ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ಭಕ್ತರ ಹಿತರಕ್ಷಣಾ ವೇದಿಕೆಯ ಸಭೆ ಭಾನುವಾರ ಸುಬ್ರಹ್ಮಣ್ಯದಲ್ಲಿ ನಡೆಯಿತು. ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಂಬಂಧಿಸಿದ ಹೋರಾಟ ಮುಂದುವರಿಸಲು ಇದೇ ಸಂದರ್ಭ ನಿರ್ಧರಿಸಲಾಯಿತು.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಭದ್ರತೆಯ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಧಾರ್ಮಿಕ ಮತ್ತು ಮುಜರಾಯಿ ಸಚಿವರನ್ನು ಭೇಟಿಯಾಗಲು ಸದ್ಯದಲ್ಲೇ ತೆರಳಲು ನಿರ್ಧರಿಸಲಾಯಿತು. ಕುಮಾರಧಾರಾ ಬಳಿಯ ಸೋಮನಾಥೇಶ್ವರ ದೇವಾಲಯಕ್ಕೆ ಸಂಬಂಧಿಸಿ ಕಾನೂನು ಹೋರಾಟ ಮಾಡುವುದು, ಪರಬೋಕು ಜಾಗವನ್ನು ಸರಕಾರ ಮರುವಶ ಪಡಿಸಿಕೊಳ್ಳುವಂತೆ ಹೋರಾಟ ಮಾಡಲು ನಿರ್ಧರಿಸಲಾಯಿತು.
ಸಭೆಯಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ಭಕ್ತರ ಹಿತರಕ್ಷಣಾ ವೇದಿಕೆಯ ರಾಜ್ಯಾಧ್ಯಕದ್ಷ ಮಹೇಶ್ ಕುಮಾರ್ ಕರಿಕಳ, ರಾಜ್ಯ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಎನ್.ಕೆ ಜಗನ್ನಿವಾಸ ರಾವ್, ಪ್ರಮುಖರಾದ ಶ್ರೀನಾಥ್ ಭಟ್, ಶಿವರಾಮ ರೈ, ಜಯರಾಮ ಗೌಡ ಕಟ್ಟೆಮನೆ, ಶಶಿಧರ್ ವಿ ಎನ್ , ಗೋಪಾಲ ಎಣ್ಣೆಮಜಲು, ಗುರುಪ್ರಸಾದ್ ಪಂಜ ಮೊದಲಾದವರು ಇದ್ದರು.
ಕರ್ನಾಟಕದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜುಲೈ 1ರಿಂದ ಅಕ್ಟೋಬರ್ 14ರವರೆಗೆ ದಾಖಲೆಯ…
https://youtu.be/PgODhBnoUso?si=CtTWIV_6u7GnfVGw
ಕರ್ನಾಟಕದಲ್ಲಿ ಅ.15ರಿಂದ ಹಿಂಗಾರು ಮಳೆ ಆರಂಭವಾಗುವ ಲಕ್ಷಣಗಳಿದ್ದು, ಅ.16ರಿಂದ ಕರಾವಳಿ ಹಾಗೂ ಉತ್ತರ…
ಕೊಡಗಿನ ಸಂಪಾಜೆಯಿಂದ ಮಂಗಳೂರಿಗೆ ಸ್ವಚ್ಛತಾ ದಂಡಯಾತ್ರೆ ಕೈಗೊಂಡಿರುವ ನಾಗರಾಜ್ ಬಜಾಲ್ ಅವರು ಇದುವರೆಗಿನ…
ಸುಳ್ಯದ ಎಪಿಎಂಸಿ ರಸ್ತೆಯ ಆಶೀರ್ವಾದ್ ಕಟ್ಟಡದ ಮೊದಲ ಮಹಡಿಯಲ್ಲಿ ಆರಂಭವಾಗುತ್ತಿರುವ ಪ್ರಶಾಂತಿ ಡೆಂಟಲ್…