ಹವಾಮಾನ ವರದಿ | 26-11-2026 | ಡಿಸೆಂಬರ್ ಮೊದಲ ವಾರದಲ್ಲಿ ಮತ್ತೆ ಮಳೆಯ ಸಾಧ್ಯತೆ?

November 26, 2026
9:10 PM
ಕರ್ನಾಟಕದ ಕರಾವಳಿ, ಮಲೆನಾಡು ಮತ್ತು ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ನವೆಂಬರ್ 27ರಂದು ಗುಡುಗು ಸಹಿತ ಮಳೆಯ ಮುನ್ಸೂಚನೆ ಇದ್ದು, ನ.28ರಿಂದ ಮಳೆ ಕಡಿಮೆಯಾಗುವ ಸಾಧ್ಯತೆಯಿದೆ. ಇದೇ ವೇಳೆ ಅಂಡಮಾನ್ ಸಮುದ್ರದ ದಕ್ಷಿಣ ಭಾಗದಲ್ಲಿ ನ.29ರ ಸುಮಾರಿಗೆ ಹೊಸ ಹವಾಮಾನ ವ್ಯವಸ್ಥೆ ರೂಪುಗೊಳ್ಳುವ ಲಕ್ಷಣಗಳಿದ್ದು, ಡಿಸೆಂಬರ್ ಮೊದಲ ವಾರದಲ್ಲಿ ಮತ್ತೆ ಮಳೆಯಾಗುವ ಸಾಧ್ಯತೆಯನ್ನು ಗಮನಿಸಬೇಕಿದೆ.

ಕರ್ನಾಟಕದ ವಿವಿಧ ಭಾಗಗಳಲ್ಲಿ ಕಳೆದ ಕೆಲವು ದಿನಗಳಿಂದ ಕಂಡುಬರುತ್ತಿರುವ ಮಳೆಯ ವಾತಾವರಣ ನವೆಂಬರ್ 27ರಿಂದ ನಿಧಾನವಾಗಿ ಕಡಿಮೆಯಾಗುವ ಲಕ್ಷಣಗಳಿವೆ. ಕರಾವಳಿ, ಮಲೆನಾಡು ಮತ್ತು ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಇಂದೂ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ. ಆದರೆ ಉತ್ತರ ಒಳನಾಡಿನಲ್ಲಿ ಮಳೆಯ ಸಾಧ್ಯತೆ ಕಡಿಮೆಯಾಗುತ್ತಿದ್ದು, ದಿನ ಕಳೆದಂತೆ ಬಿಸಿಲಿನ ವಾತಾವರಣ ಹೆಚ್ಚಾಗುವ ನಿರೀಕ್ಷೆಯಿದೆ.

Advertisement

ಡಿಸೆಂಬರ್ ಮೊದಲ ವಾರದಲ್ಲಿ ಮತ್ತೊಂದು ಮಳೆಯ ಸಾಧ್ಯತೆ? :  ನವೆಂಬರ್ 29ರ ಸುಮಾರಿಗೆ ಅಂಡಮಾನ್ ಸಮುದ್ರದ ದಕ್ಷಿಣ ಕರಾವಳಿ ಸಮೀಪ ವಾಯುಭಾರ ಕುಸಿತಕ್ಕೆ ಅನುಕೂಲಕರವಾದ ಹವಾಮಾನ ವ್ಯವಸ್ಥೆ ರೂಪುಗೊಳ್ಳುವ ಲಕ್ಷಣಗಳಿವೆ. ನವೆಂಬರ್ 30ರ ನಂತರ ಈ ವ್ಯವಸ್ಥೆ ವಾಯುಭಾರ ಕುಸಿತವಾಗಿ, ಬಳಿಕ ಚಂಡಮಾರುತವಾಗಿ ಬಲಗೊಳ್ಳುವ ಸಾಧ್ಯತೆಯೂ ಇದೆ.

ಪ್ರಾಥಮಿಕ ಮುನ್ಸೂಚನೆಯ ಪ್ರಕಾರ, ಈ ವ್ಯವಸ್ಥೆಯು ಡಿಸೆಂಬರ್ 6 ಅಥವಾ 7ರ ಸುಮಾರಿಗೆ ತಮಿಳುನಾಡು ಅಥವಾ ಆಂಧ್ರಪ್ರದೇಶದ ಕರಾವಳಿಯನ್ನು ತಲುಪಬಹುದು. ಆದರೆ ಅದರ ತೀವ್ರತೆ, ಚಲನೆಯ ಹಾದಿ ಮತ್ತು ಭೂ ಪ್ರವೇಶದ ಸ್ಥಳ ಇನ್ನೂ ಖಚಿತವಾಗಿಲ್ಲ.

ಈ ಹವಾಮಾನ ವ್ಯವಸ್ಥೆಯ ಬೆಳವಣಿಗೆಯಿಂದ ಕರ್ನಾಟಕದಲ್ಲಿಯೂ ಮತ್ತೆ ಮಳೆಯ ಸಾಧ್ಯತೆ ನಿರ್ಮಾಣವಾಗಬಹುದೇ ಎಂಬುದನ್ನು ಕಾದು ನೋಡಬೇಕಾಗಿದೆ. ಮುಂದಿನ ದಿನಗಳಲ್ಲಿ ಇದರ ಪಥ ಸ್ಪಷ್ಟವಾದ ಬಳಿಕ ರಾಜ್ಯದ ಮಳೆಯ ಮುನ್ಸೂಚನೆಯ ಬಗ್ಗೆಯೂ ಹೆಚ್ಚಿನ ಮಾಹಿತಿ ದೊರೆಯಬಹುದು.

ರೈತರು ಗಮನಿಸಬೇಕಾದ ಅಂಶ :  ನವೆಂಬರ್ 28ರಿಂದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಕಡಿಮೆಯಾಗುವ ಸೂಚನೆ ಇರುವುದರಿಂದ ರೈತರು ಕೊಯ್ಲು, ಒಣಗಿಸುವಿಕೆ ಮತ್ತು ತೋಟದ ನಿರ್ವಹಣಾ ಕಾರ್ಯಗಳನ್ನು ಸ್ಥಳೀಯ ಹವಾಮಾನಕ್ಕೆ ಅನುಗುಣವಾಗಿ ಯೋಜಿಸಬಹುದು. ಆದರೆ ಡಿಸೆಂಬರ್ ಮೊದಲ ವಾರದಲ್ಲಿ ಮತ್ತೊಂದು ಮಳೆಯ ಸಾಧ್ಯತೆ ಇರುವುದರಿಂದ  ಮುನ್ನೆಚ್ಚರಿಕೆ ವಹಿಸುವುದು ಉತ್ತಮ.

ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಫಾಲೋಮಾಡಲು ಇಲ್ಲಿ ಕ್ಲಿಕ್‌ ಮಾಡಿ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಸಾಯಿಶೇಖರ್ ಕರಿಕಳ

ಕೃಷಿಕ, ಹವಾಮಾನ ಆಸಕ್ತ

ಇದನ್ನೂ ಓದಿ

ನಂದಿನಿ ಮೊಸರಿನ ದರ ಇಳಿಕೆ – ನ.29ರಿಂದ ಹೊಸ ಬೆಲೆ ಜಾರಿ; ಲೀಟರ್‌ಗೆ ₹2 ಕಡಿತ!
November 26, 2026
9:00 PM
by: ದ ರೂರಲ್ ಮಿರರ್.ಕಾಂ
ಅಡಿಕೆಯಿಂದ ಕಾಕ್‌ಟೇಲ್ ತಯಾರಿಸಿದ ವಿಯೆಟ್ನಾಂ ಯುವಕ – ಅಡಿಕೆಗೆ ಜಾಗತಿಕ ವೇದಿಕೆಯಲ್ಲಿ ಹೊಸ ರೂಪ
November 26, 2026
8:50 PM
by: ದ ರೂರಲ್ ಮಿರರ್.ಕಾಂ
ಮಂಗಳೂರಿನಲ್ಲಿ ಬೃಹತ್ ಉದ್ಯೋಗ ಮೇಳ – 10 ಸಾವಿರಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳಿಗೆ ಅವಕಾಶ; ಆನ್‌ಲೈನ್ ನೋಂದಣಿ ಆರಂಭ
November 26, 2026
8:19 PM
by: ದ ರೂರಲ್ ಮಿರರ್.ಕಾಂ
ರಾಜ್ಯದ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಉಚಿತ ಕಿಮೋಥೆರಪಿ: ಮೂರು ತಿಂಗಳಲ್ಲಿ ಡೇ-ಕೇರ್ ಕೇಂದ್ರ ಸ್ಥಾಪನೆಗೆ ಗುರಿ
November 25, 2026
10:48 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror