ಖಾಸಗಿ ಟೆಲಿಕಾಂ ಕಂಪೆನಿಯೊಂದು ಕಲ್ಮಡ್ಕ ಸಂಪರ್ಕಿಸುವ ಮುಖ್ಯ ರಸ್ತೆಯ ಬದಿಗಳೆರಡರಲ್ಲಿ ಗುಂಡಿಗಳನ್ನು ಅಗೆದ ಪರಿಣಾಮ ರಸ್ತೆಯು ಹಾಳಾಗಿದ್ದು, ವಾಹನ ಸವಾರರು ಸದಾ ಜೀವ ಭಯದಲ್ಲಿ ಸಂಚರಿಸುವ ಪರಿಸ್ಥಿತಿ ಉಂಟಾಗಿದೆ.
ಕಲ್ಮಡ್ಕದಿಂದ ಕಾಪಡ್ಕದವರೆಗೆ ಖಾಸಗಿ ಕಂಪೆನಿಯೊಂದು ಜಿಲ್ಲಾ ಪಂಚಾಯತ್ ಇಜಿನಿಯರಿಂಗ್ ಇಲಾಖೆ ಅನುಮತಿ ಪಡೆದು ಕೇಬಲ್ ಅಳವಡಿಸಲು ರಸ್ತೆಯ ಎರಡೂ ಬದಿಗಳಲ್ಲಿ ಗುಂಡಿಗಳನ್ನು ತೋಡಿಟ್ಟಿದೆ. ಈಗ ಮಳೆಗಾಲದ ಸಂದರ್ಭವಾಗಿದ್ದರೂ ಗುಂಡಿಗಳನ್ನು ಮುಚ್ಚದ ಕಾರಣ ಅವುಗಳಲ್ಲಿ ನೀರು ನಿಂತು ರಸ್ತೆಯ ಮೇಲೂ ಹರಿಯುತ್ತಿದೆ. ಇದರಿಂದ ಸಂಚಾರ ನಡೆಸುವುದೇ ನಿತ್ಯ ಸವಾರರ ದೈನಂದಿನ ಸಾಹಸವಾಗಿದೆ.
ಕಲ್ಮಡ್ಕ ಮುಖ್ಯ ರಸ್ತೆಯ ನಾಲ್ಕು ಮೋರಿಗಳಿಗೆ ಈ ಗುಂಡಿಗಳಿಂದ ಹಾನಿಯಾಗಿದ್ದು, ಚರಂಡಿ ನೀರು ಸರಾಗವಾಗಿ ಹರಿದು ಹೋಗಲು ಅಡಚಣೆಯಾಗಿದೆ. ಕುಲಾಯಿ ತೋಟದ ತಡೆಗೋಡೆಗೂ ಹಾನಿಯಾಗಿದೆ. ಸಾರ್ವಜನಿಕ ಮೋರಿಯನ್ನು ಹಾಳುಗೆಡವಿದ ಬಗ್ಗೆ ಕಲ್ಮಡ್ಕ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮ ಸಭೆಯಲ್ಲಿಯೂ ಪ್ರಸ್ತಾಪಿಸಲಾಗಿತ್ತು:ಕಲ್ಮಡ್ಕ ರಸ್ತೆ ಹೊಂಡಗಳಿಂದ ಕೂಡಿದ್ದು ಸಂಚರಿಸಲು ತೀವ್ರ ತೊಂದರೆಯಾಗುತ್ತಿದೆ.ಈ ಮಧ್ಯೆ ಮೊಬೈಲ್ ನೆಟ್ವರ್ಕ್ ಕಂಪೆನಿಯೊಂದು ಅಗೆದಿರುವ ಗುಂಡಿಗಳಿಂದ ರಸ್ತೆಯ ಸ್ಥಿತಿ ಮತ್ತಷ್ಟು ದುಸ್ತರಗೊಂಡಿದೆ ಎಂದು ಗ್ರಾಮಸ್ಥರು ಕಳೆದ ವಾರ ಪಡ್ಪಿನಂಗಡಿಯಲ್ಲಿ ನಡೆದ ಕಲ್ಮಡ್ಕ ಗ್ರಾಮ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ರಸ್ತೆಯ ಮೇಲೆ ಷರಂಡಿ ನೀರು ಹರಿಯುತ್ತಿದ್ದು, ಹಾನಿಗೊಳಗಾದ ಮೋರಿಗಳನ್ನು ಹಾಗು ಶೀಘ್ರ ದುರಸ್ಥಿಗೊಳಿಸಬೇಕೆಂದು ಆಗ್ರಹಿಸಿದ್ದರು.
700 ಮೀ.ರಸ್ತೆ ಸಂಪೂರ್ಣ ಹಾಳಾಗಿದೆ:
ದುರಸ್ಥಿಯಾಗಿದ್ದಾಗ ಮರು ಡಾಮರೀಕರಣವಾಗಿದ್ದ ಕಲ್ಮಡ್ಕ ರಸ್ತೆಯ ಸುಮಾರು 700ಮೀ. ಭಾಗ ಹಾಳಾಗಿ ಹೋಗಿದೆ. ಕಾನೂನು ಪ್ರಕಾರ ರಸ್ತೆಯ ಚರಂಡಿಯಿಂದ ದೂರದಲ್ಲಿ ಗುಂಡಿ ಅಗೆಯಬೇಕಿತ್ತು. ಆದರೆ ಜೆಸಿಬಿ ಮೂಲಕ ರಸ್ತೆ ಬದಿಯಲ್ಲೆ ಗುಂಡಿ ಅಗೆದು ಮಣ್ಣನ್ನು ಚರಂಡಿಗೆ ಹಾಕಿರುವುದೇ ಇದಕ್ಕೆ ಕಾರಣವೆಂದು ಸ್ಥಳೀಯರು ದೂರುತ್ತಿದ್ದಾರೆ.
ರಸ್ತೆಯ ಬದಿಯೇ ಗುಂಡಿ ತೆಗೆದು ಚರಂಡಿಗೆ ಮಣ್ಣು ಹಾಕಿದ ಕಾರಣ ರಸ್ತೆಯೆಲ್ಲ ಹಾಳಾಗಿ ಹೋಗಿದೆ. ದ್ವಿಚಕ್ರ ವಾಹನ ಸವಾರರು ಸಹಿತ ಎಲ್ಲರಿಗೂ ಈ ಮಾರ್ಗದಲ್ಲಿ ಸಂಚರಿಸಲು ತೊಂದರೆ ಹಾಗು ಭಯವಾಗುತ್ತಿದೆ. ಚರಂಡಿ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆ ಕಲ್ಪಿಸಿ, ರಸ್ತೆ ಹಾಗು ಮೋರಿಯನ್ನು ಶೀಘ್ರ ದುರಸ್ತಿಗೊಳಿಸಿ-
ಜಯರಾಜ್ ನಡ್ಕ, ಗ್ರಾಮಸ್ಥಗುಂಡಿ ಮುಚ್ಚಲು ಕ್ರಮಕೈಗೊಳ್ಳಲಾಗಿದೆ. ಕಳೆದ 5-6 ದಿನಗಳಿಂದ ರಸ್ತೆಯನ್ನು ಸರಿಪಡಿಸುವ ಕಾರ್ಯವನ್ನು ಜಿ.ಪಂ ಎಂಜಿನಿಯರ್ ಇಲಾಖೆಯಿಂದ ಮಾಡಿದ್ದೇವೆ. ಮಳೆಯ ಕಾರಣದಿಂದ ರಸ್ತೆಯು ಕೆಸರುಮಯವಾಗಿದೆ. ಜಿಯೋ ಸಂಸ್ಥೆಯವರಿಗೆ ಬೇಸಿಗೆಯಲ್ಲಿ ಕಾಮಗಾರಿ ನಡೆಸಲು ಅನುಮತಿ ನೀಡಲಾಗಿತ್ತು. ಮಳೆಗಾಲದಲ್ಲಿ ಕಾಮಗಾರಿ ನಡೆಸಿದ ಪರಿಣಾಮ ಒಂದೆರಡು ಕಡೆ ರಸ್ತೆಹಾಳಾಗಿದೆ – ಹನುಮಂತರಾಯಪ್ಪ, ಜಿ.ಪಂ ಎಂಜಿನಿಯರಿಂಗ್ ಉಪವಿಭಾಗ ಸುಳ್ಯ
Advertisement
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…