ಕಾಣಿಯೂರು: ಕುದ್ಮಾರು ಗ್ರಾಮದ ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವವು ಎ.4ರಿಂದ ಎ.8ರವರೆಗೆ ನಡೆಯಲಿದ್ದು, ಇದರ ಪೂರ್ವ ಸಿದ್ದತೆ ಹಾಗೂ ಸಮಾಲೋಚನ ಸಭೆಯು ನ.17ರಂದು ದೇವಸ್ಥಾನದ ಸುಬ್ರಹ್ಮಣ್ಯೇಶ್ವರ ಸಭಾಭವನದಲ್ಲಿ ನಡೆಯಿತು.
ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಮಾತನಾಡಿ, ಬ್ರಹ್ಮಕಲಶೋತ್ಸವದ ಸಿದ್ದತೆ ಹಾಗೂ ಕಾರ್ಯ ಯೋಜನೆ ಕುರಿತು ವಿವರಿಸಿದರು ಹಾಗೂ ಆಭಿವೃದ್ದಿ ಕಾಮಗಾರಿಗಳ ನಕಾಶೆಯ ಕುರಿತು ಮಾಹಿತಿ ನೀಡುತ್ತಾ ಆಡುಗೆ ಕೊಠಡಿ, ದೇವಸ್ಥಾನದ ಸುತ್ತು ಪೌಳಿ, ಮಹಾಬಲಿ ಪೀಠ, ತಡೆಗೋಡೆ ಮೊದಲಾದ ಕಾಮಗಾರಿಗಳು ರೂ 50 ಲಕ್ಷ ವೆಚ್ಚದಲ್ಲಿ ನಡೆಯಲಿದೆ. ದೇವಸ್ಥಾನದ ಹೊರಗಿನ ಆಭಿವೃದ್ದಿ ಕೆಲಸಗಳು ಷಷ್ಠಿ ಕಳೆದ ನಂತರ ಹಾಗೂ ದೇವಸ್ಥಾನದ ಒಳಗಡೆ ನಡೆವ ಕಾಮಗಾರಿಗಳು ಅನುಜ್ಞಾಕಲಶದ ಬಳಿಕ ನಡೆಯಲಿದೆ. ತಂತ್ರಿಗಳ ಸಲಹೆ ಪಡೆದು ಮುಂದುವರಿಯಲಾಗುವುದು ಎಂದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸವಣೂರು ಕೆ.ಸೀತಾರಾಮ ರೈ ಮಾತನಾಡಿ, ಬ್ರಹ್ಮಕಲಶೋತ್ಸವವನ್ನು ವಿಜ್ರಂಭಣೆಯಿಂದ ನಡೆಸಲು ಎಲ್ಲರ ಸಹಕಾರ ಬೇಕು. ದೇವಸ್ಥಾನಕ್ಕೆ ಸಂಬಂಧಪಟ್ಟ ಮನೆಯಿಂದ ದೇಣಿಗೆ ಸಂಗ್ರಹಿಸಲಾಗುವುದು. ಬ್ರಹ್ಮಕಲಶದ ಸಂದರ್ಭದಲ್ಲಿ 3 ದಿನ ಧಾರ್ಮಿಕ ಸಭಾ ಕಾರ್ಯಕ್ರಮ, 4 ದಿನ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ದೇವಸ್ಥಾನದ ಬ್ರಹ್ಮಕಲಶದಿಂದ ದೇವರ ಶಕ್ತಿ ಉದ್ದೀಪನಗೊಳ್ಳುವುದರಿಂದ ಊರಿಗೆ ಸುಭಿಕ್ಷೆಯಾಗುತ್ತದೆ. ದೇವಸ್ಥಾನದ ಆಭಿವೃದ್ದಿಯ ಬಳಿಕ ಈ ಭಾಗದ ಭಕ್ತರ ಕುಟುಂಬಗಳಿಗೆ ನೆಮ್ಮದಿ ಹಾಗೂ ಸೌಭಾಗ್ಯ ದೊರೆತಿದೆ. ಈ ನಿಟ್ಟಿನಲ್ಲಿ ಬ್ರಹ್ಮಕಲಶೋತ್ಸವ ಸಂಭ್ರಮ ಹೆಚ್ಚಿಸಲು ಎಲ್ಲರ ಸಹಕಾರ ಅಗತ್ಯ ಎಂದರು.
ವೇದಿಕೆಯಲ್ಲಿ ಆಡಳಿತ ಮಂಡಳಿ ಜತೆ ಕಾರ್ಯದರ್ಶಿ ಶೂರಪ್ಪ ಗೌಡ ಪಟ್ಟೆತ್ತಾನ, ಸದಸ್ಯ ಎನ್ ಮಹಾಲಿಂಗೇಶ್ವರ ಶರ್ಮ ಕಜೆ, ರಾಮಯ್ಯ ಗೌಡ, ಅರ್ಚಕ ರಮಾನಂದ ಭಟ್ ತೋಟಂತಿಲ, ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷರಾದ ಚಂದ್ರಶೇಖರ್ ಬರೆಪ್ಪಾಡಿ, ನರಸಿಂಹ ಪ್ರಸಾದ್ ಪಾಂಗಾಣ್ಣಾಯ ಕುವೆತ್ತೋಡಿ, ಜತೆ ಕಾರ್ಯದರ್ಶಿ ಭರತ್ ಕುಮಾರ್ ನಡುಮನೆ, ಕೋಶಾಧಿಕಾರಿ ಯಶೋಧರ ಕೆಡೆಂಜಿ ಉಪಸ್ಥಿತರಿದ್ದರು.
ಸಭೆಯಲ್ಲಿ ಸುರೇಶ್ ಕಾಪಿನಕಾಡು, ರಾಜೇಶ್ ಕುವೆತ್ತೋಡಿ, ಉಮೇಶ್ ಕೆರೆನಾರು, ಭವಾನಿ ಕೆಡೆಂಜಿ, ರಾಮಚಂದ್ರ ಅನ್ಯಾಡಿ, ವಸಂತ ಕಾರ್ಲಾಡಿ, ದೇವಾರಾಜ್ ನೂಜಿ, ಕೃಷ್ಣ ಭಟ್ ಎನ್, ಜತ್ತಪ್ಪ ರೈ ಬರೆಪ್ಪಾಡಿ, ಮಹೇಶ್ ನೂಜಿ, ಮಹಾಬಲ ನೂಜಿ, ಐತ್ತಪ್ಪ ಗೌಡ, ಮೇದಪ್ಪ ಗೌಡ ಕೆ, ಜನಾರ್ದನ ಎರ್ಕಮೆ, ಚಂದ್ರ ಗೌಡ ಟಿ, ಲೋಕನಾಥ ವಜ್ರಗಿರಿ, ಜನಾರ್ದನ ಗೌಡ ಕೆ, ಚೆನ್ನಪ್ಪ ಗೌಡ ನೂಜಿ, ಲೋಕೇಶ್ ಬಿ.ಎನ್, ಪುನಿತ್ ಕುಮಾರ್, ಉದಯ ಬಿ ಗೌಡ, ಜೀವನ್ ಎ, ಸತೀಶ್ ರೈ ಕೆ, ಗೋಪಾಲಕೃಷ್ಣ ಕಾರ್ಲಾಡಿ, ಶ್ರೀಕಾಂತ್ ಬಿ.ವಿ, ನೇಮಿರಾಜ್, ದಾಮೋದರ್ ನಾಕಿರಣ, ಚೆನ್ನಪ್ಪ ಗೌಡ, ಪ್ರವೀಣ್, ಯೋಗೀಶ್ ಬಿ, ಶ್ರೀನಿವಾಸ್ ಗೌಡ, ಪುಷ್ಪಾಲತಾ, ಇಂದಿರಾವತಿ, ಗೀತಾ, ವಿಮಲ, ರಂಜಿತಾ, ರಮ್ಯ, ಉಮಾಪ್ರಸಾದ್ ರೈ ನಡುಬೈಲು, ಸುರೇಶ್ ರೈ ಸೂಡಿಮುಳ್ಳು, ಸುಧಾಕರ ಆಬೀರ,ಪ್ರವೀಣ್ ಪಾಲ್ತಾಡಿ ಮೊದಲಾದವರು ಉಪಸ್ಥಿತರಿದ್ದು ಸಲಹೆ ಸೂಚನೆಗಳನ್ನು ನೀಡಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸವಣೂರು ಕೆ.ಸೀತಾರಾಮ ರೈ ಸ್ವಾಗತಿಸಿ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ವೆಂಕಟೇಶ್ ಭಟ್ ಕೊಯಕ್ಕುಡೆ ವಂದಿಸಿದರು.
ಅಬಿವೃದ್ಧಿ ಕಾಮಗಾರಿಗಳಿಗೆ ದೇಣಿಗೆ ವಾಗ್ದಾನ ಮಾಡಿದವರು:
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸವಣೂರು ಕೆ. ಸೀತಾರಾಮ ರೈ ರೂ 50,000, ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ರೂ 50,000, ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷರಾದ ಚಂದ್ರಶೇಖರ ಗೌಡ ರಾಶಿ ಬರೆಪ್ಪಾಡಿ ರೂ 25,000, ನರಸಿಂಹ ಪ್ರಸಾದ್ ಪಾಂಗಾಣ್ಣಾಯ ಕುವೆತ್ತೋಡಿ ರೂ 25,000, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ವೆಂಕಟೇಶ್ ವಿ ಭಟ್ ಕೊಯಕ್ಕುಡೆ ರೂ 25,000, ಆಡಳಿತ ಸಮಿತಿ ಜತೆ ಕಾರ್ಯದರ್ಶಿ ಶೂರಪ್ಪ ಗೌಡ ಪಟ್ಟೆತ್ತಾನ ರೂ 25,000, ಆಡಳಿತ ಸಮಿತಿ ಸದಸ್ಯರಾದ ಮಹಾಲಿಂಗೇಶ್ವರ ಶರ್ಮಾ ರೂ 25,000, ರಾಮಯ್ಯ ಗೌಡ ನೂಜಿ ರೂ 25,000, ಶೇಷಪ್ಪ ಗೌಡ ನೂಜಿ ರೂ 25,000, ಖಾಯಂ ಆಹ್ವಾನಿತ ಸದಸ್ಯರಾದ ಜತ್ತಪ್ಪ ರೈ ಬರೆಪ್ಪಾಡಿ ರೂ 25,000, ಚೆನ್ನಪ್ಪ ಗೌಡ ನೂಜಿ ರೂ 25,000, ಲೋಕನಾಥ ವಜ್ರಗಿರಿ ರೂ 15,000 ವಾಗ್ಧಾನ ಮಾಡಿದರು. ಈ ಪೈಕಿ ಸವಣೂರು ಕೆ. ಸೀತಾರಾಮ ರೈಯವರು ರೂ 15,000ದ ಚೆಕ್ ಹಾಗೂ ಖಾಯಂ ಆಹ್ವಾನಿತ ಸದಸ್ಯ ಸುರೇಶ್ ಕಾಪಿನಕಾಡು ಇವರು ರೂ 5,000 ನೀಡಿದರು.Advertisementಡಿ. 1, 2 ದೇವಾಲಯದಲ್ಲಿ ಷಷ್ಠಿ ಮಹೋತ್ಸವ: ಶಾಂತಿಮೊಗರು ಶ್ರೀ ಸುಬ್ರಹ್ಮೇಶ್ವರ ದೇವಸ್ಥಾನದಲ್ಲಿ ಡಿ 1ರಂದು ಪಂಚಮಿ ಅಂಗವಾಗಿ ಭಕ್ತಾಧಿಗಳಿಂದ ಹೊರೆಕಾಣಿಕೆ ಸಮರ್ಪಣೆ, ದೇವರಿಗೆ ಪಂಚಾಮೃತ ಅಭಿಷೇಕ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸುಬ್ರಹ್ಮಣ್ಯ ಸಂಪುಟ ನರಸಿಂಹ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಬಳಿಕ ಶಾಂತಿಮೊಗರು ಸುಬ್ರಹ್ಣೇಶ್ವರ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ, ನಂತರ ಮಹಾಪೂಜೆ ನಡೆಯಲಿದೆ. ಡಿ 2ರಂದು ಬೆಳಿಗ್ಗೆ ದೇವತಾ ಪ್ರಾರ್ಥನೆ, ಗಣಪತಿ ಹೋಮ, ದೇವರಿಗೆ ಕಲಶ ಪೂಜೆ, ಕಲಾಶಭಿಷೇಕ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಮಹಾಪೂಜೆ, ದೇವರ ಬಲಿ ಹೊರಟು ಶ್ರೀ ಭೂತ ಬಲಿ ಮಹೋತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ದೇವರ ಬಲಿ, ವೈಧಿಕ ಮಂತ್ರಾಕ್ಷತೆ, ನಂತರ ಕ್ಷೇತ್ರದ ದೈವಗಳಿಗೆ ನೇಮೋತ್ಸವ ನಡೆಯಲಿದೆ ಎಂದು ಆಡಳಿತ ಸಮಿತಿ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ತಿಳಿಸಿದ್ದಾರೆ.
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…