ಕುವೈತ್‌ನಲ್ಲಿ ತೊಂದರೆಗೆ ಸಿಲುಕಿದ್ದ ಭಾರತೀಯ ಸಂತ್ರಸ್ತರ ತವರು ಸೇರಿದ 19 ಮಂದಿ

July 19, 2019
11:30 AM

ಮಂಗಳೂರು:ಕುವೈತ್‌ನಲ್ಲಿ ಉದ್ಯೋಗ ವಂಚನೆಗೆ ಒಳಗಾಗಿ ತೊಂದರೆಗೆ ಸಿಲುಕಿದ್ದ ಭಾರತೀಯ ಸಂತ್ರಸ್ತರ ಪೈಕಿ, ಕರಾವಳಿ ಮೂಲದ 19 ಮಂದಿ ಯುವಕರು  ಮರಳಿ ತವರು ಸೇರಿದ್ದಾರೆ.

ನಷೂದ್ (ಮಂಜೇಶ್ವರ), ವರುಣ್ (ಆಕಾಶ್ ಭವನ), ಕಲಂದರ್ ಶಫೀಕ್ (ಮೂಡುಬಿದಿರೆ), ನಷೂದ್ (ಕೊಪ್ಪ), ರಫೀಕ್ (ಕೊಪ್ಪ), ಯಕೂಬ್ ಮುಲ್ಲಾ ( ಶಿರ್ಸಿ), ಪಾರ್ಲ್ಟ್ರಿಕ್ ಫೆರ್ನಾಂಡಿಸ್ (ಭಟ್ಕಳ), ಜಗದೀಶ್, ಆಶೀಕ್ (ಉಡುಪಿ), ಪಾರ್ಥಿಕ್ (ಉಡುಪಿ), ಮಹಮ್ಮದ್ ಹಸನ್ (ಕೊಲ್ನಾಡು), ಮಹಮ್ಮದ್ ಇಸ್ಮಾಯಿಲ್ (ಕೊಲ್ನಾಡು), ಅಬ್ದುಲ್ ಮಸೀದ್ (ಕಾರ್ಕಳ), ಮಹಮ್ಮದ್ ಸುಹೇಲ್ (ಉಳ್ಳಾಲ), ನೌಫಾಲ್ ಹುಸೈನ್ (ಉಳ್ಳಾಲ), ಮಹಮ್ಮದ್ ಶಕೀರ್ (ಉಳ್ಳಾಲ), ಅಬ್ದುಲ್ ಲತೀಫ್ (ತುಂಬೆ) ಫಯಾಝ್ (ಕುತ್ತಾರ್), ಅಬುಬಕ್ಕರ್ ಸಿದ್ದೀಕ್ (ಬಜಾಲ್) ತವರಿಗೆ ಬಂದಿಳಿದ ಕರಾವಳಿ ಮೂಲದ ಸಂತ್ರಸ್ತ ಯುವಕರು.

ಈ 19 ಮಂದಿಗೆ ಕುವೈತ್‌ನಿಂದ ಮುಂಬೈಗೆ ವಿಮಾನ ಟಿಕೆಟ್‌ ಮತ್ತು ಅಲ್ಲಿಂದ ಮಂಗಳೂರಿಗೆ ಬಸ್‌ ಟಿಕೆಟ್‌ ಅನ್ನು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಿ.ವೇದವ್ಯಾಸ ಕಾಮತ್‌ ವ್ಯವಸ್ಥೆ ಮಾಡಿದ್ದರು. ಇನ್‌ಸ್ಟಿಟ್ಯೂಷನ್‌ ಆಫ್‌ ಎಂಜಿನಿಯರ್ಸ್‌ನ ಕುವೈತ್‌ ಶಾಖೆಯ ಮಾಜಿ ಅಧ್ಯಕ್ಷ ಮಂಜೇಶ್ವರ ಮೋಹನದಾಸ್‌ ಕಾಮತ್‌, ಅನಿವಾಸಿ ಭಾರತೀಯ ಉದ್ಯಮಿಗಳಾದ ರಾಜ್‌ ಭಂಡಾರಿ, ವಿಜಯ್‌ ಫರ್ನಾಂಡಿಸ್‌ ಕುವೈತ್‌ ವಿಮಾನ ನಿಲ್ದಾಣದಲ್ಲಿ ಈ ಕಾರ್ಮಿಕರನ್ನು ಬೀಳ್ಕೊಟ್ಟಿದ್ದರು. ಸದ್ಯ 19 ಮಂದಿ ಯುವಕರು ಮರಳಿ ಮಂಗಳೂರು ಸೇರಿದ್ದಾರೆ.

ಯುವಕರ ಬಿಡುಗಡೆ ವಿಚಾರದಲ್ಲಿ ತಕ್ಷಣ ಸ್ಪಂದಿಸಿರುವ ಮಂಗಳೂರು ಶಾಸಕ ವೇದವ್ಯಾಸ ಕಾಮತ್ ಅವರ ಕಾರ್ಯವೈಖರಿಯನ್ನು ಭಾರತೀಯ ರಾಯಭಾರಿ ಕಚೇರಿಯ ದ್ವಿತೀಯ ಕಾರ್ಯದರ್ಶಿ ಸಿಬಿ ಯು. ಶ್ಲಾಘಿಸಿದ್ದಾರೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮುಂದುವರಿದ ಮಳೆ ಅಬ್ಬರ : ಆಗಸ್ಟ್‌ 4ರಂದು ದ ಕ -ಉಡುಪಿ-ಕಾಸರಗೋಡು ಜಿಲ್ಲೆಯ ಕೆಲವು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ
August 3, 2026
10:48 PM
by: ದ ರೂರಲ್ ಮಿರರ್.ಕಾಂ
ಭಾರೀ ಮಳೆಯ ಎಚ್ಚರಿಕೆ : 24 ಗಂಟೆ ಸನ್ನದ್ಧವಾಗಿರಲು ಡಿಸಿ ಸೂಚನೆ, ಭೂಕುಸಿತ ಪ್ರದೇಶಗಳ ಮೇಲೆ ಕಟ್ಟೆಚ್ಚರ
August 2, 2026
7:24 AM
by: ದ ರೂರಲ್ ಮಿರರ್.ಕಾಂ
ಹುಬ್ಬಳ್ಳಿಯಲ್ಲಿ ಹಲಸು ಮೇಳಕ್ಕೆ ಚಾಲನೆ – 50ಕ್ಕೂ ಹೆಚ್ಚು ಮಳಿಗೆಗಳು, ಹಲಸಿನ ಬಿರಿಯಾನಿಯಿಂದ ಕಬಾಬ್‌ವರೆಗೆ ಸವಿಯುವ ಅವಕಾಶ
August 2, 2026
7:14 AM
by: ದ ರೂರಲ್ ಮಿರರ್.ಕಾಂ
ಭಾರೀ ಮಳೆ ಹಿನ್ನೆಲೆ – ಆಗಸ್ಟ್‌ 1ರಂದು ದಕ್ಷಿಣ ಕನ್ನಡದಲ್ಲಿ ಶಾಲೆ-ಕಾಲೇಜುಗಳಿಗೆ ರಜೆ
July 31, 2026
8:18 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror