದರು. ಪಯಸ್ವಿನಿ ಯುವತಿ ಮಂಡಲದವರು ಸಹಕರಿಸಿದರು. ಬಿ. ಭಾವನಾ ವಾಷ್ಠರ್ ಸ್ವಾಗತಿಸಿ , ಅರ್ಚನಾ ಕೆ ಎಲ್ ಪ್ರಾರ್ಥನೆ ಹಾಡಿ ಕಾರ್ಯಕ್ರಮ ನಿರೂಪಿಸಿದರು.
ಕಲ್ಲು ಉಳಿಯೇಟು ತಿಂದರೆ ಶಿಲೆಯಾಗುತ್ತದೆ: ಪರಮೇಶ್ವರಯ್ಯ
“ಕಲ್ಲು ಉಳಿಯೇಟು ತಿಂದರೆ ಮಾತ್ರ ಶಿಲೆಯಾಗುತ್ತದೆ. ಎಳೆಯ ಮಕ್ಕ
ಳನ್ನು ಕೂಡ ಸರಿಯಾದ ತರಬೇತು ನೀಡಿದರೆ ಮುಂದೊಂದು ದಿನ ಅತ್ಯುತ್ತಮ ಸಾಧಕನಾಗುತ್ತಾರೆ” ಎಂದು ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಸ್ಥಾನದ ಧರ್ಮದರ್ಶಿ ಪರಮೇ
ಶ್ವರಯ್ಯ ಕಾಂಚೋಡು ಹೇಳಿದರು
ಬಾಳಿಲ ವಿದ್ಯಾಬೋಧಿನಿ ಶಾಲೆಯಲ್ಲಿ ನಡೆಯುತ್ತಿರುವ ಚಿಣ್ಣರ ಕಿಲಕಿಲ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು “ಮಕ್ಕಳು ರಜೆ ಯನ್ನು ವ್ಯರ್ಥಗೊಳಿಸದೆ ಇಂಥಹ ಶಿಬಿರದಲ್ಲಿ ತೊಡಗಿಸಿಕೊಂಡರೆ ಜೀವನದ ಕಲೆಯಲ್ಲಿ ಪರಿಪಕ್ವನಾಗುವರು” ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕ ರಾಮಚಂದ್ರ ಗೋಕುಲ ವಹಿಸಿದ್ದರು. ವೇದಿಕೆಯಲ್ಲಿ ಸಂಪನ್ಮೂಲ ವ್ಯಕ್ತಿ ಉಲ್ಲಾಸ್ ಪುತ್ತೂರು, ಎಸ್‍ಡಿಎಂಸಿ ಉಪಾಧ್ಯಕ್ಷ ಭುವನೇಶ್ವರ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯ ಸುಬ್ಬಯ್ಯ ವೈ.ಬಿ ಸ್ವಾಗತಿಸಿ ಶಿಕ್ಷಕ ನಿರೂಪಿಸಿದರು.
ಸುಳ್ಯದಲ್ಲಿ ಖ್ಯಾತ ಚಿತ್ರನಟ ಟೈಗರ್ ಪ್ರಭಾಕರ್ ಜನ್ಮದಿನ ಪ್ರಯುಕ್ತ ಮಿಮಿಕ್ರಿ ಮತ್ತು ಅನ್ನದಾನ , ಸುಳ್ಯ ಭಾವನಾ ಮೀಡಿಯಾ ಮತ್ತು ಚಂದನ ಸಾಹಿತ್ಯ ವೇದಿಕೆ ಆಯೋಜಿಸಿದ ಎಂ .ಬಿ ಫೌಂಡೇಶನ್ ಹಾಗೂ ಸುಳ್ಯದ ವಿಷ್ಣುವರ್ಧನ್ ಅಭಿಮಾನಿ ಸಂಘದ ಸಹಕಾರದಲ್ಲಿ ಖ್ಯಾತ ಚಿತ್ರನಟ ಟೈಗರ್ ಪ್ರಭಾಕ ರ್‍ರವರ ಜನ್ಮದಿನ ಪ್ರಯುಕ್ತ ಮಿಮಿಕ್ರಿ ಮತ್ತು ಅನ್ನದಾನ ಕಾರ್ಯಕ್ರಮವು ಸಾಂದೀಪ ವಿಶೇಷ ಶಾಲೆಯಲ್ಲಿ ಜರುಗಿತು.
ಭಾವನಾ ಮೀಡಿಯಾ ಸಂಚಾಲಕ ಜ್ಯೋತಿಷಿ, ಚಿತ್ರನಿರ್ದೇ ಶಕ ಎಚ್. ಭೀಮರಾವ್ ವಾಷ್ಠರ್ ರವರು ಸಮಾರಂಭದ ಅಧ್ಯಕ್ಷತೆ ವಹಿಸಿ” ಕನ್ನಡ ಚಿತ್ರರಂಗದ ಹುಲಿ ಎಂದೇ ಪ್ರಸಿದ್ಧರಾದ ಟೈಗರ್ ಪ್ರಭಾಕರ್ ಕನ್ನಡ ಚಿತ್ರರಂಗ ಕಂಡ ಅದ್ಭುತ ನಟ. ಸಹನಟನಾಗಿ, ಪೆÇೀಷಕ ನಟನಾಗಿ “ನಾಯಕ ನಟನಾಗಿ, ಛಾಯಾಗ್ರಾಹಕ
ನಾಗಿ, ನಿರ್ಮಾಪಕನಾಗಿ ಮತ್ತು ನಿರ್ದೇಶಕನಾಗಿ ಹಂತ ಹಂತವಾಗಿ ಚಿತ್ರರಂಗ ದಲ್ಲಿ ಮೇಲೇ ರಿದ ಮಹಾನ್ ಕಲಾವಿದ. 500ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ ಪ್ರಭಾಕರ್ ಪಂಚಭಾಷಾ ಚಿತ್ರನಟ. ಸಮಾಜ ಸೇವೆಯಲ್ಲಿ ತೊಡಗಿದ್ದ ನಟ ಹೃದಯವಂತರಾಗಿ ಕರುಣೆ ಉಳ್ಳವರಾಗಿದ್ದರು” ಎಂದರು. ಸಾಂದೀ ಪ ವಿಶೇಷ ಶಾಲೆಯ ಮು ಖ್ಯೋ ಪಾಧ್ಯಾಯರಾದ ಹರಿಣಿ ಸದಾಶಿವರವರು ಉದ್ಘಾಟಿಸಿ ಶುಭ ಹಾರೈಸಿದರು. ಸಂಪನ್ಮೂಲ ವ್ಯಕ್ತಿಯಾದ ಜೂನಿಯರ್ ಪ್ರಭಾಕರ್ (ಕುಂದಾ ಪುರ ನಾಗರಾಜ್) ರವರು 14 ಕಲಾವಿ ದರ ಮಿಮಿಕ್ರಿ ಮಾಡಿ ಕೆಲವು ಚಿತ್ರಗೀತೆ
ಗಳನ್ನು ಹಾಡಿ ಮನರಂಜಿಸಿದರು. ಮುಖ್ಯ ಅತಿಥಿಗಳಾಗಿ ಗುರುಸ್ವಾಮಿ ಬೀರಮಂಗಲ, ವಿಷ್ಣುವರ್ಧನ್ ಅಭಿ ಮಾನಿ ಸಂಘದ ಅಧ್ಯಕ್ಷ ಹರಿಶ್ಚಂ ದ್ರ ಪಂಡಿತ್ ಹಾಗೂ ಪ್ರವೀಣ್ ಗಣೇಶ್ ರೇಡಿಯೋ ಸುಳ್ಯ ಭಾಗವ ಹಿಸಿದ್ದರು. ವಿಷ್ಣುವರ್ಧನ್ ಸಂಘದ ಕಾರ್ಯದ ರ್ಶಿ ಜಬ್ಬಾರ್ ಉಪಸ್ಥಿತರಿ ದ್ದರು. ವಿಶೇಷ ಶಿಕ್ಷಕಿ ವನಿತಾರವರು ಸ್ವಾಗತಿಸಿ, ವಿಶೇಷ ಶಿಕ್ಷಕಿ ಸೌಮ್ಯ ವಂದಿಸಿದರು.
31.12.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು, ದಕ್ಷಿಣ…
ಹೊಸ ವರ್ಷದ ದಿನದಂದು ಸುಮಾರು ಒಂದು ಲಕ್ಷ ಹೂಗುಚ್ಛಗಳನ್ನು ಉಡುಗೊರೆಯಾಗಿ ನೀಡಲಾಗುತ್ತಿದೆ. ಪರಿಸರ…
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಆರ್.ಎಸ್ ಜಲಾಶಯ ಡಿಸೆಂಬರ್‌ನಲ್ಲೂ ಭರ್ತಿಯಾಗಿದ್ದು, ಗರಿಷ್ಠ ನೀರಿನ…
ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಭಾರತದಲ್ಲಿ 2015-2023 ರ ನಡುವೆ ಮಲೇರಿಯಾ ರೋಗ…
ಹೊಸ ವರ್ಷಾಚರಣೆಗೆ ಬೆಂಗಳೂರು ನಗರ ಸಜ್ಜಾಗುತ್ತಿದ್ದು ಇದಕ್ಕಾಗಿ ಗೃಹ ಇಲಾಖೆ ಮಾರ್ಗಸೂಚಿ ಬಿಡುಗಡೆ…
ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಮುಂದ್ರಾ ಬಂದರಿನಲ್ಲಿರುವ ಕಸ್ಟಮ್ಸ್ ವಿಶೇಷ ಗುಪ್ತಚರ ಮತ್ತು…