Advertisement
ರಾಜ್ಯ

ಕಸಾಯಿಖಾನೆಯಿಂದ ರಕ್ಷಿಸಲ್ಪಟ್ಟ ಓಂಗೋಲ್ ತಳಿಯ ಹೋರಿಗಳು

Share

ಕಾಸರಗೋಡು: ಕಸಾಯಿಖಾನೆಗೆ ಮಾರಾಟವಾಗಿದ್ದ ಹೋರಿಗಳಿಗೆ ಜೀವದಾನ ನೀಡಿದ ಘಟನೆ ಕಾಸರಗೋಡಿನಲ್ಲಿ ನಡೆದಿದೆ.

Advertisement
Advertisement
Advertisement
Advertisement

ಕಾಸರಗೋಡಿನಲ್ಲಿ ಕಸಾಯಿಖಾನೆಗೆ ಮಾರಾಟವಾಗಿದ್ದ ಓಂಗೋಲ್ ತಳಿಯ ಐದು ಹೋರಿಗಳನ್ನು ರಕ್ಷಿಸಲಾಗಿದೆ.  ಶ್ರೀರಾಮಚಂದ್ರಾಪುರ ಮಠದ ಗೋಸಂಜೀವಿನಿ ಯೋಜನೆಯಡಿ ಕಟುಕರಿಂದ ಖರೀದಿಸಿ ಹೋರಿಗಳಿಗೆ ಜೀವದಾನ ಮಾಡಲಾಗಿದೆ.

Advertisement

ಕಸಾಯಿಖಾನೆಗೆ ಮಾರಾಟ ಮಾಡಲು  ಮಧ್ಯವರ್ತಿಯೊಬ್ಬರು ಆಂಧ್ರಪ್ರದೇಶದಿಂದ ಐದು ಎತ್ತುಗಳನ್ನು ಖರೀದಿಸಿ ತಂದು ರಸ್ತೆ ಬದಿಯಲ್ಲಿ ಕಟ್ಟಿದ್ದರು. ಓಂಗೋಲ್ ತಳಿಯ ಈ ಐದು ಎತ್ತುಗಳು ವಧಾಸ್ಥಾನಕ್ಕೆ ಮಾರಾಟವಾಗಿವೆ ಎಂಬ ಮಾಹಿತಿ ದೊರೆತ ತಕ್ಷಣ, ಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿಯವರ ಮಾರ್ಗದರ್ಶನದಲ್ಲಿ, ಶ್ರೀಮಠದ ಕಾಮದುಘಾ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿ ಕಟುಕರ ಜತೆ ಮಾತುಕತೆ ನಡೆಸಿದರು. ಅದಕ್ಕೆ ತಗಲುವ ವೆಚ್ಚ ಪಾವತಿಸಿ ಹೋರಿಗಳನ್ನು ವಧೆ ಮಾಡದಂತೆ ಕೋರಿದರು. ಅದರಂತೆ 3.2 ಲಕ್ಷ ರೂಪಾಯಿ ವೆಚ್ಚದಲ್ಲಿ ಐದು ಹೋರಿಗಳನ್ನು ಖರೀದಿಸಿ, ಪೂಚಕ್ಕಾಡು ಗೋಶಾಲೆಗೆ ಕಳುಹಿಸಲಾಗಿದೆ.

ಬೆಳಗ್ಗೆ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿ ಗೋಸಂರಕ್ಷಣೆಗೆ ನೆರವು ನೀಡುವಂತೆ ಮನವಿ ಮಾಡಲಾಗಿತ್ತು. ನೂರಾರು ಮಂದಿ ಸ್ಪಂದಿಸಿದ್ದರು. ಕಟುಕರ ಪಾಲಾಗುವ ಭಾರತೀಯ ತಳಿಯ ಗೋವುಗಳು ಹಾಗೂ ಎತ್ತುಗಳನ್ನು ಖರೀದಿಸಿ, ಅವುಗಳನ್ನು ಶ್ರೀಮಠದ ಗೋಶಾಲೆಯಲ್ಲಿ ಪೋಷಿಸುವ ಸಲುವಾಗಿಯೇ ಶ್ರೀರಾಮಚಂದ್ರಾಪುರ ಮಠ ಗೋಸಂಜೀವಿನಿ ಯೋಜನೆಯನ್ನು ಆರಂಭಿಸಿದೆ. ಮಲೆಮಹದೇಶ್ವರ ಬೆಟ್ಟ ಪ್ರದೇಶದಲ್ಲಿ ತಮಿಳುನಾಡಿನ ಆಡಿ ಜಾತ್ರೆಯಲ್ಲಿ ಮಾರಾಟವಾಗಲಿದ್ದ 1500ಕ್ಕೂ ಹೆಚ್ಚು ಗೋವುಗಳನ್ನು ಒಂದೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ ಗೋಸಂಜೀವಿನಿ ಯೋಜನೆಯಡಿ ಈ ಹಿಂದೆ ಖರೀದಿಸಿ ಸಂರಕ್ಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಅಂತೆಯೇ ಕಾಸರಗೋಡು, ಭಟ್ಕಳ ಮತ್ತಿತರ ಕಡೆಗಳಲ್ಲಿ ವಧಾಸ್ಥಾನ ಸೇರಲಿದ್ದ ಹಲವು ಹೋರಿಗಳನ್ನು ಈ ಹಿಂದೆಯೂ ರಕ್ಷಿಸಲಾಗಿದೆ.

Advertisement

ಶ್ರೀಮಠದ ಡಾ.ಜಯಪ್ರಕಾಶ್ ಲಾಡ, ತಿರುಮಲ ಪ್ರಸನ್ನ, ಶ್ರೀಕೃಷ್ಣ ಮೀನಗದ್ದೆ, ನಿಶಾಂತ್ ಮತ್ತಿತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹೊಸರುಚಿ | ಪಪ್ಪಾಯ ಹಣ್ಣು ಬರ್ಫಿ

ಹೊಸರುಚಿಯ ಮೂಲಕ ಈ ವಾರ ಪಪಾಯ ಹಣ್ಣು ಬರ್ಫಿಯ ಬಗ್ಗೆ ಹೇಳಿದ್ದಾರೆ ಗೃಹಿಣಿ…

8 hours ago

ಸೀತೆ ಪುನೀತೆಯೆ ? ಮತ್ತೊಮ್ಮೆ ಅಗ್ನಿ ಪರೀಕ್ಷೆಯೇ?

ರಾಮಸೀತೆಯರೊಂದಾಗಿ ಕುಶಲವರಿಗೆ ತಂದೆ ತಾಯಿ ಲಭಿಸಿದ ಘಳಿಗೆಯು ಎಲ್ಲರಿಗೂ ಸಂಭ್ರಮಯೋಗ್ಯವಾಗಿ ಕಾಣುತ್ತದೆ. ಹಾಗಾಗಿ…

11 hours ago

ಎಲ್ಲಾ ಕೃಷಿ ಆದಾಯವನ್ನು ಬ್ಯಾಂಕ್‌ ಉಳಿತಾಯ ಖಾತೆ ಮೂಲಕ ವ್ಯವಹಾರ ಮಾಡಬೇಕು ಏಕೆ..?

ಅಲ್ಪಾವಧಿ ಬೆಳೆ ಸಾಲದ ಬಗ್ಗೆ ಕಳೆದ ವಾರ ತಿಳಿಸಲಾಗಿತ್ತು. ಅದರ ಮುಂದುವರಿದ ಭಾಗವಾಗಿ…

1 day ago

ತುಮಕೂರು ಜಿಲ್ಲೆ | 10 ಬೆಂಬಲ ಬೆಲೆ ಖರೀದಿ ಕೇಂದ್ರಗಳಲ್ಲಿ ನೋಂದಣಿ ಪ್ರಕ್ರಿಯೆ ಆರಂಭ

ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸಲು ಈಗಾಗಲೇ ತುಮಕೂರು ಜಿಲ್ಲೆಯಲ್ಲಿ ತೆರೆದಿರುವ 10…

1 day ago

ಮಕ್ಕಳ ಆರೋಗ್ಯ ಮತ್ತು ಭವಿಷ್ಯದ ಹಿತದೃಷ್ಟಿಯಿಂದ  ಬೆಳೆಗಳಿಗೆ ರಾಸಾಯನಿಕ ಬಳಸಬೇಡಿ

ಮಕ್ಕಳ ಆರೋಗ್ಯ ಮತ್ತು ಭವಿಷ್ಯದ ಹಿತದೃಷ್ಟಿಯಿಂದ ರೈತರು ತಮ್ಮ ಬೆಳೆಗಳಲ್ಲಿ ಹೆಚ್ಚಿನ ರಾಸಾಯನಿಕಗಳು…

1 day ago

ಕಾರವಾರದಲ್ಲಿ ಎ.18-22 ವರೆಗೆ ಕರಾವಳಿ ಉತ್ಸವ

ಕಾರವಾರದ ರವೀಂದ್ರನಾಥ್ ಟಾಗೋರ್ ಕಡಲ ತೀರದ ಮಯೂರ ವರ್ಮ ವೇದಿಕೆಯಲ್ಲಿ ಏಪ್ರಿಲ್ 18…

1 day ago