ಕರ್ನಾಟಕದ ವಿವಿಧ ಭಾಗಗಳಲ್ಲಿ ಕಳೆದ ಕೆಲವು ದಿನಗಳಿಂದ ಕಂಡುಬರುತ್ತಿರುವ ಮಳೆಯ ವಾತಾವರಣ ನವೆಂಬರ್ 27ರಿಂದ ನಿಧಾನವಾಗಿ ಕಡಿಮೆಯಾಗುವ ಲಕ್ಷಣಗಳಿವೆ. ಕರಾವಳಿ, ಮಲೆನಾಡು ಮತ್ತು ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಇಂದೂ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ. ಆದರೆ ಉತ್ತರ ಒಳನಾಡಿನಲ್ಲಿ ಮಳೆಯ ಸಾಧ್ಯತೆ ಕಡಿಮೆಯಾಗುತ್ತಿದ್ದು, ದಿನ ಕಳೆದಂತೆ ಬಿಸಿಲಿನ ವಾತಾವರಣ ಹೆಚ್ಚಾಗುವ ನಿರೀಕ್ಷೆಯಿದೆ.
ಡಿಸೆಂಬರ್ ಮೊದಲ ವಾರದಲ್ಲಿ ಮತ್ತೊಂದು ಮಳೆಯ ಸಾಧ್ಯತೆ? : ನವೆಂಬರ್ 29ರ ಸುಮಾರಿಗೆ ಅಂಡಮಾನ್ ಸಮುದ್ರದ ದಕ್ಷಿಣ ಕರಾವಳಿ ಸಮೀಪ ವಾಯುಭಾರ ಕುಸಿತಕ್ಕೆ ಅನುಕೂಲಕರವಾದ ಹವಾಮಾನ ವ್ಯವಸ್ಥೆ ರೂಪುಗೊಳ್ಳುವ ಲಕ್ಷಣಗಳಿವೆ. ನವೆಂಬರ್ 30ರ ನಂತರ ಈ ವ್ಯವಸ್ಥೆ ವಾಯುಭಾರ ಕುಸಿತವಾಗಿ, ಬಳಿಕ ಚಂಡಮಾರುತವಾಗಿ ಬಲಗೊಳ್ಳುವ ಸಾಧ್ಯತೆಯೂ ಇದೆ.
ಪ್ರಾಥಮಿಕ ಮುನ್ಸೂಚನೆಯ ಪ್ರಕಾರ, ಈ ವ್ಯವಸ್ಥೆಯು ಡಿಸೆಂಬರ್ 6 ಅಥವಾ 7ರ ಸುಮಾರಿಗೆ ತಮಿಳುನಾಡು ಅಥವಾ ಆಂಧ್ರಪ್ರದೇಶದ ಕರಾವಳಿಯನ್ನು ತಲುಪಬಹುದು. ಆದರೆ ಅದರ ತೀವ್ರತೆ, ಚಲನೆಯ ಹಾದಿ ಮತ್ತು ಭೂ ಪ್ರವೇಶದ ಸ್ಥಳ ಇನ್ನೂ ಖಚಿತವಾಗಿಲ್ಲ.
ಈ ಹವಾಮಾನ ವ್ಯವಸ್ಥೆಯ ಬೆಳವಣಿಗೆಯಿಂದ ಕರ್ನಾಟಕದಲ್ಲಿಯೂ ಮತ್ತೆ ಮಳೆಯ ಸಾಧ್ಯತೆ ನಿರ್ಮಾಣವಾಗಬಹುದೇ ಎಂಬುದನ್ನು ಕಾದು ನೋಡಬೇಕಾಗಿದೆ. ಮುಂದಿನ ದಿನಗಳಲ್ಲಿ ಇದರ ಪಥ ಸ್ಪಷ್ಟವಾದ ಬಳಿಕ ರಾಜ್ಯದ ಮಳೆಯ ಮುನ್ಸೂಚನೆಯ ಬಗ್ಗೆಯೂ ಹೆಚ್ಚಿನ ಮಾಹಿತಿ ದೊರೆಯಬಹುದು.
ರೈತರು ಗಮನಿಸಬೇಕಾದ ಅಂಶ : ನವೆಂಬರ್ 28ರಿಂದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಕಡಿಮೆಯಾಗುವ ಸೂಚನೆ ಇರುವುದರಿಂದ ರೈತರು ಕೊಯ್ಲು, ಒಣಗಿಸುವಿಕೆ ಮತ್ತು ತೋಟದ ನಿರ್ವಹಣಾ ಕಾರ್ಯಗಳನ್ನು ಸ್ಥಳೀಯ ಹವಾಮಾನಕ್ಕೆ ಅನುಗುಣವಾಗಿ ಯೋಜಿಸಬಹುದು. ಆದರೆ ಡಿಸೆಂಬರ್ ಮೊದಲ ವಾರದಲ್ಲಿ ಮತ್ತೊಂದು ಮಳೆಯ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ವಹಿಸುವುದು ಉತ್ತಮ.
ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಫಾಲೋಮಾಡಲು ಇಲ್ಲಿ ಕ್ಲಿಕ್ ಮಾಡಿ
ನವೆಂಬರ್ 29ರಿಂದ ನಂದಿನಿ ಮೊಸರಿನ ದರ ಇಳಿಕೆಯಾಗಲಿದೆ. ಅರ್ಧ ಲೀಟರ್ ಮೊಸರಿಗೆ ₹1…
ವಿಯೆಟ್ನಾಂನ 27 ವರ್ಷದ ಬಾರ್ಟೆಂಡರ್ ನ್ಗುಯೆನ್ ತುಂಗ್ ಲಾಮ್ ಅವರು ಅಡಿಕೆ ಮತ್ತು…
ನವೆಂಬರ್ 30ರಂದು ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದಲ್ಲಿ ಕರಾವಳಿ ವಿಭಾಗ ಮಟ್ಟದ…
ರಾಜ್ಯದ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಮುಂದಿನ ಮೂರು ತಿಂಗಳೊಳಗೆ ಕಿಮೋಥೆರಪಿ ಡೇ-ಕೇರ್ ಕೇಂದ್ರಗಳನ್ನು ಸ್ಥಾಪಿಸಲು…
ರಾಜ್ಯದ 30 ಜಿಲ್ಲೆಗಳ 1,101 ಜಿಲ್ಲಾ ಪಂಚಾಯತ್ ಕ್ಷೇತ್ರಗಳು ಹಾಗೂ 234 ತಾಲೂಕು…
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ವಿವಿಧೆಡೆ ಹಾಗೂ ಕಡಬ, ಪುತ್ತೂರು ತಾಲೂಕಿನ…