Advertisement
ಸುದ್ದಿಗಳು

ಕರ್ನಾಟಕ ಸೆಕ್ಷನ್ ಮ್ಯಾನೇಜಿಂಗ್ ಕಮಿಟಿಗೆ ಶಶಾಂಕ್.ಎಂ. ಗೌಡ ಆಯ್ಕೆ

Share

ಸುಳ್ಯ: ಕರ್ನಾಟಕ ಸೆಕ್ಷನ್ ಮ್ಯಾನೇಜಿಂಗ್ ಕಮಿಟಿಯ ಸದಸ್ಯತನಕ್ಕೆ ಇಂಡಿಯನ್ ಸೊಸೈಟಿ ಫಾರ್ ಟೆಕ್ನಿಕಲ್ ಎಜುಕೇಷನ್ ನವದೆಹಲಿ ನಡೆಸಿದ ಚುನಾವಣೆಯಲ್ಲಿ ಸುಳ್ಯದ ಶಶಾಂಕ್ ಎಂ.ಗೌಡ ಅತ್ಯಧಿಕ ಮತಗಳಿಸಿ ಆಯ್ಕೆಯಾಗಿದ್ದಾರೆ.

ಇವರು ಮೂಡಬಿದಿರೆಯ ಯೆನೆಪೊಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಂಡಿಯನ್ ಸೊಸೈಟಿ ಫಾರ್ ಟೆಕ್ನಿಕಲ್ ಎಜುಕೇಷನ್ ನಡೆಸಿದ ಚುನಾವಣೆಗೆ ಕರ್ನಾಟಕದಿಂದ ಒಟ್ಟು ಹದಿನೆಂಟು ಸಾವಿರ ಮತಗಳಿದ್ದವು. ಕರ್ನಾಟಕ
ದಿಂದ ಹನ್ನೆರಡು ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಈ ಚುನಾವಣೆಗೆ ಇದರಲ್ಲಿ ಐದು ಮಂದಿಯಷ್ಟೇ ಆಯ್ಕೆಯಾಗಿದ್ದಾರೆ. ಈ ಸದಸ್ಯತ್ವವು 2020ರಿಂದ 2024ರವರೆಗೆ 5 ವರ್ಷಗಳ ಅವಧಿಯದ್ದಾಗಿರುತ್ತದೆ.

ಇವರು ಸುಳ್ಯ ಕೆ.ವಿ.ಜಿ. ಪಾಲಿಟೆಕ್ನಿಕ್‌ನಲ್ಲಿ ಆಯ್ಕೆ ಶ್ರೇಣಿ ಉಪನ್ಯಾಸಕರಾಗಿರುವ ಮಧುಕುಮಾರ್ ಬಿ. ಆರ್ ಮತ್ತು ಬಿ.ಟಿ.ಜಯಲಕ್ಷ್ಮಿಯವರ ಪುತ್ರ. ಇವರ ಪತ್ನಿ ಭಾರ್ಗವಿ ಕೆ.ಅರ್. ಮೂಡುಬಿದಿರೆ ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಗೆಲುವಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ವಿಭಾಗ ಮುಖ್ಯಸ್ಥರು, ಉಪನ್ಯಾಸಕರು, ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 05-10-2026 | ಅರಬ್ಬಿ ಸಮುದ್ರದ ಮೇಲ್ಮೈ ಸುಳಿಗಾಳಿಯಿಂದ ಮಳೆ – ಅ.6 ರ ಬಳಿಕ ಏನಾಗಲಿದೆ?

ಅರಬ್ಬಿ ಸಮುದ್ರದ ಉಡುಪಿ–ದಕ್ಷಿಣ ಕನ್ನಡ ಕರಾವಳಿ ಸಮೀಪ ರೂಪುಗೊಂಡಿರುವ ಮೇಲ್ಮೈ ಸುಳಿಗಾಳಿಯಿಂದ ಕರಾವಳಿ,…

2 hours ago

ಅಡಿಕೆ ದರ ಇಳಿಯುತ್ತದೆ, ಕೂಲಿ ಏರುತ್ತದೆ ; ಬೆಳೆಗಾರನಿಗೆ ಉಳಿಯುವುದೇನು?

ಅಡಿಕೆ ದರ ಕುಸಿಯುತ್ತಿರುವ ಸಂದರ್ಭದಲ್ಲಿ ಕೃಷಿ ಕೂಲಿ ದರ ನಿರಂತರವಾಗಿ ಏರುತ್ತಿರುವುದು ಮಲೆನಾಡಿನ…

1 day ago

ಕಸೂತಿ ಕಲಿತು ಸ್ವಾವಲಂಬನೆಯತ್ತ ಗ್ರಾಮೀಣ ಮಹಿಳೆಯರು

ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮದಲ್ಲಿ ಗ್ರಾಮೀಣ ಮಹಿಳೆಯರಿಗೆ ಒಂದು ತಿಂಗಳ ಉಚಿತ ಮಗ್ಗಂ…

1 day ago

ಕರ್ನಾಟಕದಲ್ಲಿ ಬರದ ಹೊಡೆತ – ಬೆಳೆ ನಷ್ಟ ₹60 ಸಾವಿರ ಕೋಟಿವರೆಗೆ ಸಾಧ್ಯತೆ

ಕರ್ನಾಟಕದ ಬರ ಪರಿಸ್ಥಿತಿಯಿಂದ ಉಂಟಾಗಿರುವ ಬೆಳೆ ನಷ್ಟ ₹50 ಸಾವಿರ ಕೋಟಿಯಿಂದ ₹60…

1 day ago

ದಾಖಲೆಗಳಿಲ್ಲದೆ ಜಾನುವಾರು ಸಾಗಿಸಿದ ಮಾತ್ರಕ್ಕೆ ವಧೆಗಾಗಿ ಸಾಗಿಸಲಾಗುತ್ತಿದೆ ಎಂದು ಊಹಿಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್

ದಾಖಲೆಗಳಿಲ್ಲದೆ ಜಾನುವಾರು ಸಾಗಿಸಿರುವುದನ್ನು ಮಾತ್ರ ಆಧಾರವಾಗಿಟ್ಟುಕೊಂಡು ವಧೆಗಾಗಿ ಸಾಗಿಸಲಾಗುತ್ತಿದೆ ಎಂದು ಊಹಿಸಲು ಸಾಧ್ಯವಿಲ್ಲ…

1 day ago

ಹವಾಮಾನ ವರದಿ | 3-10-2026 | ಬಂಗಾಳಕೊಲ್ಲಿಯಿಂದ ತೇವಾಂಶದ ಗಾಳಿ – ಕರ್ನಾಟಕದಲ್ಲಿ ಮತ್ತೆ ಮಳೆ?

ಬಂಗಾಳಕೊಲ್ಲಿಯಿಂದ ತಮಿಳುನಾಡು ಮೂಲಕ ತೇವಾಂಶದ ಗಾಳಿ ರಾಜ್ಯದ ದಕ್ಷಿಣ ಒಳನಾಡಿನತ್ತ ಬೀಸುವ ಸಾಧ್ಯತೆಯಿಂದ…

2 days ago