Advertisement
ಸುದ್ದಿಗಳು

ಕನ್ನಡ ರಾಜ್ಯೋತ್ಸವ ಪ್ರಯುಕ್ತ ಮಾದಕ ವ್ಯಸನದ ವಿರುದ್ದ ಜನಸಂಚಲನ

Share
ಆತೂರು: ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಮಾದಕ ವ್ಯಸನದ ವಿರುದ್ಧ ಜನ ಸಂಚಲನ ಕಾರ್ಯಕ್ರಮವು ಆರೋಗ್ಯ ಕರ್ನಾಟಕ ಯುವ ಜನ ಜಾಗೃತಿ ಎಂಬ ನಾಮದೊಂದಿಗೆ
ಎಸ್.ಕೆ.ಎಸ್.ಎಸ್.ಎಫ್ ಆತೂರು ಕ್ಲಸ್ಟರ್ ಇದರ ವತಿಯಿಂದ ಶುಕ್ರವಾರ ಸಂಜೆ ರಾಮಕುಂಜ ಗ್ರಾಮದ ಗೋಳಿತ್ತಡಿಯಲ್ಲಿ ಅಝ್ಮಿಯಾ ಕಾಂಪ್ಲೆಕ್ಸ್ ವಠಾರದಲ್ಲಿ ಎಸ್.ಕೆ.ಎಸ್.ಎಸ್ ಎಫ್
ಆತೂರು ಕ್ಲಸ್ಟರ್ ಅಧ್ಯಕ್ಷರಾದ ಸಿದ್ಧೀಖ್ ನೀರಾಜೆ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಆತೂರಿನ ಸಯ್ಯಿದ್ ಮಹಮ್ಮದ್ ಜುನೈದ್ ಜಿಫ್ರಿ ತಂಙಳ್ ದುವಾ ನೆರವೇರಿಸಿ ಮಾತನಾಡಿ, ಮಾದಕ ವ್ಯಸನ ಎನ್ನುವುದು ಯಾವುದೇ ಧರ್ಮ ಅಥವಾ ಜಾತಿಗೆ ಸೀಮಿತವಾಗಿಲ್ಲ, ಎಲ್ಲಾ
ವರ್ಗಕ್ಕೂ ಈ ಅನಿಷ್ಟ ಆವರಿಸಿದೆ, ಇದನ್ನು ನಿರ್ಮೂಲನ ಮಾಡಬೇಕಾದರೆ ಯುವ ಜನತೆ ಮುಂದೆ ಬರಬೇಕು ಎಂದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಆತೂರು ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷರಾದ ಸಯ್ಯಿದ್ ಅನಸ್ ತಂಙಳ್ ಗಂಡಿಬಾಗಿಲು ಕನ್ನಡದ ಆಚರಣೆ ನ. 1ಕ್ಕೆ ಮಾತ್ರ ಸೀಮಿತವಾಗದೆ ನಿತ್ಯ ನಿರಂತರ ಹಬ್ಬವಾಗಬೇಕು, ಇಂದು ಕನ್ನಡದ ಬಳಕೆ ಎಲ್ಲಾ ಕ್ಷೇತ್ರದಲ್ಲೂ ಕಡಿಮೆಯಾಗಿದೆ, ನಾವು ನಮ್ಮ ಭಾಷೆಯ ಬಗ್ಗೆ ಅಭಿಮಾನ ಬೆಳೆಸಿಕೊಂಡು ಬಳಕೆ ಮಾಡಿದರೆ ಭಾಷೆ , ಸಂಸ್ಕೃತಿ ಉಳಿಯಬಹುದು ಎಂದೂ, ಮಾದಕ ವ್ಯಸನದ ಬಗ್ಗೆ ಇಂದು ಇದು ಒಂದು ಫ್ಯಾಷನ್ ಆಗಿ ಹೋಗಿದೆ, ಆದರೆ ಇದು ಮನುಕುಲಕ್ಕೆ ಮಾರಕವಾಗಿರುವುದರಿಂದ ಇದರ ವಿರುದ್ಧ ಜಾಗೃತಿ ಅನಿವಾರ್ಯವಾಗಿದೆ ಎಂದರು.
ಉಳ್ಳಾಲದ ಸಯ್ಯದ್ ಮದನಿ ಅರೆಬಿಕ್ ಕಾಲೇಜಿನ ವಿದ್ಯಾರ್ಥಿ ಅನೀಸ್ ಸಾಲ್ಮರು ಪ್ರಮೇಯ ಭಾಷಣ ಮಾಡಿ, ಆಂಗ್ಲ ಭಾಷೆಯ ವ್ಯಾಮೋಹದಿಂದಾಗಿ 2000 ವರ್ಷ ಇತಿಹಾಸ ಇರುವ ಆದಿದ್ರಾವಿಡ ಭಾಷೆಯಾದ ಕನ್ನಡಕ್ಕೆ ಅಪಾಯ ಬಂದೊದಗಿದೆ ಎಂದರು. ಎಸ್.ಕೆ.ಎಸ್.ಎಸ್ ಎಫ್ ಆತೂರು ಕ್ಲಸ್ಟರ್ ಸಂಘಟನೆ ಕಾರ್ಯದರ್ಶಿ ಅಬ್ದುರ್ರಝಾಖ್ ದಾರಿಮಿ ನೇರೆಂಕಿ ಟ್ರೈಸನೇರಿಯಂ ಸಂದೇಶ ಭಾಷಣ ಮಾಡಿದರು. ರಾಜೀವ್ ಗಾಂಧಿ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ಡಾ. ರಘು, ಸ. ಹಿ.ಪ್ರಾ ಶಾಲೆ ರಾಮಕುಂಜ ಇದರ ಮುಖ್ಯ ಶಿಕ್ಷಕ ಎಂ.ಮಹೇಶ್ ಮಾತನಾಡಿ ಶುಭ ಹಾರೈಸಿದರು.
ಎಸ್.ಕೆ.ಎಸ್.ಎಸ್ ಎಫ್ ಆತೂರು ಶಾಖೆ ಟ್ರೆಂಡ್ ಕಾರ್ಯದರ್ಶಿ ನಾಸೀರ್  ಎ.ಎಸ್ ಪ್ರತಿಜ್ಞಾ ವಿಧಿ ಭೋಧಿಸಿದರು. ಎಸ್.ಕೆ.ಎಸ್.ಬಿ.ವಿ ರೇಂಜ್ ವಿದ್ಯಾರ್ಥಿಗಳಿಂದ
ಕರಪತ್ರ ವಿತರಣೆ ಮಾಡಲಾಯಿತು.
Advertisement
Advertisement

ಕಾರ್ಯಕ್ರಮದಲ್ಲಿ ಆತೂರು ರೇಂಜ್ ಮದ್ರಸ ಮನೇಜ್ಮೆಂಟ್ ಅಸೋಸಿಯೇಶನ್ನ ಅಧ್ಯಕ್ಷರಾದ ಅಬ್ದುಲ್ ರಝಾಕ್ ಬಿ. ಕೆ ಆತೂರು, ಬದ್ರಿಯಾ ಶಾಲೆಯ ಆತೂರು ಇದರ ಸಂಚಾಲಕರಾದ ಆದಂ ಪಿಲಿಕುಡೆಲ್, ಅಯ್ಯುಬ್ ಹಾಜಿ ಅಮೈ, ರೇಂಜ್ ಮದ್ರಸ ಮೇನೇಜ್ಮೆಂಟ್ ಕಾರ್ಯದರ್ಶಿ ಮುಹಮ್ಮದ್ ರಫೀಖ್ ಗಂಡಿಬಾಗಿಲು, ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಕೋಶಾಧಿಕಾರಿ ಅಬ್ದುಲ್ ಅಝೀಝ್ ಬಿ.ಕೆ,  ಕೊಯಿಲಾ  ಗ್ರಾಮ ಫಂಚಾಯತ್ ಸದಸ್ಯ ಕೆ ಎ ಸುಲೈಮಾನ್, ರಾಮಕುಂಜ ಗ್ರಾಮ ಪಂಚಾಯತ್ ಸದಸ್ಯ ಅಬ್ದುಲ್ ರಹೀಮಾನ್, ಸಿರಾಜ್, ಇಸ್ಮಾಈಲ್ ತಂಙಳ್ ಉಪ್ಪಿನಂಗಡಿ, ಇಬ್ರಾಹಿಂ ಮಜಲ್ ಅತಿಥಿಗಳಾಗಿ ಭಾಗವಹಿಸಿದರು.

Advertisement

ಈ ಕಾರ್ಯಕ್ರಮದಲ್ಲಿ ಬದ್ರುದ್ದೀನ್ ಮುಸ್ಲಿಯಾರ್, ಅಬ್ದುಲ್ ರಝಾಕ್ ದಾರಿಮಿ ನೇರೆಂಕಿ, ಮುನೀರ್ ಅನ್ವರಿ, ಮೂಸಾ ಮುಸ್ಲಿಯಾರ್, ರೇಂಜ್ ಗೊಳಪಟ್ಟ ಮದ್ರಸಗಳ ಮುಖ್ಯಗುರುಗಳು, ಸಹಅಧ್ಯಾಪಕರು, ಆತೂರು ಕ್ಲಸ್ಟರ್ ಪ್ರಥಿನಿಧಿಗಲು ಜಕಾರಿಯಾ ಮುಸ್ಲಿಯಾರ್, B R ಅಬ್ದುಲ್ ಖಾದರ್, ಇಸ್ಮಾಈಲ್ ಪಾಲ್ಟಾಡಿ, ಅಶ್ರಫ್ ಕುದ್ಲೂರು, ಇಸ್ಮಾಈಲ್ ಆತೂರುಬೈಲು, ಹನೀಫ್ ಪೆರಿಯಡ್ಕ, ಹನೀಫ್ ನೀರಾಜೆ, ಖಲಾಂದರ್ ಗಂಡಿಬಾಗಿಲು, ಅಬ್ದುಲ್ ರಹೀಮಾನ್ ಅರ್ಷಾದಿ, ಅಜೀಜ್ ಪಾಲ್ಟಾಡಿ, ಉಮರುಲ್ ಫಾರೂಕ್.ಬಿ, ಸಿದ್ಧೀಖ್ ಎನ್, ಇಕ್ಬಾಲ್, ಜಂಇಯ್ಯತುಲ್ ಮುಅಲ್ಲಿಮೀನ್ ಪದಾಧಿಕಾರಿಗಳು, ಮದ್ರಸ ಮೇನೇಜ್ಮೆಂಟ್ ಪದಾಧಿಕಾರಿಗಳು, ಸೇರಿದಂತೆ ಹಲವಾರು ಕಾರ್ಯಕರ್ತರು ಭಾಗವಹಿಸಿದ್ದರು.

ಎಸ್.ಕೆ.ಎಸ್.ಎಸ್ ಎಫ್ ಕ್ಯಾಂಪಸ್ ವಿಂಗ್ ಆತೂರು ಕ್ಲಸ್ಟರ್ ಕನ್ವೀನರ್ ರಾಝಿಕ್ ಸ್ವಾಗತಿಸಿದರು. ಎಸ್.ಕೆ.ಎಸ್.ಎಸ್ ಎಫ್ ಆತೂರು ಕ್ಲಸ್ಟರ್ ಸದಸ್ಯ ರಫೀಕ್ ಗೊಳಿತ್ತಡಿ ಕಾರ್ಯಕ್ರಮವನ್ನು ನಿರೂಪಿಸಿ ಧನ್ಯವಾದ ಮಾಡಿದರು.

Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ನೀವು ನಿರಂತರವಾಗಿ ಹೆಡ್‌ಫೋನ್ ಬಳಸುತ್ತಿದ್ದರೆ ಜಾಗರೂಕರಾಗಿರಿ..! | ಕಿವಿಯ ಮೇಲೆ ಪರಿಣಾಮಗಳು…..

ಇತ್ತೀಚಿನ ದಿನಗಳಲ್ಲಿ, ಜನರು ಮೊಬೈಲ್ ಫೋನ್‌ಗಳನ್ನು(Mobile Phone) ಹಿಡಿದಿಟ್ಟುಕೊಳ್ಳುವ ಬದಲು ಇಯರ್‌ಫೋನ್(Ear Phone)…

19 hours ago

ಸೆಗಣಿಯಲ್ಲಡಗಿದೆ ಬೆಳೆಗೆ ಅವಶ್ಯಕ ಪೋಷಕಾಂಶಗಳು | ನೈಸರ್ಗಿಕ ಕೃಷಿಯಲ್ಲಿ ದೇಸೀ ಗೋವಿನ ಮಹತ್ವ ಬಹಳ ಮುಖ್ಯ |

ಸಸ್ಯಗಳು ಆರೋಗ್ಯಪೂರ್ಣವಾಗಿರಬೇಕಾದರೆ ಸರಿಯಾದ ಪೋಷಕಾಂಶಗಳು ಬೇಕು. ಗೋವಿನ ಸಗಣಿಯಲ್ಲಿ(Cow dung) ಪೂರ್ಣ ಪ್ರಮಾಣದ…

20 hours ago

ಗದಗ ಜಿಮ್ಸ್ ಆಸ್ಪತ್ರೆಗೆ ತಟ್ಟಿದ ಬರದ ಬಿಸಿ | ನೀರಿಲ್ಲದೆ ರೋಗಿಗಳ ಪರದಾಟ | ದಾರಿಕಾಣದಾದ ಸಿಬ್ಬಂದಿಗಳು

ರಾಜ್ಯದ ಕೆಲ ಭಾಗಗಳಲ್ಲಿ ಚೆನ್ನಾಗಿ ಮಳೆಯಾಗುತ್ತಿದೆ(Heavy Rain). ನೀರಿಲ್ಲದೆ ಬೇಸತ್ತಿದ್ದ ಜನ ಜಾನುವಾರುಗಳು…

20 hours ago

ಹವಾಮಾನ ಸಂಕಷ್ಟ | ಕಾದ ಭೂಮಿಗೆ ‘ರೆಡ್‌ ಅಲರ್ಟ್‌’ | ಜಗತ್ತಿನ ತಾಪಮಾನ 1.5 ಡಿಗ್ರಿ ಇಳಿಕೆ ಸಾಧ್ಯವಾಗುತ್ತಿಲ್ಲ…!

ಹವಾಮಾನ ವೈಪರೀತ್ಯ, ತಾಪಮಾನ ಏರಿಕೆ ಜಗತ್ತಿನಲ್ಲಿ ಬಹುದೊಡ್ಡ ಸಮಸ್ಯೆಯಾಗಿದೆ. ಆಹಾರ ಉತ್ಪಾದನೆ ಮೇಲೂ…

20 hours ago

Karnataka Weather | 17-05-2024 | ಹೆಚ್ಚಿನ ಕಡೆಗಳಲ್ಲಿ ಗುಡುಗು ಸಹಿತ ಮಳೆ | ಮೇ 22ರ ನಂತರ ವಾಯುಭಾರ ಕುಸಿತ ಸಾಧ್ಯತೆ |

ಮೇ 22ರ ನಂತರ ಪ್ರಭಲ ಮುಂಗಾರು ಮಾರುತಗಳು ಅಂಡಮಾನ್ ಕಡೆ ಚಲಿಸುವುದರಿಂದ ಬಂಗಾಳಕೊಲ್ಲಿಯಲ್ಲಿ…

22 hours ago