ಸುಬ್ರಹ್ಮಣ್ಯ: ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಸಂದರ್ಭ ಎಳೆಯುವ ರಥಗಳಿಗೆ ಕಾರ್ತಿಕ ಹುಣ್ಣಿಮೆಯ ದಿನವಾದ ಮಂಗಳವಾರ ಗೂಟ ಪೂಜಾ ಮುಹೂರ್ತವನ್ನು ವಿವಿಧ ವೈಧಿಕ ವಿಧಾನಗಳು ನಡೆಯಿತು. ಶ್ರೀ ದೇಗುಲದಲ್ಲಿ ಪೂಜೆ ನೆರವೇರಿದ ಬಳಿಕ ಜಾತ್ರಾ ಸಮಯದಲ್ಲಿ ಎಳೆಯುವ ಬ್ರಹ್ಮರಥ ಮತ್ತು ಪಂಚಮಿ ರಥಗಳನ್ನು ನಿರ್ಮಿಸಲು ಪೂಜಾ ಮುಹೂರ್ತವನ್ನು ವಿವಿಧ ವೈಧಿಕ ವಿಧಾನಗಳೊಂದಿಗೆ ನಡೆದ ಬಳಿಕ ರಥಗಳ ಗೂಟಗಳಿಗೆ ಪೂಜೆ ನಡೆಯಿತು.
ಈ ಸಂದರ್ಭದಲ್ಲಿ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅಧೀಕ್ಷಕ ಬಾಲಸುಬ್ರಹ್ಮಣ್ಯ ಭಟ್, ರಥದದ ದಾನಿ ಯುವ ಉದ್ಯಮಿ ಅಜಿತ್ ಶೆಟ್ಟಿ ಕಡಬ,ರಥದ ದಾನಿ ಖ್ಯಾತ ಉದ್ಯಮಿ ಎನ್.ಮುತ್ತಪ್ಪ ರೈ ಅವರ ಸಹೋದರ ಕರುಣಾಕರ ರೈ ದೇರ್ಲ, ಕುಕ್ಕೆ ದೇವಳದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಕೇನ್ಯ ರವೀಂದ್ರನಾಥ ಶೆಟ್ಟಿ, ದೇವಳದ ಹೆಬ್ಬಾರ್ ಪ್ರಸನ್ನ ಭಟ್, ಗ್ರಾ.ಪಂ.ಉಪಾಧ್ಯಕ್ಷ ರಾಜೇಶ್ ಎನ್.ಎಸ್, ಮೂಲನಿವಾಸಿ ಮಲೆಕುಡಿಯ ಜನಾಂಗದ ಗುರಿಕಾರ ಐತಪ್ಪ ಅರಿಗುಡಿ, ಸಹಗುರಿಕಾರ ದಿನಕರ ಕುಲ್ಕುಂದ ಕಾಲನಿ, ಪ್ರಮುಖರಾದ ಎ.ವಿ.ನಾಗೇಶ್ ಸೇರಿದಂತೆ ಭಕ್ತರು ಉಪಸ್ಥಿತರಿದ್ದರು.
ಮುಂಗಾರು ಮತ್ತಷ್ಟು ದುರ್ಬಲಗೊಳ್ಳತ್ತಿದ್ದು, ರಾಜ್ಯದ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಆಗಸ್ಟ್ ತಿಂಗಳಲ್ಲಿ…
ದ ರೂರಲ್ ಮಿರರ್.ಕಾಂ ನಲ್ಲಿ "ಹೊಸರುಚಿ" ಯ ಮೂಲಕ ಹಲಸು ಅಡುಗೆಯ ಮೂಲಕ…
ತುಳು ಸಾಹಿತ್ಯ ಅಕಾಡೆಮಿ ಹಾಗೂ ಅಖಿಲ ಭಾರತ ಮುಂಡಾಲ ಯುವ ವೇದಿಕೆಯ ವತಿಯಿಂದ…
ವಿಶ್ವದಲ್ಲಿ ಅಡಿಕೆ ಉತ್ಪಾದನೆ ಆಗುವ ಎಲ್ಲಾ ರಾಷ್ಟ್ರಗಳಲ್ಲಿ ಅದರ ಬಳಕೆಯೂ ಆಗುತ್ತಿದೆ.ಇದರೊಂದಿಗೆ ಈ…
ಪ್ಲಾಸ್ಟಿಕ್ ಮಾಲಿನ್ಯವು ಪರಿಸರ ವಿನಾಶದ ಅಂಶಗಳಲ್ಲಿ ಒಂದಾಗಿದೆ. ನಮ್ಮ ಸಾಗರಗಳು ಮತ್ತು ಕರಾವಳಿಗಳಲ್ಲಿ…
ವಿಯೆಟ್ನಾಂ 2030 ರ ವೇಳೆಗೆ ಕೃಷಿಯಲ್ಲಿ ಹೊರಸೂಸುವ ಮೀಥೇನ್ ಅನ್ನು 30% ರಷ್ಟು…