ಕಾಣಿಯೂರು: ಪುರಾತನ ಕಾಲದಿಂದಲೂ ಕಾಣಿಯೂರಿನಲ್ಲಿ ನೆಲೆಯಾಗಿರುವ ಇತಿಹಾಸ ಪ್ರಸಿದ್ಧ ಶ್ರೀ ಅಮ್ಮನವರ ದೇವಸ್ಥಾನವು ಜೀರ್ಣೋದ್ಧಾರಗೊಳ್ಳುತ್ತಿದ್ದು, ಇದೀಗ ದೇವಸ್ಥಾನದ ಜೀರ್ಣೋದ್ಧಾರದ ಕಾರ್ಯಗಳಿಗೆ ರೈಲ್ವೆ ಇಲಾಖೆಯಿಂದ ತಡೆಯೊಡ್ಡಲಾಗಿದೆ.
ಈ ಹಿನ್ನಲೆಯಲ್ಲಿ ಕಾಣಿಯೂರು ರಾಮತೀರ್ಥ ಮಠದಲ್ಲಿ ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭತೀರ್ಥ ಸ್ವಾಮೀಜಿಯವರ ಸಮ್ಮುಖದಲ್ಲಿ ಭಕ್ತರ ಸಮಾಲೋಚನಾ ಸಭೆ ಶುಕ್ರವಾರ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕಾಣಿಯೂರು ಶ್ರೀ ವಿದ್ಯಾವಲ್ಲಭತೀರ್ಥ ಸ್ವಾಮೀಜಿ ಅವರು, ಈಗಾಗಲೇ ಸಂಬಂಧಪಟ್ಟ ರೈಲ್ವೆ ಅಧಿಕಾರಿಗಳನ್ನು ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ಸಂಪರ್ಕಿಸಲಾಗಿದೆ. ದೇವಸ್ಥಾನದ ನವೀಕರಣದ ದೃಷ್ಠಿಯಿಂದ ಎಲ್ಲರೂ ಕೈ ಜೋಡಿಸಬೇಕು ಎಂದರು.
ಕಾಣಿಯೂರು ರಾಮತೀರ್ಥಮಠದ ವ್ಯವಸ್ಥಾಪಕ ನಿರಂಜನ್ ಆಚಾರ್ ಮಾತನಾಡಿ, ದೇವಸ್ಥಾನದಲ್ಲಿ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದ್ದು, ರೈಲ್ವೆ ಇಲಾಖೆಯಿಂದ ತಾತ್ಕಾಲಿಕ ತಡೆಯೊಡಿದ್ದಾರೆ. ಈಗಾಗಲೇ ರೈಲ್ವೆ ಅಧಿಕಾರಿಯವರನ್ನು ಸಂಪರ್ಕಿಸಲಾಗಿದೆ. ಮೇಲಾಧಿಕಾರಿಯವರ ಗಮನಕ್ಕೆ ತರಲು ಹೇಳಿದ್ದಾರೆ. ಮುಂದಿನ ದಿನಗಳಲ್ಲಿಯೂ ಈ ಸ್ಥಳದಲ್ಲಿಯೇ ದೇವಸ್ಥಾನ ನಿರ್ಮಾಣಗೊಳ್ಳಲು ಕ್ರಮ ಕೈಗೊಳ್ಳಬೇಕಾಗಿದೆ ಎಂದರು.
ಗ್ರಾ.ಪಂ ಸದಸ್ಯ ಗಣೇಶ್ ಉದುನಡ್ಕ, ಅರ್ಚಕರಾದ ಸುಬ್ರಹ್ಮಣ್ಯ ಉಪಾಧ್ಯಾಯ ಬೊಬ್ಬೆಕೇರಿ, ಕಾಣಿಯೂರು ಶ್ರೀ ಮಠದ ಅರ್ಚಕ ಬಾಲಕೃಷ್ಣ ಅಸ್ರಣ್ಣ, ಪ್ರಶಾಂತ್ ಭಟ್ ಕಟ್ಟತ್ತಾರು, ಪದ್ಮಯ್ಯ ಗೌಡ ಅನಿಲ, ಹರಿಪ್ರಸಾದ್ ರೈ ಕಾಣಿಯೂರು, ರಾಮಣ್ಣ ಗೌಡ ಮುಗರಂಜ ಅವರು ಸಲಹೆ ನೀಡಿದರು.
ಕಾಣಿಯೂರು ಶ್ರೀ ಅಮ್ಮನವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ರೈಲ್ವೆ ಇಲಾಖೆಯಿಂದ ತಾತ್ಕಾಲಿಕ ತಡೆಯೊಡ್ಡಲಾದ ಹಿನ್ನಲೆಯಲ್ಲಿ ರೈಲ್ವೆ ಸಚಿವರನ್ನು, ಸಂಸದರನ್ನು ಭೇಟಿಯಾಗುವುದೆಂದು ನಿರ್ಧರಿಸಲಾಯಿತು.
ವಿಶೇಷ ಪ್ರಾರ್ಥನೆ: ಕಾಣಿಯೂರು ಶ್ರೀ ಅಮ್ಮನವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯವು ಶೀಘ್ರದಲ್ಲಿ ನಡೆದು ಶ್ರೀ ದೇವರ ಪ್ರತಿಷ್ಠಾ ಕಾರ್ಯಕ್ರಮವು ನೆರವೇರುವ ನಿಟ್ಟಿನಲ್ಲಿ ಕಾಣಿಯೂರು ಶ್ರೀ ಮಠ ಹಾಗೂ ಕಾಣಿಯೂರು ಶ್ರೀ ಅಮ್ಮನವರ ದೇವಸ್ಥಾನದಲ್ಲಿ ಸ್ವಾಮೀಜಿಯವರ ಸಮ್ಮುಖದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಕಳೆದ ಮೂರು ವರ್ಷಗಳಿಂದ ಕಾಡಾನೆ ದಾಳಿಗೆ ಒಟ್ಟು 129 ಮಂದಿ ರೈತರು ಬಲಿಯಾಗಿದ್ದಾರೆ.…
ಬಂಗಾಳಕೊಲ್ಲಿಯ ಉತ್ತರ ಭಾಗದಲ್ಲಿ ಆಗಸ್ಟ್ 15ರಂದು ವಾಯುಭಾರ ಕುಸಿತ ಉಂಟಾಗುವ ಲಕ್ಷಣಗಳಿದ್ದು, ಈಗಿನಂತೆ…
ವೈಜ್ಞಾನಿಕ ಶಿಫಾರಸ್ಸಿನಂತೆ ರಾಸಾಯನಿಕ ಗೊಬ್ಬರ ಬಳಕೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ…
ಕರಾವಳಿ ಸೇರಿದಂತೆ ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಧಾರಾಕಾರ ಮಳೆಯಾಗಿದೆ. ರಾಜ್ಯದ…
ತ್ಯಾಗಕ್ಕೊಂದು ಸ್ವ-ಸ್ವರೂಪ ಇದ್ದರೆ ಅದು ‘ಭೀಷ್ಮಾಚಾರ್ಯ’ರಿಗೆ ಹೊಂದುತ್ತದೆ. ತ್ಯಾಗವೆಂದರೆ ದೇಹವನ್ನು ಕಳೆದುಕೊಳ್ಳುವುದಲ್ಲ! ದೇಹವಿದ್ದೂ…
ವಿಜಯಪುರ ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಗ್ರಾಮೀಣ ರಸ್ತೆ, ಕೃಷಿ, ತೋಟಗಾರಿಕೆ ಬೆಳೆಗಳು, ಜನ-ಜಾನುವಾರುಗಳ…