ಸವಣೂರು: ಪಾಲ್ತಾಡಿ ಗ್ರಾಮದ ಚೆನ್ನಾವರ ಅಭ್ಯುದಯ ಯುವಕ ಮಂಡಲದ ವತಿಯಿಂದ ಸವಣೂರು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಿದ್ಯಾರ್ಥಿಗಳಿಗೆ ನೇಜಿನಾಟಿ ಹಾಗೂ ಭತ್ತದ ಕೃಷಿಯ ಕುರಿತು ಪ್ರಾತ್ಯಕ್ಷಿಕೆ ನೀಡುವ ಗದ್ದೆಯಲ್ಲೊಂದು ದಿನ ಕಾರ್ಯಕ್ರಮ ಪಾಲ್ತಾಡಿ ಗ್ರಾಮದ ಲಕ್ಷ್ಮೀ ರೈ ಚೆನ್ನಾವರ ಪಟ್ಟೆ ಅವರ ಗದ್ದೆಯಲ್ಲಿ ನಡೆಯಿತು.
ಈ ಸಂದರ್ಭ ಮಾತನಾಡಿದ ಕಾಲೇಜಿನ ಎನ್.ಎಸ್.ಎಸ್ ಘಟಕದ ಸಂಘಟಕ ವೆಂಕಟ್ರಮಣ ನಾೈಕ್ , ಇಂದಿನ ದಿನಗಳಲ್ಲಿ ಕೃಷಿ ಚಟುವಟಿಕೆಗಳು ಅಳಿದುಹೋಗಿ ಪುಸ್ತಕದಲ್ಲಿ ತೋರಿಸುವ ಪರಿಸ್ಥಿತಿ ಬಂದೊದಗಿದೆ. ಹಾಗಾಗಿ ವಿದ್ಯಾರ್ಥಿಗಳಲ್ಲಿ ನಾಟಿ ಕ್ರಮದ ಬಗ್ಗೆ ಅರಿವನ್ನು ಮೂಡಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮ ಸಹಕಾರಿ ಎಂದರು.ಆಧುನಿಕತೆ ಬೆಳೆದಂತೆ ಕೃಷಿಪರಂಪರೆಯನ್ನು ಮರೆಯುತ್ತಿರುವ ಸಂದರ್ಭದಲ್ಲಿ ಭತ್ತದ ಬೇಸಾಯದ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿಯೂ ದೊರೆತಂತಾಯಿತು.ವಿದ್ಯಾರ್ಥಿಗಳು ಕೆಸರಗದ್ದೆಯಲ್ಲಿ ಮಿಂದೆದ್ದು ಆಟವಾಡಿದರು.
ಕಾಲೇಜಿನಲ್ಲಿ ದ.ಕ. ಮಾತ್ರವಲ್ಲದೆ ಹೊರಜಿಲ್ಲೆಗಳ ವಿದ್ಯಾರ್ಥಿಗಳಿದ್ದು,ಅವರೂ ಗದ್ದೆಗೆ ಇಳಿದು ನೇಜಿ ನೆಟ್ಟು ಸಂಭ್ರಮಿಸಿದರು. ಬಳಿಕ ಪರಂಪರಾಗತ ಭತ್ತದ ಕೃಷಿಕ ಇಸುಬು ಕುಂಡಡ್ಕ ಅವರಿಂದ ಭತ್ತದ ನಾಟಿ,ಬೆಳೆಯ ಕುರಿತು ಮಾಹಿತಿ ಪಡೆದುಕೊಂಡರು.ನಂತರ ವಿದ್ಯಾರ್ಥಿಗಳು ಸಾಲು ನಾಟಿಯ ಮೂಲಕ ನೇಜಿ ನಾಟಿ ಮಾಡಿದರು.
ಈ ಸಂದರ್ಭದಲ್ಲಿ ಎನ್.ಎಸ್.ಎಸ್ ಘಟಕದ ಸಹಸಂಘಟಕರಾದ ಪ್ರತಿಭಾ ಎಸ್ ,ಸುಮಾ,ಶಿವಪ್ರಸಾದ್,ಅನೂಪ್, ಅಭ್ಯುದಯ ಯುವಕ ಮಂಡಲದ ಪದಾಧಿಕಾರಿಗಳಾದ ಸುಬ್ಬಣ್ಣ ದಾಸ್,ದೀಕ್ಷಿತ್ ಜೈನ್,ರವಿ ಎ.ಕೆ,ಹರೀಶ್ ರೈ,ಧರ್ಮಪಾಲ,ಮಹಮ್ಮದ್ ಶರೀಫ್ ಕುಂಡಡ್ಕ, ಪ್ರವೀಣ್ ಕುಮಾರ್,ವಿನೋದ್ ,ಪ್ರಮೋದ್ ಕೆ,ಚರಣ್ ರೈ ,ಜಗದೀಶ್,ಅಭ್ಯುದಯ ಮಹಿಳಾ ಮಂಡಲದ ಸುಶೀಲಾ ಸಿ.ವಿ ರೈ, ವಿನೋದಾ ರೈ,ಶೀಲಾವತಿ,ಗುಲಾಬಿ ಸಿ.ಕೆ,ನಳಿನಿ ರೈ,ಚಿತ್ರಾ ವಸಂತ್ ಮೊದಲಾದವರು ಉಪಸ್ಥಿತರಿದ್ದರು.
26.12.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಇಂದು ರಾಷ್ಟ್ರೀಯ ರೈತ ದಿನ. ಈ ದೇಶದಲ್ಲಿ ಕೃಷಿಯ ಪ್ರಾಧಾನ್ಯತೆ ಬಹಳಷ್ಟಿದೆ. ಕೃಷಿಗಾಗಿ…
ಬಂಗಾಳಕೊಲ್ಲಿಯ ವಾಯುಭಾರ ಕುಸಿತವು ಡಿ.26 ರಂದು ತಮಿಳುನಾಡು ಕರಾವಳಿಯ ಬಳಿ ಶಿಥಿಲಗೊಳ್ಳುತ್ತಿದ್ದಂತೆಯೇ ಹಿಂಗಾರು…
ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಕಮಿಲ ಶಾಲಾ ವಠಾರದಲ್ಲಿ ಪಾವಂಜೆ ಶ್ರೀ ಜ್ಞಾನಶಕ್ತಿ…
23.12.24ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
22.12.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು, ದಕ್ಷಿಣ…