ಕುಕ್ಕೆ ಸುಬ್ರಹ್ಮಣ್ಯ : ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ, ಶಂಕುಸ್ಥಾಪನೆ

June 28, 2019
9:00 AM

ಸುಬ್ರಹ್ಮಣ್ಯ:  ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಸುಮಾರು 2.37 ಕೋ.ರೂ ಮಿಕ್ಕಿದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆ ಗುರುವಾರ ನೆರವೇರಿಸಿತು.

Advertisement
Advertisement
Advertisement

ಆದಿಸುಬ್ರಹ್ಮಣ್ಯದಲ್ಲಿ 9.82 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಿರುವ ಕಲ್ಯಾಣ ಮಂಟಪ, ಇಂಜಾಡಿಯಲ್ಲಿ43.04 ಲಕ್ಷ ರೂ ವೆಚ್ಚದಲ್ಲಿ ದೇವಸ್ಥಾನದ ಡಿ ಗ್ರೂಪ್ ನೌಕರರಿಗೆ ವಸತಿಗೃಹ, ದೇವಸ್ಥಾನದ ವತಿಯಿಂದ ಇಂಜಾಡಿ ಬಳಿ 58.06 ಲಕ್ಷ ರೂ ವೆಚ್ಚದಲ್ಲಿ ಆಧುನಿಕ ಮುಕ್ತಿಧಾಮ, ಅಗ್ರಹಾರ ಬಳಿ ನಕ್ಷತ್ರವನದಲ್ಲಿ 26.10 ಲಕ್ಷ ರೂ ವೆಚ್ಚದಲ್ಲಿ ನವೀಕೃತ ಗಾರ್ಡನ್, ಷಣ್ಮುಖ ಭೋಜನ ಶಾಲೆಗೆ11.98 ಲಕ್ಷ ರೂ ವೆಚ್ಚದಲ್ಲಿ ಡಿಸ್ ವಾಷಿಂಗ್ ಮೆಷಿನ್ ಅಳವಡಿಕೆ, ಆದಿಶೇಷ ವಸತಿಗೃಹದಲ್ಲಿ 13.54 ಲಕ್ಷ ರೂ ವೆಚ್ಚದಲ್ಲಿ ಲಿಪ್ಟ್ ವ್ಯವಸ್ಥೆ, ಆದಿಶೇಷ ವಸತಿಗೃ ಹಕ್ಕೆ 12.58 ಲಕ್ಷ ರೂ ವೆಚ್ಚದಲ್ಲಿ ಜನರೇಟರ್ ಅಳವಡಿಕೆ, ಆದಿಶೇಷ ಮುಂಭಾಗದ ನವೀಕೃತ ಗಾರ್ಡನ್ ಇವುಗಳ ಉದ್ಘಾಟನೆ ನೆರವೇರಿತು.
ಸ.ಪ ಪೂರ್ವ ಕಾಲೇಜು ಬಳಿ 20.68 ಲಕ್ಷ ರೂ ವೆಚ್ಚದಲ್ಲಿ ಬಾಲಕರ ಶೌಚಾಲಯ ನಿರ್ಮಾಣ, ಕೆಎಸ್‍ಆರ್‍ಟಿಸಿ ಬಳಿ ಸಾರ್ವಜನಿಕ ಶೌಚಾಲಯ, ಸವಾರಿಮಂಟಪ ಬಳಿ ಶೌಚಾಲಯ, ಅರಣ್ಯ ಇಲಾಖೆ ಹಿಂಬಾಗ ಶೌಚಾಲಯ ನಿರ್ಮಾಣ ಕಾಮಗಾರಿಗಳಿಗೆ ಇದೇ ವೇಳೆ ಶಂಕುಸ್ಥಾಪನೆ ನೆರವೇರಿಸಲಾಯಿತು.

Advertisement

ಶಂಕುಸ್ಥಾಪನೆ ನೆರವೇರಿಸಿದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಮಾತನಾಡಿ, “ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಮೂಲ ಸೌಕರ್ಯ ಈಡೇರಿಕೆ ಜತೆಗೆ ಕ್ಷೇತ್ರಕ್ಕಾಗಮಿಸುವ ಭಕ್ತರ, ದೇವಸ್ಥಾನದ ನೌಕರರ, ವಿದ್ಯಾರ್ಥಿಗಳ ಹಿತಕಾಯಲು ದೇವಸ್ಥಾನದ ಆಡಳಿತ ಸಂಪೂರ್ಣ ಬದ್ಧವಿದೆ. ದೇವಸ್ಥಾನಕ್ಕೆ ಹೆಚ್ಚಿನ ಭಕ್ತರು ಆಗಮಿಸುತ್ತಿದ್ದು ಅವರ ಮೂಲಸೌಕರ್ಯ ಈಡೇರಿಸುವುದು ನಮ್ಮ ಕರ್ತವ್ಯ, ಜತೆಗೆ ಕ್ಷೇತ್ರದಲ್ಲಿ ಹಲವು ಮೂಲ ಸೌಕರ್ಯಗಳ ಕೊರತೆ ಇತ್ತು. ಡಿ. ಗ್ರೂಪ್ ನೌಕರರ ವಾಸ್ತವ್ಯಕ್ಕೆ ಕೊಠಡಿಗಳಿರಲಿಲ್ಲ. ಸಾಮಾನ್ಯ ವರ್ಗಕ್ಕೆ ಅನುಕೂಲವಾಗುವ ಕಲ್ಯಾಣ ಮಂಟಪ ನಿರ್ಮಾಣ ಇವೆಲ್ಲವನ್ನು ಪರಿಹರಿಸುವಲ್ಲಿ ನಮ್ಮ ಆಡಳಿತ ಆರಂಭದಿಂದಲೂ ಹೆಚ್ಚು ಮುತುವರ್ಜಿ ವಹಿಸಿ ಅಭಿವೃದ್ಧಿ ನಡೆಸುತ್ತ ಬಂದಿದೆ ಎಂದರು.

ದೇಗುಲದ ಕಾರ್ಯನಿರ್ವಾಹಣಾಧಿಕಾರಿ ರವೀಂದ್ರ ಎಚ್, ಎಂ, ಸಹಾಯಕ ಕಾರ್ಯನಿರ್ವಾಹಣಾಧಿಕಾರಿ ಚಂದ್ರಶೇಖರ ಪೆರಾಲ್, ಸಮಿತಿ ಸದಸ್ಯರಾದ ಬಾಲಕೃಷ್ಣ ಬಳ್ಳೇರಿ, ಕೃಷ್ಣಮೂರ್ತಿ ಭಟ್, ಮಹೇಶ್ ಕುಮಾರ್ ಕರಿಕ್ಕಳ, ರಾಜೀವಿ ಆರ್ ರೈ, ರವೀಂದ್ರನಾಥ ಶೆಟ್ಟಿ, ಮಾಧವ ಡಿ. ತಾ.ಪಂ ಸದಸ್ಯ ಅಶೋಕ್ ನೆಕ್ರಾಜೆ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯೆ ವಿಮಲ ರಂಗಯ್ಯ, ದೇಗುಲದ ಬಾಲಸುಬ್ರಹ್ಮಣ್ಯ ಭಟ್, ಮಾಸ್ಟರ್ ಪ್ಲಾನ್ ಸಮಿತಿಯ ಕೆ.ಪಿ ಗಿರಿಧರ, ಶಿವರಾಮ ರೈ, ಲೋಲಾಕ್ಷ, ಗ್ರಾ.ಪಂ ಉಪಾಧ್ಯಕ್ಷ ರಾಜೇಶ್ ಎನ್ ಎಸ್, ಪಿಡಿಒ ಮುತ್ತಪ್ಪ. ಪಂಚಾಯತ್ ಕಾರ್ಯದರ್ಶಿ ಮೋನಪ್ಪ ಡಿ, ದೇಗುಲದ ಇಂಜಿನೀಯರ್ ಉದಯಕುಮಾರ್, ಪ್ರಾಂಶುಪಾಲೆ ಸಾವಿತ್ರಿ, ನಿವೃತ್ತ ಪ್ರಾಂಶುಪಾಲ ಪ್ರೋ ರಂಗಯ್ಯ ಶೆಟ್ಟಿಗಾರ್, ಮುಖ್ಯ ಶಿಕ್ಷಕ ಯಶವಂತ ರೈ, ಗ್ರಾ.ಪಂ ಸದಸ್ಯರಾದ ದಿನೇಶ್ ಬಿ.ಎನ್, ಮೋಹನದಾಸ್ ರೈ, ಸೌಮ್ಯ ಬಿ, ಭವಾನಿಶಂಕರ ಪೂಂಬಾಡಿ, ಪ್ರಶಾಂತ ಭಟ್ ಮಾಣಿಲ, ಪ್ರಮುಖರಾದ ಯಜ್ಞೇಶ್ ಆಚಾರ್, ರವಿಕಕ್ಕೆಪದವು, ಗೋಪಾಲ ಎಣ್ಣೆಮಜಲು, ಉಪನ್ಯಾಸಕ ಸೋಮಶೇಖರ, ಪ್ರಕಾಶ್ ಕುಂದಾಪುರ, ಸುಬ್ರಹ್ಮಣ್ಯ ರಾವ್, ಗುತ್ತಿಗೆದಾರರು ಮತ್ತಿತರು ಉಪಸ್ಥಿತರಿದ್ದರು.

Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ನೀರಿಗಾಗಿ ಏಕಾಂಗಿಯಾಗಿ ಸುರಂಗ ತೋಡಿದ ಕೃಷಿಕ | ಹಸಿರಾದ ಕೃಷಿ |
November 25, 2024
8:44 PM
by: The Rural Mirror ಸುದ್ದಿಜಾಲ
ಗುಬ್ಬಚ್ಚಿ ಸಂಕುಲ ರಕ್ಷಣೆಗೆ ಪ್ರಧಾನಿ ಕರೆ | ಬೇಲೂರಿನಲ್ಲಿ ಸಚಿವ ಪ್ರಲ್ಹಾದ್ ಜೋಶಿ ಹೇಳಿಕೆ
November 25, 2024
8:15 PM
by: The Rural Mirror ಸುದ್ದಿಜಾಲ
ಮಹಿಳಾ ಉದ್ಯಮಿಗಳಿಗೆ  ಎನ್‍ಆರ್ ಎಲ್‍ಎಮ್ ಯೋಜನೆ ಸ್ಪೂರ್ತಿಯ ಸೆಲೆಯಾಗಿದೆ
November 25, 2024
8:07 PM
by: The Rural Mirror ಸುದ್ದಿಜಾಲ
ಕೊಡಗು ಜಿಲ್ಲೆಯಲ್ಲಿ ಅಕ್ರಮ ಲಾಟರಿ,  ಮಟ್ಕಾಗೆ ಪೂರ್ಣ ಪ್ರಮಾಣದಲ್ಲಿ ಕಡಿವಾಣ  ಹಾಕಲು ಜಿಲ್ಲಾಡಳಿತ ಸೂಚನೆ
November 25, 2024
8:03 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror