ಬೆಳ್ಳಾರೆ: ಶುಚಿತ್ವದ ಕುರಿತು ಮಾಹಿತಿ ನೀಡುವ ಸಲುವಾಗಿ ಕಳಂಜ ಗ್ರಾಮ ಪಂಚಾಯತ್ ವತಿಯಿಂದ ಗ್ರಾಮದೊಳಗಿನ ಅಂಗಡಿಗಳಿಗೆ ಭೇಟಿ ನೀಡುವ ಕಾರ್ಯಕ್ರಮ ನಡೆಯಿತು.
Advertisement
ಶುಚಿತ್ವದ ಕುರಿತು ಮಾತನಾಡುತ್ತಾ ಪಂಚಾಯತ್ ಅಭಿವೃದ್ದಿ ಅಧಿಕಾರಿ ತ್ಯಾಜ್ಯವನ್ನು ಬೆಂಕಿ ಹಾಕಿ ಸುಡಬಾರದು. ಪ್ಲಾಸ್ಟಿಕ್ ತ್ಯಾಜ್ಯವನ್ನು ಶುಚಿ ಹಾಗೂ ವಿಂಗಡಿಸಿ ಸಂಗ್ರಹಿಸಿಟ್ಟು ನಂತರ ಪಂಚಾಯತ್ ಗೆ ತೆಗೆದುಕೊಂಡು ಹೋಗಲು ಕರೆಮಾಡಿ ತಿಳಿಸಬೇಕು ಎಂದರು. ಅದರೊಂದಿಗೆ ಷರತ್ತು ತಪ್ಪಿ ಅವೈಜ್ಞಾನಿಕ ರೀತಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿ ಮಾಡಿದಲ್ಲಿ ಕಾನೂನು ಪ್ರಕಾರ ಅಂಗಡಿಯ ಪರವಾನಿಗೆಯನ್ನು ರದ್ದುಗೊಳಿಸಿ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
Advertisement
ಕಾರ್ಯಕ್ರಮದಲ್ಲಿ ಪ್ರತಿಯೊಂದು ಅಂಗಡಿಗೂ ಶುಚಿತ್ವ ನಿರ್ವಹಣೆ ಕುರಿತು ಪಂಚಾಯತ್ ವತಿಯಿಂದ ಮಾಹಿತಿ ಹಾಗೂ ಸೂಚನೆಗಳನ್ನು ನೀಡಲಾಯಿತು. ಗ್ರಾಮ ಪಂಚಾಯತ್ ಅಧ್ಯಕ್ಷೆ ಯಶೋದಾ, ಉಪಾಧ್ಯಕ್ಷ ಹಾಗು ಪಂಚಾಯತ್ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement