ನಂದಿನಿ ಮೊಸರಿನ ದರ ಇಳಿಕೆ – ನ.29ರಿಂದ ಹೊಸ ಬೆಲೆ ಜಾರಿ; ಲೀಟರ್‌ಗೆ ₹2 ಕಡಿತ!

November 26, 2026
9:00 PM
ನವೆಂಬರ್ 29ರಿಂದ ನಂದಿನಿ ಮೊಸರಿನ ದರ ಇಳಿಕೆಯಾಗಲಿದೆ. ಅರ್ಧ ಲೀಟರ್ ಮೊಸರಿಗೆ ₹1 ಮತ್ತು ಒಂದು ಲೀಟರ್ ಮೊಸರಿಗೆ ₹2 ಕಡಿತವಾಗಿದ್ದು, ಹೊಸ ದರ ಕ್ರಮವಾಗಿ ₹33 ಮತ್ತು ₹66 ಆಗಲಿದೆ.

ನಂದಿನಿ ಮೊಸರು ಖರೀದಿಸುವ ಗ್ರಾಹಕರಿಗೆ ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ದರ ಇಳಿಕೆಯ ಸಿಹಿಸುದ್ದಿ ನೀಡಿದೆ. ನವೆಂಬರ್ 29ರಿಂದ ಜಾರಿಗೆ ಬರುವಂತೆ ನಂದಿನಿ ಬ್ರ್ಯಾಂಡ್ ಮೊಸರಿನ ದರವನ್ನು ಲೀಟರ್‌ಗೆ ₹2 ಕಡಿಮೆ ಮಾಡಲಾಗಿದೆ.

ನವೆಂಬರ್ 18ರಿಂದ ನಂದಿನಿ ಹಾಲು ಮತ್ತು ಮೊಸರಿನ ದರ ಪರಿಷ್ಕರಣೆ ಮಾಡಲಾಗಿತ್ತು. ಇದೀಗ ರಾಜ್ಯ ಸರ್ಕಾರದ ಸೂಚನೆಯಂತೆ ಮೊಸರಿನ ದರವನ್ನು ಮತ್ತೆ ಕಡಿಮೆ ಮಾಡಲು ಕೆಎಂಎಫ್ ಕ್ರಮ ಕೈಗೊಂಡಿದೆ. ಪರಿಷ್ಕೃತ ದರದಂತೆ ಅರ್ಧ ಲೀಟರ್ ಮೊಸರಿನ ಬೆಲೆಯಲ್ಲಿ ₹1 ಹಾಗೂ ಒಂದು ಲೀಟರ್ ಮೊಸರಿನ ಬೆಲೆಯಲ್ಲಿ ₹2 ಕಡಿತವಾಗಲಿದೆ. ನವೆಂಬರ್ 29ರಿಂದ ಈ ಹೊಸ ದರ ಜಾರಿಗೆ ಬರಲಿದೆ. ಹಾಲು ಮತ್ತು ಮೊಸರಿನ ದರ ಪರಿಷ್ಕರಣೆಯ ನಂತರ ಗ್ರಾಹಕರಿಗೆ ಮೊಸರಿನ ಬೆಲೆಯಲ್ಲಿ ಕೊಂಚ ರಿಲೀಫ್ ದೊರೆಯಲಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಡಿಕೆಯಿಂದ ಕಾಕ್‌ಟೇಲ್ ತಯಾರಿಸಿದ ವಿಯೆಟ್ನಾಂ ಯುವಕ – ಅಡಿಕೆಗೆ ಜಾಗತಿಕ ವೇದಿಕೆಯಲ್ಲಿ ಹೊಸ ರೂಪ
November 26, 2026
8:50 PM
by: ದ ರೂರಲ್ ಮಿರರ್.ಕಾಂ
ಮಂಗಳೂರಿನಲ್ಲಿ ಬೃಹತ್ ಉದ್ಯೋಗ ಮೇಳ – 10 ಸಾವಿರಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳಿಗೆ ಅವಕಾಶ; ಆನ್‌ಲೈನ್ ನೋಂದಣಿ ಆರಂಭ
November 26, 2026
8:19 PM
by: ದ ರೂರಲ್ ಮಿರರ್.ಕಾಂ
ರಾಜ್ಯದ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಉಚಿತ ಕಿಮೋಥೆರಪಿ: ಮೂರು ತಿಂಗಳಲ್ಲಿ ಡೇ-ಕೇರ್ ಕೇಂದ್ರ ಸ್ಥಾಪನೆಗೆ ಗುರಿ
November 25, 2026
10:48 PM
by: ದ ರೂರಲ್ ಮಿರರ್.ಕಾಂ
ಜನವರಿಯಲ್ಲಿ ಜಿಲ್ಲಾ, ತಾಲೂಕು ಪಂಚಾಯತ್ ಚುನಾವಣೆ? ಮೀಸಲಾತಿ ಅಂತಿಮ ಅಧಿಸೂಚನೆ ಪ್ರಕಟ – ಸಚಿವ ಖಂಡ್ರೆ
November 25, 2026
10:30 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror