ಕಾರ್ಗಿಲ್‌ ವಿಜಯ ದಿವಸ್‌ | ವೀರ ಯೋಧರಿಗೆ ಶತ ಶತ ನಮನ |

July 26, 2020
8:00 AM

ಜುಲೈ  26. ಕಾರ್ಗಿಲ್ ವಿಜಯ ದಿವಸ್ | ಮತ್ತೊಮ್ಮೆ ಮೊಳಗಲಿ ಜೈ ಹಿಂದ್ | ಹುತಾತ್ಮರಾದ ವೀರ ಯೋಧರಿಗೆ ಶತ ಶತ ನಮನ |

Advertisement

ಭಾರತದ ಗಡಿಯೊಳಗೆ ನುಗ್ಗಿದ ಪಾಕ್‌  ಸೈನಿಕರು ಹಾಗೂ ಉಗ್ರರನ್ನು ಹಿಮ್ಮೆಟ್ಟಿಸಿದ ವಿಜಯದ ದಿನ. ಈ ವಿಜಯದ  ಜೊತೆಗೆ ಈ ಯುದ್ದದಲ್ಲಿ ಭಾರತೀಯ 530 ಯೋಧರು ಹುತಾತ್ಮರಾದರು. ಈ ದಿನವು ಭಾರತೀಯ ಇತಿಹಾಸದಲ್ಲಿ ‘ಕಾರ್ಗಿಲ್ ವಿಜಯ ದಿವಸ’ವಾಗಿ  ಉಳಿಯಿತು. ಭಾರತೀಯ ಸೈನಿಕರ ಧೈರ್ಯ ಸಾಹಸಕ್ಕೆ ದೇಶದಾದ್ಯಂತ ‌ಮೆಚ್ಚುಗೆ ವ್ಯಕ್ತವಾಯಿತು. ಯುದ್ಧದಲ್ಲಿ  ಹುತಾತ್ಮರಾದ ಯೋಧರಿಗೆ ವೀರ ಚಕ್ರ ನೀಡಿ ಗೌರವಿಸಲಾಯಿತು. ದೇಶಕ್ಕಾಗಿ ವೀರಮರಣವಪ್ಪಿದ ಸೈನಿಕರ ಸ್ಮರಣಾರ್ಥ ಜುಲೈ 26 ರಂದು ಕಾರ್ಗಿಲ್ ವಿಜಯ ದಿವಸ್ ಆಚರಿಸಲಾಗುತ್ತಿದೆ.

 

 

Advertisement

1999 ರ ಮೇ 9ರಂದು ಭಾರತದ ಗಡಿಯೊಳಗೆ ಪಾಕಿಸ್ತಾನದ ಸೈನಿಕರು  ಮತ್ತು ಉಗ್ರರು ನುಸುಳಿದ್ದು ಯುದ್ಧಕ್ಕೆ ಕಾರಣವಾಯಿತು. ಜಮ್ಮು ಕಾಶ್ಮೀರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಗುರಿಯೊಂದಿದೆ  ಪಾಕ್ ​ ಸೈನಿಕರು ದಾಳಿ ಪ್ರಾರಂಭಿಸಿದ್ದರು. ಆದರೆ ಕದನ ವಿರಾಮದಲ್ಲಿದ್ದ ಭಾರತೀಯ ಸೇನೆ ಸರಕಾರದ ಆದೇಶಕ್ಕಾಗಿ ಕಾಯುತ್ತಿತ್ತು, ಆದರೆ ಉಗ್ರರು ಹಾಗೂ ಪಾಕ್‌ ಸೈನಿಕರು ಅರ್ಧ ಭಾಗ ಆಕ್ರಮಿಸಿದ್ದರು. ಹೀಗಾಗಿ ಯುದ್ಧ ಅನಿವಾರ್ಯವಾಯಿತು. ಅಂದು ಭಾರತದ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ದಿಟ್ಟ ನಿರ್ಧಾರ ಕೈಗೊಂಡು  ಸೇನಾಧಿಕಾರಿಗೆ ಯುದ್ಧ ಘೋಷಿಸಲು ಸೂಚಿಸಿದರು. ಅಧಿಕಾರಿಗಳ ಆದೇಶದಂತೆ ಕಾರ್ಗಿಲ್ ಬೆಟ್ಟಕ್ಕೆ ತೆರಳಿದ ಭಾರತೀಯ ಸೈನಿಕರು ರಣಾಂಗಣದಲ್ಲಿ ಹೋರಾಡಿದರು. ಯಶಸ್ಸು ಪಡೆದರು. ಈ ಹೊತ್ತಿಗೆ  ಯುದ್ದದಲ್ಲಿ ಭಾರತೀಯ 530 ಯೋಧರು ಹುತಾತ್ಮರಾದರು.  ಜಲೈ26 ರಂದು ಉಗ್ರರನ್ನು ಮತ್ತು ಪಾಕ್​ ಸೈನಿಕರನ್ನು  ಹಿಮ್ಮೆಟ್ಟಿಸಿ ಅಧಿಕೃತವಾಗಿ ಜಯವನ್ನು ಘೋಷಿಸಿದ ದಿನವಾಯಿತು.

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮಕ್ಕಳ ಪುಟ | ನಿಮ್ಮ ಚಿತ್ರ -ನಮ್ಮ ಬೆಳಕು | ಅಯಂಶಿ ಕೆ.ಎಚ್ , ಬಹರೇನ್
July 5, 2025
8:00 AM
by: ದ ರೂರಲ್ ಮಿರರ್.ಕಾಂ
ನಿಮ್ಮ ಚಿತ್ರ – ನಮ್ಮ ಬೆಳಕು | ಅನಿರುದ್ಧ ಪಿ |
June 30, 2025
5:26 PM
by: ದ ರೂರಲ್ ಮಿರರ್.ಕಾಂ
6,100 ಕೋಟಿ ಮೊತ್ತದ ಯೋಜನೆಗಳಿಗೆ ಪ್ರಧಾನಿ ಚಾಲನೆ | ದೇಶದಲ್ಲಿ ಅಭಿವೃದ್ಧಿ ಪರಿಕಲ್ಪನೆಗೆ ಹೊಸ ವೇಗ
October 21, 2024
7:26 PM
by: ದ ರೂರಲ್ ಮಿರರ್.ಕಾಂ
ನಕಲಿ ದಾಖಲೆ ಕೊಟ್ಟು ಪಡಿತರ ಚೀಟಿ ಮಾಡಿಸಿದರೆ ಜೋಕೆ : ರಾಜ್ಯದಲ್ಲಿ ಬರೋಬ್ಬರಿ 12 ಲಕ್ಷ ರೇಷನ್ ಕಾರ್ಡ್ ರದ್ದು : ಕಾರಣ ಏನು..?
August 2, 2024
2:13 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group