ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದ ಕುಲ್ಕುಂದ ಜಾನುವಾರು ಜಾತ್ರೆ ಭಾರೀ ಪೇಮಸ್ಸಾಗಿತ್ತು. ಈಗ ಸಾಂಕೇತಿಕವಾಗಿ ನಡೆಸುವ ಹಂತಕ್ಕೆ ಬಂದಿದೆ. ಸಂಪ್ರದಾಯದ ಪ್ರಕಾರ ಕಾರ್ತಿಕ ಹುಣ್ಣಿಮೆಯ ದಿನ ಜಾನುವಾರು ಜಾತ್ರೆ ಆರಂಭವಾಗುತ್ತದೆ. ಈ ಸಂಪ್ರದಾಯದ ಪಾಲನೆ ಈಗಲೂ ನಡೆಯುತ್ತದೆ. ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಐತಿಹಾಸಿಕ ಕುಲ್ಕುಂದದ ಬಸವನಮೂಲೆಯ ಶ್ರೀ ಬಸವೇಶ್ವರ ದೇವಾಲಯದಲ್ಲಿ ಗೋಪೂಜೆ ನಡೆಯಿತು.
ಅದ್ದೂರಿಯಾಗಿ ನಡೆಯುತ್ತಿದ್ದ ಜಾನುವಾರು ಜಾತ್ರೆಯು ಕುಲ್ಕುಂದ ಜಾತ್ರೆ ಎಂದೇ ಕರೆಯಲಾಗುತ್ತಿತ್ತು. ಸಾವಿರಾರು ಜಾನುವಾರುಗಳು ಈ ಜಾತ್ರೆಗೆ ಆಗಮಿಸುತ್ತಿತ್ತು. ಘಟ್ಟ ಪ್ರದೇಶದಿಂದ ಜಾನುವಾರುಗಳು ಬಂದರೆ ಕೇರಳ ಹಾಗೂ ಕರಾವಳಿ ಪ್ರದೇಶಗಳ ಕೃಷಿಕರು ಜಾನುವಾರು ಖರೀದಿ ಮಾಡುತ್ತಿದ್ದರು. ಆದರೆ ಈಚೆಗೆ ಕಳೆದ ಕೆಲವು ವರ್ಷಗಳಿಂದ ಜಾನುವಾರುಗಳು ಸಂಖ್ಯೆ ಕಡಿಮೆಯಾಗಿತ್ತು.
ಮಂಗಳವಾರ ಜಾನುವಾರು ಜಾತ್ರೆ ಪ್ರಯುಕ್ತ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಐತಿಹಾಸಿಕ ಕುಲ್ಕುಂದದ ಬಸವನಮೂಲೆಯ ಶ್ರೀ ಬಸವೇಶ್ವರ ದೇವಾಲಯದಲ್ಲಿ ಗೋಪೂಜೆ ನಡೆಯಿತು. ಕಾರ್ತಿಕ ಹುಣ್ಣಿಮೆಯ ದಿನವಾದ ಶ್ರೀ ಬಸವೇಶ್ವರ ದೇವಸ್ಥಾನಕ್ಕೆ ಕುಲ್ಕುಂದ ಪರಿಸರದ ಸುಮಾರು 10 ಕ್ಕೂ ಅಧಿಕ ಗೋವುಗಳಿಗೆ ಪುಷ್ಪಾಂಲಂಕಾರ ಮಾಡಿ ಕರೆತರಲಾಗಿತ್ತು. ಬಸವೇಶ್ವರ ದೇವಳದ ಅರ್ಚಕ ಗಣೇಶ್ ದೀಕ್ಷಿತ್ ವಿವಿಧ ವೈದಿಕ ವಿದಿ ವಿಧಾನಗಳ ಮೂಲಕ ಗೋವುಗಳಿಗೆ ಗೋಪೂಜೆ ನೆರವೇರಿಸಿ, ಗೋಗ್ರಾಸ ನೀಡಿದರು. ಬಳಿಕ ಬಸವೇಶ್ವರ ದೇವಸ್ಥಾನದ ಗದ್ದೆಯಲ್ಲಿ ಜಾನುವಾರುಗಳನ್ನು ಕಟ್ಟುವ ಮೂಲಕ ಸಂಪ್ರದಾಯದಂತೆ ಇತಿಹಾಸ ಪ್ರಸಿದ್ಧ ಕುಲ್ಕುಂದ ಜಾನುವಾರು ಜಾತ್ರೆಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅಧೀಕ್ಷಕ ಬಾಲಸುಬ್ರಹ್ಮಣ್ಯ ಭಟ್, ದೇವಳದ ಅಭಿಯಂತರ ಉದಯ ಕುಮಾರ್, ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಳದ ಕಾರ್ಯನಿರ್ವಹಣಾಧಿಕಾರಿ ಹರೀಶ್, ಕುಲ್ಕುಂದ ಬಸವೇಶ್ವರ ದೇವಳದ ಆಡಳಿತ ಸಮಿತಿ ಅಧ್ಯಕ್ಷ ಗಿರಿಧರ ಸ್ಕಂಧ, ಕಾರ್ಯದರ್ಶಿ ನಾರಾಯಣ ಅಗ್ರಹಾರ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಎನ್.ಕೆ.ಮನೋಹರ ನಾಳ, ಸುಬ್ರಹ್ಮಣ್ಯ ಗ್ರಾ.ಪಂ.ಉಪಾಧ್ಯಕ್ಷ ರಾಜೇಶ್ ಎನ್.ಎಸ್, ಸದಸ್ಯರಾದ ದಿನೇಶ್ ಬಿ.ಎನ್, ಹರೀಶ್ ಇಂಜಾಡಿ, ಮಾಸ್ಟರ್ ಪ್ಲಾನ್ ಸಮಿತಿಯ ಮಾಜಿ ಸದಸ್ಯ ಶಿವರಾಮ ರೈ, ಬಸವೇಶ್ವರ ದೇವಸ್ಥಾನದ ಆಡಳಿತ ಸಮಿತಿ ಸದಸ್ಯರಾದ ರವೀಂದ್ರ ಕುಮಾರ್ ರುದ್ರಪಾದ, ರಾಜೇಶ್ ಕುಲ್ಕುಂದ, ಶಿವರಾಮ ಪಳ್ಳಿಗದ್ದೆ, ವೆಂಕಟ್ರಮಣ ಗೌಡ ಕಳಿಗೆ, ಶೀನಪ್ಪ ಗೌಡ, ಬಾಲಕೃಷ್ಣ ಟೈಲರ್ ಕುಲ್ಕುಂದ, ಚಂದ್ರಶೇಖರ ಬಸವನಮೂಲೆ, ಗಿರೀಶ್ ಆಚಾರ್ಯ, ಜೀರ್ಣೋದ್ಧಾರ ಸಮಿತಿಯ ಗುಡ್ಡಪ್ಪ ಗೌಡ ಬೀಡಿನಗದ್ದೆ, ನಾಗೇಶ್ ಕೈಕಂಬ, ಬೆಳ್ಯಪ್ಪ ಪಳ್ಳಿಗದ್ದೆ ಸೇರಿದಂತೆ ಭಕ್ತರು ಉಪಸ್ಥಿತರಿದ್ದರು.
ರಾಮಸೀತೆಯರೊಂದಾಗಿ ಕುಶಲವರಿಗೆ ತಂದೆ ತಾಯಿ ಲಭಿಸಿದ ಘಳಿಗೆಯು ಎಲ್ಲರಿಗೂ ಸಂಭ್ರಮಯೋಗ್ಯವಾಗಿ ಕಾಣುತ್ತದೆ. ಹಾಗಾಗಿ…
ಅಲ್ಪಾವಧಿ ಬೆಳೆ ಸಾಲದ ಬಗ್ಗೆ ಕಳೆದ ವಾರ ತಿಳಿಸಲಾಗಿತ್ತು. ಅದರ ಮುಂದುವರಿದ ಭಾಗವಾಗಿ…
ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸಲು ಈಗಾಗಲೇ ತುಮಕೂರು ಜಿಲ್ಲೆಯಲ್ಲಿ ತೆರೆದಿರುವ 10…
ಮಕ್ಕಳ ಆರೋಗ್ಯ ಮತ್ತು ಭವಿಷ್ಯದ ಹಿತದೃಷ್ಟಿಯಿಂದ ರೈತರು ತಮ್ಮ ಬೆಳೆಗಳಲ್ಲಿ ಹೆಚ್ಚಿನ ರಾಸಾಯನಿಕಗಳು…
ಕಾರವಾರದ ರವೀಂದ್ರನಾಥ್ ಟಾಗೋರ್ ಕಡಲ ತೀರದ ಮಯೂರ ವರ್ಮ ವೇದಿಕೆಯಲ್ಲಿ ಏಪ್ರಿಲ್ 18…
ಕೋಲಾರ ಜಿಲ್ಲೆಯಲ್ಲಿ ಒತ್ತುವರಿಯಾಗಿರುವ ಕೆರೆಗಳನ್ನು ಆದ್ಯತೆ ಮೇರೆಗೆ ತೆರವುಗಳಿಸಲು ಕ್ರಮ ಕೈಗೊಳ್ಳಬೇಕು ಎಂದು…