Advertisement
ವೆದರ್ ಮಿರರ್

ಹವಾಮಾನ ವರದಿ | 24-09-2026 | ಸೆ.29ರಿಂದ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ

Share

ಕರ್ನಾಟಕದಲ್ಲಿ ಸದ್ಯ ಮಳೆಯ ಪ್ರಮಾಣ ಕಡಿಮೆಯಾಗಿದ್ದರೂ, ಮುಂದಿನ ಕೆಲವು ದಿನಗಳಲ್ಲಿ ಹವಾಮಾನದಲ್ಲಿ ಮತ್ತೆ ಬದಲಾವಣೆಯಾಗುವ ಲಕ್ಷಣಗಳು ಕಾಣಿಸುತ್ತಿವೆ. ಕರಾವಳಿ ಭಾಗದಲ್ಲಿ ಈಗಾಗಲೇ ಅಲ್ಲಲ್ಲಿ ಮಳೆಯಾಗುತ್ತಿದ್ದು, ಸೆಪ್ಟೆಂಬರ್ 28–29ರಿಂದ ರಾಜ್ಯದ ಹಲವು ಭಾಗಗಳಲ್ಲಿ ಗುಡುಗು ಸಹಿತ ಮಳೆ ಆರಂಭವಾಗುವ ಸಾಧ್ಯತೆ ಇದೆ. ಬಂಗಾಳಕೊಲ್ಲಿಯ ವಾಯುಭಾರ ಕುಸಿತವು ಉತ್ತರದತ್ತ ಚಲಿಸುತ್ತಿರುವ ಹಿನ್ನೆಲೆಯಲ್ಲಿ ಈ ಹವಾಮಾನ ಬದಲಾವಣೆ ಉಂಟಾಗುವ ಸಾಧ್ಯತೆ ಇದೆ.

ಕರಾವಳಿ:  ಕಾಸರಗೋಡು ಸೇರಿದಂತೆ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಬಿಸಿಲಿನ ಪ್ರಮಾಣ ಕಡಿಮೆಯಾಗಿದ್ದು, ಮೋಡ ಹಾಗೂ ಅಲ್ಲಲ್ಲಿ ಮಳೆಯ ವಾತಾವರಣವಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಬೆಳಗ್ಗಿನಿಂದಲೇ ಮಳೆಯಾಗುತ್ತಿದ್ದು, ಕರಾವಳಿ ತೀರ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ತುಸು ಹೆಚ್ಚಿರುವ ಸಾಧ್ಯತೆ ಇದೆ. ಈಗಿನ ಮುನ್ಸೂಚನೆಯಂತೆ ಕರಾವಳಿ ಜಿಲ್ಲೆಗಳಲ್ಲಿ ಸೆಪ್ಟೆಂಬರ್ 26ರವರೆಗೆ ಅಲ್ಲಲ್ಲಿ ಸಣ್ಣ ಪ್ರಮಾಣದ ಮಳೆಯಾಗಬಹುದು. ಬಳಿಕ ಮಳೆ ಕಡಿಮೆಯಾಗುವ ಸಾಧ್ಯತೆ ಇದ್ದರೂ, ಸೆಪ್ಟೆಂಬರ್ 29ರಿಂದ ಘಟ್ಟದ ಕೆಳಭಾಗದ ಪ್ರದೇಶಗಳಲ್ಲಿ ಗುಡುಗು ಸಹಿತ ಮಳೆ ಆರಂಭವಾಗುವ ಲಕ್ಷಣಗಳಿವೆ.

ಮಲೆನಾಡು:  ಕೊಡಗು, ಹಾಸನದ ಸಕಲೇಶಪುರ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ. ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಅಲ್ಲಲ್ಲಿ ಸಾಮಾನ್ಯ ಮಳೆಯಾಗುವ ಸಾಧ್ಯತೆ ಇದೆ.  ಮಲೆನಾಡಿನ ಜಿಲ್ಲೆಗಳಲ್ಲಿ ಸೆಪ್ಟೆಂಬರ್ 27ರವರೆಗೆ ಅಲ್ಲಲ್ಲಿ ಮೋಡದ ವಾತಾವರಣ ಇರಬಹುದು. ಶಿವಮೊಗ್ಗ ಜಿಲ್ಲೆಯಲ್ಲಿ ಸೆಪ್ಟೆಂಬರ್ 25ರಂದು ಕೂಡ ಕೆಲವೆಡೆ ತುಂತುರು ಮಳೆಯಾಗುವ ಸಾಧ್ಯತೆ ಇದೆ. ಸೆಪ್ಟೆಂಬರ್ 28–29ರಿಂದ ಮಲೆನಾಡಿನ ಹಲವು ಭಾಗಗಳಲ್ಲಿ ಗುಡುಗು ಸಹಿತ ಮಳೆ ಆರಂಭವಾಗುವ ಸಾಧ್ಯತೆ ಇದೆ.

ಉತ್ತರ ಒಳನಾಡು:  ಬೆಳಗಾವಿ, ಧಾರವಾಡ, ಹಾವೇರಿ ಹಾಗೂ ಬೀದರ್ ಜಿಲ್ಲೆಗಳ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಉಳಿದ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇರಬಹುದು.  ಈಗಿನ ಮುನ್ಸೂಚನೆಯಂತೆ ಸೆಪ್ಟೆಂಬರ್ 25ರಿಂದ ಉತ್ತರ ಒಳನಾಡಿನಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇದ್ದು, ಸೆಪ್ಟೆಂಬರ್ 29ರಿಂದ ಮತ್ತೆ ಅಲ್ಲಲ್ಲಿ ಮಳೆ ಆರಂಭವಾಗುವ ಲಕ್ಷಣಗಳಿವೆ.

ದಕ್ಷಿಣ ಒಳನಾಡು:  ದಾವಣಗೆರೆ ಹಾಗೂ ವಿಜಯನಗರ ಜಿಲ್ಲೆಗಳ ಅಲ್ಲಲ್ಲಿ ಸಾಮಾನ್ಯ ಮಳೆಯ ಸಾಧ್ಯತೆ ಇದೆ. ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳ ಅಲ್ಲಲ್ಲಿ ತುಂತುರು ಮಳೆಯಾಗಬಹುದು. ಉಳಿದ ಜಿಲ್ಲೆಗಳಲ್ಲಿ ಬಿಸಿಲು ಮತ್ತು ಅಲ್ಲಲ್ಲಿ ಮೋಡದ ವಾತಾವರಣ ಇರಲಿದೆ.  ಸೆಪ್ಟೆಂಬರ್ 25ರಿಂದ ದಕ್ಷಿಣ ಒಳನಾಡಿನ ಬಹುತೇಕ ಭಾಗಗಳಲ್ಲಿ ಮೋಡ–ಬಿಸಿಲಿನ ವಾತಾವರಣ ಮುಂದುವರಿಯುವ ಸಾಧ್ಯತೆ ಇದ್ದು, ಸೆಪ್ಟೆಂಬರ್ 29ರಿಂದ ಅಲ್ಲಲ್ಲಿ ಗುಡುಗು ಸಹಿತ ಮಳೆ ಆರಂಭವಾಗುವ ಲಕ್ಷಣಗಳಿವೆ.

ಉತ್ತರದತ್ತ ಸಾಗುತ್ತಿರುವ ವಾಯುಭಾರ ಕುಸಿತ :  ಬಂಗಾಳಕೊಲ್ಲಿಯಲ್ಲಿ ರೂಪುಗೊಂಡಿರುವ ವಾಯುಭಾರ ಕುಸಿತವು ಉತ್ತರ ಆಂಧ್ರದ ಮೂಲಕ ಭೂಭಾಗ ಪ್ರವೇಶಿಸಿ, ಬಳಿಕ ಉತ್ತರದತ್ತ ಚಲಿಸುವ ಲಕ್ಷಣಗಳಿವೆ. ಈ ಹವಾಮಾನ ವ್ಯವಸ್ಥೆಯು ಛತ್ತೀಸ್‌ಗಢ, ಮಧ್ಯಪ್ರದೇಶ ಹಾಗೂ ಉತ್ತರ ಪ್ರದೇಶದ ಮೂಲಕ ಸಾಗುವ ಸಾಧ್ಯತೆ ಇದೆ. ಸುಮಾರು ಸೆಪ್ಟೆಂಬರ್ 29–30ರ ವೇಳೆಗೆ ಈ ವಾಯುಭಾರ ಕುಸಿತವು ಹಿಮಾಚಲ ಪ್ರದೇಶದತ್ತ ತಲುಪಿ ಕ್ರಮೇಣ ಶಿಥಿಲಗೊಳ್ಳುವ ಸಾಧ್ಯತೆ ಇದೆ.

ವಾಯುಭಾರ ಕುಸಿತ ಶಿಥಿಲಗೊಳ್ಳುವ ಹಂತದಲ್ಲಿ ಕರ್ನಾಟಕದಲ್ಲಿ ಹಿಂಗಾರು ಮಳೆಯ ರೀತಿಯ ಗುಡುಗು ಸಹಿತ ಮಳೆಯ ವಾತಾವರಣ ಆರಂಭವಾಗುವ ಲಕ್ಷಣಗಳು ಕಾಣಿಸುತ್ತಿವೆ. ಹೀಗಾಗಿ ಸದ್ಯ ಮಳೆ ಕಡಿಮೆಯಾಗಿದ್ದರೂ ಸೆಪ್ಟೆಂಬರ್ ಕೊನೆಯ ವಾರದಲ್ಲಿ ಮತ್ತೆ ಮಳೆಯ ಚಟುವಟಿಕೆ ಚುರುಕಾಗುವ ಸಾಧ್ಯತೆ ಇದೆ.

ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಫಾಲೋಮಾಡಲು ಇಲ್ಲಿ ಕ್ಲಿಕ್‌ ಮಾಡಿ

Rainfall activity over Karnataka is currently moderate to low in many areas, but weather conditions are expected to become more active again from around September 28–29. Coastal Karnataka is receiving scattered rain, with North Kannada seeing rainfall from the morning, while light rain may continue in coastal areas until September 26. Malnad is expected to remain mostly cloudy through September 27, followed by possible thunderstorms from September 28–29. North Interior Karnataka may see reduced rainfall from September 25, with scattered rain returning from around September 29. South Interior Karnataka is also likely to see more thunderstorms from September 29. A low-pressure system from the Bay of Bengal is expected to move inland through northern Andhra Pradesh and travel northwards across Chhattisgarh, Madhya Pradesh and Uttar Pradesh before weakening near Himachal Pradesh around September 29–30. Its weakening phase may coincide with renewed thunderstorm activity over Karnataka.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಸಾಯಿಶೇಖರ್ ಕರಿಕಳ

ಕೃಷಿಕ, ಹವಾಮಾನ ಆಸಕ್ತ

Published by
ಸಾಯಿಶೇಖರ್ ಕರಿಕಳ

Recent Posts

ತ್ರಿಪುರಾದಲ್ಲಿ ರಬ್ಬರ್‌ ಏಕಬೆಳೆ ಕೃಷಿಗೆ ಬ್ರೇಕ್‌? ಹೆಬ್ಬೇವು, ಅಗ್ರೋಫಾರೆಸ್ಟ್ರಿಯತ್ತ ಗಮನ

ತ್ರಿಪುರಾದಲ್ಲಿ ರಬ್ಬರ್‌ ಏಕಬೆಳೆ ತೋಟಗಳ ವಿಸ್ತರಣೆಯಿಂದ ಜೀವವೈವಿಧ್ಯ, ಮಣ್ಣು ಮತ್ತು ನೀರಿನ ಮೇಲೆ…

7 hours ago

ವಿಶ್ವದ ಶೇ.79ರಷ್ಟು ನದಿಗಳಲ್ಲಿ ಆಮ್ಲಜನಕ ಕುಸಿತ- ಉಷ್ಣವಲಯದ ನದಿಗಳಿಗೆ ಹೆಚ್ಚು ಅಪಾಯ

ವಿಶ್ವದ 21,439 ನದಿ ತೋಡುಗಳ ಅಧ್ಯಯನದಲ್ಲಿ ಶೇ.78.8ರಷ್ಟು ನದಿಗಳಲ್ಲಿ ಕಳೆದ ನಾಲ್ಕು ದಶಕಗಳಲ್ಲಿ…

17 hours ago

ಹವಾಮಾನ ವರದಿ | 23-09-2026 | ಸೆ.30 ರಿಂದ ಮತ್ತೆ ಬದಲಾಗಲಿದೆ ಹವಾಮಾನ..!

ಕರ್ನಾಟಕದಲ್ಲಿ ಸದ್ಯ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಕರಾವಳಿ–ಮಲೆನಾಡಿನಲ್ಲಿ ಸೆ.26 ರವರೆಗೆ ಅಲ್ಲಲ್ಲಿ ತುಂತುರು…

1 day ago

ಕರ್ನಾಟಕದಲ್ಲಿ ಮುಂದಿನ 4 ದಿನ ಭಾರೀ ಮಳೆ ಸಾಧ್ಯತೆ..! ಎಲ್ಲೆಲ್ಲಾ ರೆಡ್‌ ಎಲರ್ಟ್..?‌ ಯಾವಾಗ..?

ಬಂಗಾಳಕೊಲ್ಲಿಯ ವಾಯುಭಾರ ಕುಸಿತದ ಪರಿಣಾಮ ರಾಜ್ಯದಲ್ಲಿ ಮುಂದಿನ ನಾಲ್ಕು ದಿನ ಮಳೆ ಚುರುಕಾಗಲಿದ್ದು,…

1 day ago

₹1.65 ಲಕ್ಷದ ಐಫೋನ್‌ಗಾಗಿ ಬೆಳಗ್ಗೆಯಿಂದಲೇ ಸರದಿ..! ಬೆಂಗಳೂರಿನಿಂದ ಮುಂಬೈವರೆಗೆ ಕಂಡ ‘ಐಫೋನ್‌ ಕ್ರೇಜ್’

₹1.65 ಲಕ್ಷದಿಂದ ಬೆಲೆ ಆರಂಭವಾಗುವ ಐಫೋನ್‌ 18 ಪ್ರೊ ಖರೀದಿಗಾಗಿ ದೇಶದ ಹಲವು…

2 days ago

ಹವಾಮಾನ ವರದಿ | 21-09-2026 | ಕರಾವಳಿಯಲ್ಲಿ ಜೋರು ಮಳೆಯ ಸಾಧ್ಯತೆ ಕಡಿಮೆ

ಅರಬ್ಬಿ ಸಮುದ್ರದ ಕಡೆಯಿಂದ ಬೀಸುವ ಗಾಳಿಯ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಮುನ್ಸೂಚನೆಯಲ್ಲಿದ್ದಷ್ಟು…

3 days ago