ಸುಬ್ರಹ್ಮಣ್ಯ: ಕುಮಾರಪರ್ವತ ಚಾರಣಕ್ಕೆ ಹೋದ 12 ಜನ ಯುವಕರ ತಂಡದಲ್ಲಿದ್ದ ಬೆಂಗಳೂರಿನ ಖಾಸಗಿ ಉದ್ಯೋಗಿ ಬೆಂಗಳೂರು ಗಾಯತ್ರಿ ನಗರದ ನಿವಾಸಿ 25 ವರ್ಷದ ಯುವಕ ಸಂತೋಷ್ ಭಾನುವಾರ ಸಂಜೆ ನಾಪತ್ತೆಯಾಗಿದ್ದಾರೆ. ಇದೀಗ ಹುಡುಕಾಟ ಆರಂಭವಾಗಿದ್ದು ಗಿರಿಗದ್ದೆ ಬಳಿ 9 ಜನರ ತಂಡ ಹುಡುಕಾಟ ನಡೆಸುತ್ತಿದೆ.
ಬೆಂಗಳೂರಿನ 12 ಜನರ ಚಾರಣಿಗರ ತಂಡವು ಶನಿವಾರ ಬೆಳಗ್ಗೆ ಸುಬ್ರಹ್ಮಣ್ಯದಿಂದ ಕುಮಾರಪರ್ವತಕ್ಕೆ ಚಾರಣ ಬೆಳೆಸಿ ರಾತ್ರಿ ಗಿರಿಗದ್ದೆಯಲ್ಲಿ ವಾಸ್ತವ್ಯ ಹೂಡಿ ಭಾನುವಾರ ಬೆಳಗ್ಗೆ ಕುಮಾರಪರ್ವತ ಏರಿತ್ತು. ಮಧ್ಯಾಹ್ನದ ನಂತರ ವಾಪಾಸು ಗಿರಿಗದ್ದೆಗೆ ಬಂದು ಸಂಜೆ ಸುಬ್ರಹ್ಮಣ್ಯದ ಕಡೆಗೆ ಪ್ರಯಾಣ ಬೆಳೆಸಿತ್ತು. ಮಳೆ ಸುರಿದ ಹಿನ್ನೆಲೆಯಲ್ಲಿ ಜಾಕೆಟ್ ಬದಲಿಸಲೆಂದು ನಿಂತಿದ್ದ ಸಂತೋಷ್ ಬಳಿಕ ಪತ್ತೆಯಾಗಲಿಲ್ಲ ಎಂದು ತಂಡದ ಸದಸ್ಯರು ಹೇಳಿದ್ದಾರೆ.
ಮಂಗಳವಾರ ಬೆಳಗ್ಗೆ ಬೆಳ್ಳಾರೆ ,ಸುಳ್ಯ , ಸುಬ್ರಹ್ಮಣ್ಯ ಹಾಗೂ ಪುತ್ತೂರು ಪೊಲೀಸರ ತಂಡ ಹಾಗೂ ಅರಣ್ಯ ಇಲಾಖೆಯ ಸಿಬಂದಿಗಳ ತಂಡ ಪರ್ವತದ ವಿವಿಧ ಕಡೆಗಳಲ್ಲಿ ಹುಡುಕಾಟ ಆರಂಭಿಸಿದೆ. ಇದುವರೆಗೆ ಯಾವುದೇ ಸುಳಿವು ಪತ್ತೆಯಾಗಿಲ್ಲ.
ಇದೀಗ ಒಂದು ತಂಡ ಗಿರಿಗದ್ದೆ ಬಳಿ ಹುಡುಕಾಟ ನಡೆಸುತ್ತಿದೆ. 9 ಜನರ ತಂಡ ಇಲ್ಲಿದೆ. ಈ ತಂಡದಲ್ಲಿ ಪುತ್ತೂರು ಎಸ್ ಐ ರಾಜ್ ಕುಮಾರ್ , ಸುಬ್ರಹ್ಮಣ್ಯ ಠಾಣೆಯ ತಾರನಾಥ್ , ಸಂಪ್ಯ ಪೊಲೀಸ್ ಠಾಣೆಯ ಕಾನ್ಟೇಬಲ್ ಗಳು ಹಾಗೂ ಸ್ಥಳೀಯರಾದ ಸುಬ್ರಹ್ಮಣ್ಯ ಗ್ರಾಪಂ ಸದಸ್ಯ ಪ್ರಶಾಂತ್ ಭಟ್ ಮಾಣಿಲ, ಸಂಪತ್, ಜಯಪ್ರಕಾಶ್ ಸೇರಿದಂತೆ ಸ್ಥಳೀಯರು ಜೊತೆಗಿದ್ದಾರೆ.
ಬೆಳಗ್ಗಿನಿಂದ 5 ತಂಡಗಳಲ್ಲಿ ಹುಡುಕಾಟ ಆರಂಭವಾಗಿದೆ. ಪುತ್ತೂರು ಡಿ.ವೈ.ಎಸ್.ಪಿ ದಿನಕರ ಶೆಟ್ಟಿ, ಬೆಳ್ಳಾರೆಯ ಎಸ್.ಐ ಈರಯ್ಯ, ಸುಳ್ಯ ಸರ್ಕಲ್ ಇನ್ಸ್ ಪೆಕ್ಟರ್ ಸತೀಶ್ ಕುಮಾರ್, ಸುಬ್ರಹ್ಮಣ್ಯ ಎ.ಎಸ್.ಐ ಚಂದಪ್ಪ, ಎಸ್.ಐ.ಹರೀಶ್ , ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ತ್ಯಾಗರಾಜ್ ನೇತೃತ್ವದಲ್ಲಿ ಹುಡುಕಾಟ ನಡೆಯುತ್ತಿದೆ. ಚಾರಣ ನಡೆಸಿದ ಯುವಕರ ತಂಡ ಸುಬ್ರಹ್ಮಣ್ಯದಲ್ಲಿ ಹಾಗೂ ಕೆಲವು ಯುವಕರು ಹುಡುಕಾಟಕ್ಕಾಗಿ ಜೊತೆಯಲ್ಲಿ ತೆರಳಿದ್ದಾರೆ.
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…