Advertisement

ಕರೆಂಟ್ ಕೈಕೊಟ್ಟರೆ ಈ ಮನೆ ಬೆಳಗಲು ತೊಂದರೆ ಇಲ್ಲ…!

Share

ಗ್ರಾಮೀಣ ಭಾಗದಲ್ಲಿ ಬೇಸಗೆಯಲ್ಲಿ ಪವರ್ ಕಟ್, ಮಳೆಗಾಲದಲ್ಲೂ ಪವರ್ ಕಟ್..!. ಬೇಸಗೆಯಲ್ಲಿ ಎಲ್ಲಾ ಕಡೆ ಇರುವಂತೆಯೇ ವಿದ್ಯುತ್ ಕಡಿತ ಇದ್ದೇ ಇರುತ್ತದೆ. ಮಳೆಗಾಲದಲ್ಲಿ ಬೇರೆಯದೇ ಸಮಸ್ಯೆ. ಕಾಡಿನ ಒಳಗೆ, ಗುಡ್ಡ, ತೋಟದ ಒಳಗೆ ವಿದ್ಯುತ್ ತಂತಿ ಹಾದುಹೋಗುವ ಕಾರಣ ಸಣ್ಣ ಗಾಳಿಗೆ ಮರದ ಗೆಲ್ಲು ಬೀಳುವುದು, ತಾಗುವುದು  ಆಗಿ ಟ್ರಿಪ್ ಆಗುತ್ತಲೇ ಇರುತ್ತದೆ. ಮೆಸ್ಕಾಂ ಸಿಬಂದಿಗಳು ನಿರಂತರ ಶ್ರಮ ಪಡುತ್ತಾರೆ. ಹಾಗಿದ್ದರೂ ರಾತ್ರಿ ವೇಳೆ ಯಾವುದೇ ಕೆಲಸ ಮಾಡಲು ಕಷ್ಟ. ಇಂತಹ ಸಂದರ್ಭದಲ್ಲಿ  ಗ್ರಾಮೀಣ ಭಾಗದ ಮನೆಗೆ ಬೆಳಗಾಗುವುದು  ಕಿರು ಜಲವಿದ್ಯುತ್..! , ಈ ಕಡೆಗೆ ನಮ್ಮ ಇಂದಿನ ಬೆಳಕು…

Advertisement
Advertisement
Advertisement

 

Advertisement

ಸುಳ್ಯ: ಕೆಲವು ವರ್ಷಗಳ ಹಿಂದೆ ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮದ ಕೆಲವು ಪ್ರದೇಶಗಳಲ್ಲಿ  ವಿದ್ಯುತ್ ಸಂಪರ್ಕ ಇರಲಿಲ್ಲ. ಕಾಡಿನ ಮೂಲಕ ವಿದ್ಯುತ್ ತಂತಿ ಹಾದುಹೋಗಬೇಕಾಗಿರುವ ಕಾರಣದಿಂದ ಸಮಸ್ಯೆ ಇತ್ತು. ಹೀಗಾಗಿ ಈ ಸಂದರ್ಭ ಇಲ್ಲಿನ ಹಲವು ಮನೆಗಳ ನೆರವಿಗೆ ಬಂದದ್ದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ. ಯೋಜನೆಯ ಮೂಲಕ ಕಿರು ಜಲವಿದ್ಯುತ್ ಘಟಕ ಅಳವಡಿಸಿ ನೀರಿನ ಮೂಲಕ ವಿದ್ಯುತ್ ಉತ್ಪಾದಿಸಿ ಮನೆ ಬೆಳಗಿಸಿದರು. ಇಂದು ವಿದ್ಯುತ್ ಸಂಪರ್ಕ ಆದರೂ ಹಲವು ಮನೆಗಳು ಇದೇ ವಿದ್ಯುತ್ ಬಳಕೆ ಮಾಡುತ್ತಿದ್ದಾರೆ.

 

Advertisement

 

Advertisement

ಮಡಪ್ಪಾಡಿ ಗ್ರಾಮದ ಪಣೆಯಾಲ ಸೀತಾರಾಮ ಅವರ ಪುತ್ರ ಭರತ್ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯ. ಕೆಲವು ವರ್ಷಗಳಿಂದ ಸಂಘದಲ್ಲಿ ಕೆಲಸ ಮಾಡುತ್ತಾರೆ.  ಮನೆಗೆ ವಿದ್ಯುತ್ ಯೋಜನೆಗಾಗಿ ಕಿರುಜಲವಿದ್ಯುತ್ ಘಟಕವನ್ನು ಗ್ರಾಮಾಭಿವೃದ್ಧಿ ಯೋಜನೆ ಪರಿಚಯ ಮಾಡಿದಾಗ ತಾನೂ ಅದನ್ನು ಹಾಕಿಸಿಕೊಂಡರು. 5 ಸಾವಿರ ರೂಪಾಯಿ ವೆಚ್ಚದ ಕಿರು ಘಟಕ ಅದು. ಈ ಘಟಕದಲ್ಲಿ 6 ಸಿ ಎಫ್ ಎಲ್ ಬಲ್ಬ್ ಉರಿಯುತ್ತದೆ. ಆದರೆ ಭರತ್ ಅವರು 15 ಸಾವಿರ ರೂಪಾಯಿ ಸಾಲ ಪಡೆದು ಬ್ಯಾಟರಿ ಅಳವಡಿಕೆ ಮಾಡಿ ಅದನ್ನು ಚಾರ್ಜ್ ಮಾಡಿಕೊಂಡು ಇಡೀ ದಿನ ಮನೆ ಬೆಳಗುವಂತೆ ಮಾಡಿದರು.  ಇದಕ್ಕೆ 3 ಸಾವಿರ ರೂಪಾಯಿ ಅಂದು ಸಹಾಯಧನವೂ ದೊರೆತಿದೆ.

 

Advertisement

 

Advertisement

ಈ ಯಂತ್ರಕ್ಕೆ ಒಂದು ಇಂಚಿನಷ್ಟು ನೀರು ಸರಾಗವಾಗ ಬರಬೇಕು. ಗುಡ್ಡದಿಂದ ಬರುವ ನೀರುನ್ನು ಪೈಪ್ ಮೂಲಕ ಈ ಕಿರು ಜಲವಿದ್ಯುತ್ ಘಟಕಕ್ಕೆ ವೇಗವಾಗಿ ಬೀಳುವಂತೆ ಮಾಡಿದಾಗ ಘಟಕ ತಿರುತ್ತದೆ, ವಿದ್ಯುತ್ ಹರಿಯುತ್ತದೆ. ಮನೆ ಬೆಳಗುತ್ತದೆ. 10 ವರ್ಷಗಳಿಂದ ಈ ಕಿರುಜಲವಿದ್ಯುತ್ ಘಟಕ ಚಾಲೂ ಆಗುತ್ತಿದೆ, ಯಾವುದೇ ಸಮಸ್ಯೆ ಆಗಿಲ್ಲ ಎನ್ನುತ್ತಾರೆ ಭರತ್.  ಮನೆಯ ವಿದ್ಯುತ್ ಬಿಲ್ ಶೇ.50 ರಷ್ಟು ಕಡಿಮೆಯಾಗಿದೆ  ಎನ್ನುತ್ತಾರೆ ಅವರು. ಮಳೆಗಾಲ ಸುಮಾರು 5 ತಿಂಗಳು ಹಗಲು ರಾತ್ರಿ ವಿದ್ಯುತ್ ಬಂದರೆ ಬೇಸಗೆಯಲ್ಲಿ ಮಾತ್ರಾ ಕಷ್ಟವಾಗುತ್ತದೆ. ಆಗ ವಿದ್ಯುತ್ ಬಳಕೆ ಮಾಡುತ್ತೇವೆ ಎನ್ನುತ್ತಾರೆ.

 

Advertisement

 

Advertisement

ಮಡಪ್ಪಾಡಿಯ ವಿವಿಧ ಪ್ರದೇಶಗಳಲ್ಲಿ  ಇಂತಹ ಕಿರುಜಲ ವಿದ್ಯುತ್ ಘಟಕಗಳು ಇವೆ. ಕೆಲವು ಕಡೆ ನೀರಿನ ಲಭ್ಯತೆ ಹೆಚ್ಚಿದ್ದ ಕಡೆಗಳಲ್ಲಿ ದೊಡ್ಡ ಕಿರುಜಲವಿದ್ಯುತ್ ಅಳವಡಿಕೆ ಮಾಡಲಾಗಿದೆ, ಅಲ್ಲಿ ಟಿವಿಯಿಂದ ತೊಡಗಿ ಮಿಕ್ಸಿ, ಗ್ರೈಂಡರ್ ಕೂಡಾ ಚಾಲೂ ಮಾಡುತ್ತಾರೆ. ಗ್ರಾಮೀಣ ಭಾಗದ ಜನರಿಗೆ ಇದು ಉಪಯುಕ್ತವಾಗಿದೆ. ವಿದ್ಯುತ್ ಉಳಿತಾಯವೂ ಆಗಿದೆ. – ಪ್ರೇಮಾ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾಪ್ರತಿನಿಧಿ, ಮಡಪ್ಪಾಡಿ

 

Advertisement

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಅಡಿಕೆ ಬೆಳೆಗಾರರು ಏಕೆ ಜಾಗ್ರತರಾಗಬೇಕಿದೆ..?

ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…

11 hours ago

ಮೊಗ್ರದಲ್ಲಿ ಕಾಲಾವಧಿ ನೇಮ

https://youtu.be/YgcAfgYUbGQ?si=vp1TmN5dQYAkVPBy

1 day ago

ಸಿರಿಧಾನ್ಯ  ಬಳಕೆ  ಕುರಿತು  ಕೃಷಿ ಇಲಾಖೆಯಿಂದ  ಸಿರಿಧಾನ್ಯ ಓಟ

ಸಿರಿಧಾನ್ಯಗಳ  ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು  ಕೃಷಿ ಇಲಾಖೆ  “ಸಿರಿಧಾನ್ಯ ಓಟ…

3 days ago

ಬೆಂಗಳೂರಿನಲ್ಲಿ ತುಂತುರು ಮಳೆ | ರಾಜ್ಯಾದ್ಯಂತ ಮುಂದಿನ ಐದು ದಿನ ಮಳೆ ಸಾಧ್ಯತೆ

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…

3 days ago

ಹವಾಮಾನ ವರದಿ | 19.01.2025 | ಇಂದು ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಕೃಷಿಕರೇ ಇರಲಿ ಎಚ್ಚರ |

20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…

3 days ago