ಒಡೆದು ಹೋದ ಕನ್ನಡಿಗೆ
ಮನೆಯಲ್ಲಿ ಜಾಗವಿಲ್ಲ..
ಇದಕ್ಕೆ ಅವರದು ನೂರಾರು ಕಾರಣಗಳು…
ಅದೇಷ್ಟೋ ಸಲ ಒಡೆದ
ನನ್ನ ಮನಸ್ಸು ಕಂಡು ಅದು ದುಃಖಿಸಿತು….
ನನ್ನ ನಗುವಿಗೆ ಅದು ಜೊತೆಯಾಗಿತ್ತು
ನಲ್ಲನ ಸವಿನೆನಪಲ್ಲಿ ಮೈಮರೆತಾಗ
ಅದು ನಾಚುತ್ತಿತ್ತು……
ಆದರೆ ನಾನೇಕೆ ಹೀಗೆ…..?
ಸಣ್ಣ ಒಡಕು ಮೂಡಿತೆಂದು
ತಿಪ್ಪೆ ಗುಂಡಿಗೆ ಎಸೆದು ಬಿಟ್ಟೆ….
ನನ್ನ ಕಣ್ಣೀರ ಕಂಡು ಅದೆಂದೂ
ನಗಲಿಲ್ಲ..!
ಸೋತು ನಿಂತಾಗ ಹೀಯಾಳಿಸಲಿಲ್ಲ
ನಿಜ….!
ಅದು ನನ್ನ ಪಾಲಿಗೆ,
ವಾಸ್ತವತೆಯ ತಿಳಿಸುವ ಗುರು,
ಸಂಭ್ರಮಕ್ಕೆ ಜೊತೆಯಾಗುವ ಸ್ನೇಹ,
ಕಣ್ಣೀರ ಒರೆಸುವ ಜೊತೆಗಾರ
ಎಲ್ಲವೂ ಆಗಿತ್ತು…..
ಆದರೆ ಇಂದೇಕೆ ಹೀಗೆ..?
ಜೋಪಾನ ಮಾಡಿದ ಕೈಗಳೇ ಜಾರಿದೆ.
ಕನ್ನಡಿ ಚೂರಾಗಿದೆ ಒಡೆದ ನನ್ನ ಮನಸ್ಸಂತೆ !
ನನ್ನ ಮನಸ್ಸಿನ ಗಾಯಕ್ಕೆ
ಪ್ರೀತಿಯ ಮುಲಾಮು ಸಿಗಬಹುದು…
ಆದರೆ ಒಡೆದು ಚೂರಾದ ಕನ್ನಡಿಗೆ..?
ತಿಪ್ಪೆ ಗುಂಡಿಯೇ ಕೊನೆಯೇ..?
# ಅಪೂರ್ವ ಕೊಲ್ಯ
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel