ಸುಬ್ರಹ್ಮಣ್ಯ : ಕಿದು ಕೃಷಿ ಸಂಶೋಧನಾ ಕೇಂದ್ರವನ್ನು ಅರಣ್ಯ ಇಲಾಖೆ ವಾಪಸ್ ಪಡೆಯದೆ ವಿನಾಯಿತಿ ನೀಡುವಂತೆ ಮತ್ತು ಇರುವ ನವೀಕರಣ ಸಮಸ್ಯೆ ಇತ್ಯರ್ಥ ಪಡಿಸುವಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಮನವಿ ಮಾಡುವೆ ಎಂದು ಸುಬ್ರಹ್ಮಣ್ಯ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥಶ್ರೀಗಳು ಹೇಳಿದರು.
ಅರಣ್ಯ ಇಲಾಖೆಯಿಂದ ಭೂಮಿಯನ್ನು ಲೀಸಿಗೆ ಪಡೆದು ಕೃಷಿ ಸಂಶೋಧನೆಗಾಗಿ ಕಡಬ ತಾಲೂಕಿನ ಕಿದುವಿನಲ್ಲಿ ಸ್ಥಾಪನೆಯಾಗಿರುವ ಕಿದು ತೆಂಗು ಜಿನ್ ಬ್ಯಾಂಕನ್ನು ನವೀಕರಿಸದೆ ಇರುವುದು ಮತ್ತು ನವೀಕರಣ ಹಣ ಪಾವತಿಸದೆ ಕೃಷಿಕರಿಗೆ ಆಗುತ್ತಿರುವ ತೊಂದರೆ ಹಿನ್ನಲೆಯಲ್ಲಿ ಸಹಕಾರಿ ಧುರೀಣ ಬಾಲಕೃಷ್ಣ ವಾಲ್ತಾಜೆ ಮತ್ತಿತರ ಕೃಷಿ ಮುಖಂಡರ ನಿಯೋಗ ಶುಕ್ರವಾರ ಸುಬ್ರಹ್ಮಣ್ಯಕ್ಕೆ ಮಠಕ್ಕೆ ತೆರಳಿ ಯತಿಳನ್ನು ಬೇಟಿಯಾಗಿ ಸಮಸ್ಯೆ ಇತ್ಯರ್ಥಕ್ಕೆ ಮಧ್ಯಪ್ರವೇಶಿಸುವಂತೆ ಮನವಿ ಸಲ್ಲಿಸಿತು.
ಈ ವೇಳೆ ಯತಿಗಳು ಈ ಹಿಂದೆಯು ಇಂತಹದ್ದೆ ಸಮಸ್ಯೆ ಬಂದಿದ್ದಾಗ ತಾನು ಕೇಂದ್ರ ಹಾಗೂ ರಾಜ್ಯದ ಸಚಿವರಿಗೆ, ಸಂಸದರಿಗೆ ಮನವಿ ಮಾಡಿದ್ದೆ ಎಂದು ಹೇಳಿದರು. ಸ್ಥಳದಿಂದಲೇ ಅವರು ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರಿಗೆ ದೂರವಾಣಿ ಮೂಲಕ ಕರೆ ಮಾಡಿ ಮಾತನಾಡಿದರು. ಕಿದು ಕೇಂದ್ರದ ಸಮಸ್ಯೆ ಇತ್ಯರ್ಥ ಪಡಿಸಿ ಶಾಶ್ವತ ಪರಿಹಾರ ಕ್ರಮಕ್ಕೆ ಸರಕಾರವೇ ಮುತುವರ್ಜಿ ವಹಿಸಿ ರೈತರ ಹಿತ ಕಾಯುವಂತೆ ಅವರಿಬ್ಬರಲ್ಲಿ ಶ್ರೀಗಳು ಮನವಿ ಮಾಡಿದರು. ಇದಕ್ಕೆ ಇಬ್ಬರು ಸಕರಾತ್ಮಕವಾಗಿ ಸ್ಪಂದಿಸಿ ಸೂಕ್ತ ಕ್ರಮದ ಭರವಸೆಯನ್ನು ಅವರು ಯತಿಗಳಿಗೆ ನೀಡಿದರು.
ಬಳಿಕ ಮಾತನಾಡಿದ ಶ್ರೀಗಳು ಜಿನ್ ಬ್ಯಾಂಕು ಸಮಸ್ಯೆ ಇತ್ಯರ್ಥಕ್ಕೆ ಕೇಂದ್ರ ಸರಕಾರದ ಸಚಿವರು ಹಾಗೂ ರಾಜ್ಯದ ಮುಖ್ಯಮಂತ್ರಿಗಳನ್ನು ನೇರವಾಗಿ ಭೇಟಿಯಾಗಿ ಚರ್ಚಿಸುವೆ ಎಂದರು. ಇಲ್ಲಿನ ಅಂತರಾಷ್ಟ್ರೀಯ ಸಂಶೋಧನ ಕೇಂದ್ರದಿಂದ ದೇಶದ ಕೃಷಿಕರಿಗೆ ಬಹಳಷ್ಟು ಪ್ರಯೋಜನಕಾರಿ. ಕೃಷಿ ಪ್ರಧಾನವಾದ ಈ ಭಾಗದಲ್ಲಿ ಇರುವ ಏಕೈಕ ಕೇಂದ್ರವನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಹೊಣೆಗಾರಿಕೆ. ಈ ನಿಟ್ಟಿನಲ್ಲಿ ಎಲ್ಲ ಪ್ರಯತ್ನಗಳನ್ನು ನಡೆಸುವುದಾಗಿ ಅವರು ಭರವಸೆ ಇತ್ತರು. ಈ ವೇಳೆ ಕೃಷಿಕ ನಾಗೇಶ್ ಕೈಕಂಬ ಮತ್ತಿತರ ಕೃಷಿಕರು ಉಪಸ್ಥಿತರಿದ್ದರು.
ತೆಂಗು ಸಂಶೋಧನಾ ಕೇಂದ್ರ ಕ ತಪ್ಪುವುದಕ್ಕೆ ಅವಕಾಶ ನೀಡುವುದಿಲ್ಲ. ಈ ಹಿಂದೆ ತಾನು ಕೇಂದ್ರ ಕೃಷಿ ಸಚಿವರ ಜತೆ ಅಧಿಕಾರಿಗಳ ಸಮ್ಮುಖವೇ ಸಭೆ ನಡೆಸಿ ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನ ನಡೆಸಿದ್ದೆ. ಬಳಿಕವೂ ನೊಟೀಸ್ ಜಾರಿಯಂತ ಸಮಸ್ಯೆ ಪುನಾರವರ್ತನೆ ಆಗುತ್ತಿದೆ. ಈ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಅಗತ್ಯ ಕ್ರಮ ಕೈಗೊಳ್ಳುವೆ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ತಿಳಿಸಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯು(WHO) ಅಡಿಕೆ ಕ್ಯಾನ್ಸರ್ ಕಾರಕವೆಂದು ಸಾಬೀತುಪಡಿಸಲು ಸಂಶೋಧನಾ ವರದಿಗಳನ್ನೇ ತಿರುಚಿ…
ಅಡಿಕೆಯ ಔಷಧೀಯ ಗುಣಗಳು ಹಲವಾರು ಇವೆ. ಅಡಿಕೆಯ ಚೊಗರಿನಿಂದ ತಯಾರು ಮಾಡುವ ಸೋಪು…
ಮಂಗಳೂರಿನಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ 2025ನೇ ಸಾಲಿನ ಇಂಡಿಯನ್ ಅಕಾಡೆಮಿ ಆಫ್ ಓರಲ್…
ಕೃಷಿಗಾಗಿ, ಕೃಷಿ ಉಳಿಸುವುದಕ್ಕಾಗಿ ಸುರಂಗ ಕೊರೆದು ನೀರು ಹರಿಸಿದ ವಿಶೇಷ ಸಾಧನೆಯನ್ನು ಮಾಡಿದ್ದಾರೆ…
ದೇಶಾದ್ಯಂತ ಅಳಿವಿನಂಚಿಗೆ ತಲುಪಿರುವ ಗುಬ್ಬಚ್ಚಿ ಸಂಕುಲದ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು…
ಸ್ವಾವಲಂಬನೆಯ ಜೀವನ ಕಟ್ಟಿಕೊಳ್ಳುತ್ತಿರುವ ಅನೇಕ ಮಹಿಳಾ ಉದ್ಯಮಿದಾರರಿಗೆ ಎನ್‍ಆರ್ ಎಲ್‍ಎಮ್ ಯೋಜನೆಯು ಸ್ಪೂರ್ತಿಯ…