Advertisement
MIRROR FOCUS

ಕೃಷ್ಣಜನ್ಮಾಷ್ಟಮಿ ಶುಭಾಶಯ | ಕೃಷ್ಣನೆಂದರೆ ಪ್ರೀತಿ…..

Share

ಅದೊಂದು ವಿಶೇಷ ಸಮಾರಂಭ.  ರಂಗು ರಂಗಿನ ಕಾರ್ಯಕ್ರಮ. ನಗುವಿನಲೆಯಲ್ಲಿ  ತುಂಬಿರುವ  ವಾತಾವರಣ . ಪುಟ್ಟ ಪುಟ್ಟ  ಕಂದಮ್ಮಗಳು.    ಬಣ್ಣ ಬಣ್ಣದ ಬಟ್ಟೆಗಳನ್ನು ಹಾಕಿ ಚೆಂದಕೆ ಆಭರಣಗಳನ್ನು ಹಾಕಿ ಅಚೀಚೆ ತಿರುಗುತ್ತಾ , ಮಕ್ಕಳ ಹಿಂದೆ ಅವರ ಅಮ್ಮಂದಿರೂ  ಹೆಜ್ಜೆ ಹಾಕುತ್ತಾ  ಪರಿಸರಕ್ಕೊಂದು ವಿಶೇಷ ಕಳೆ ಬಂದಂತಾಗಿದೆ. ಏನು  ಸ್ಕೂಲ್ ಡೇ ವರ್ಣನೆ ಅಂದುಕೊಂಡಿರಾ

Advertisement
Advertisement
Advertisement
? ಅಲ್ಲಪ್ಪಾ ಅಲ್ಲ. ಇದು ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂದರ್ಭದ ದೃಶ್ಯ.  ಅಲ್ಲಿ ಮಕ್ಕಳ ಕಲರವವೇ ತುಂಬಿತ್ತು. ತೊದಲು ನುಡಿಗೆ ಸಣ್ಣನೆಯ ದನಿಯ ಸಂಗೀತ  ಹೊಸ ಲೋಕವನ್ನೇ ಸೃಷ್ಟಿ ಸಿತ್ತು. ಮಕ್ಕಳ ಚಟುವಟಿಕೆಗೆ, ಹೆತ್ತವರ ಸೃಜನಶೀಲತೆಗೊಂದು ವೇದಿಕೆ ಸಿದ್ದವಾಗಿತ್ತು.  ಮಕ್ಕಳೆಂದರೆ  ದೇವರೇ ಅಲ್ಲವೆ ? ಮುಗ್ಧ ಮನಸಿನ ಕಂದಮ್ಮಗಳು. ಅವುಗಳ ಜಗತ್ತೇ ಸುಂದರ. ಅಲ್ಕಿ ಕಳೆಯುವ ಕ್ಷಣಗಳೇ ಅಮೂಲ್ಯ.
ಕೃಷ್ಣ ನೆಂದರೆ ಮನಸಿಗೆ ಹತ್ತಿರದವನು. ಗಣೇಶನನ್ನು ಎಷ್ಟು ಆರಾಧಿಸುತ್ತೇವೋ ಕೃಷ್ಣ ನನ್ನು ಅಷ್ಟೇ ಪ್ರೀತಿಸುತ್ತೇವೆ.  ನಾವು ನ ಎಳೆಯುತ್ತಾ ಕೃಷ್ಣ ನ ಬಾಲ್ಯ ಲೀಲೆಗಳನ್ನು ಕೇಳುತ್ತಾ ಬೆಳೆದುದು. ಕೃಷ್ಣ ನ ಬಗ್ಗೆ   ಎಷ್ಟು ಹೇಳಿದರೂ ಮುಗಿಯದ ಕಥೆಗಳು . ಒಂದಕ್ಕಿಂತ ಒಂದು ವಿಭಿನ್ನ ಸಾಹಸಗಳು. ಹುಟ್ಟಿದ ದಿನದಿಂದಲೇ ಅವನ ಸಾಹಸ ಯಾತ್ರೆಗಳು ಆರಂಭ. ಸೆರೆ ಮನೆಯಿಂದ  ಗೋಕುಲದ  ಪಯಣವೂ ರೋಚಕವೇ. ಇನ್ನೂ ಗೋಕುಲದಲ್ಲಿ ಶ್ರೀ ಕೃಷ್ಣ ನ ಬೆಳವಣಿಗೆಯ ಪ್ರತಿ ಹಂತವೂ ಒಂದು ಕಥೆಯೇ. ಕೃಷ್ಣ ನೆಂದು ಒಡೆಯನಾಗಿಯೇ  ಇರಲಿಲ್ಲ. ಸಾಮಾನ್ಯ ರಲ್ಲಿ ಸಾಮಾನ್ಯ ನಾಗಿ ಇದ್ದವ. ಎಲ್ಲಿ ಬೇಕೋ ಅಲ್ಲಿ ತನ್ನ ಶಕ್ತಿಯ ಉಪಯೋಗ ಮಾಡುತ್ತಿದ್ದವ. ಎಲ್ಲಾ ಮಕ್ಕಳಂತೆ   ತುಂಟ. ಇಂದೂ ಮಕ್ಕಳು ಜಾಸ್ತಿ ಉಪದ್ರ ಮಾಡಿದರೂ  ಹೇಳುವುದು ಕೃಷ್ಣನ ನ್ನೇ. ಇವ ನೋಡು ಕೃಷ್ಣನಂತೆ  ತುಂಟನೆಂದು. ಕೃಷ್ಣ  ಎಲ್ಲರಿಗೂ ಇಷ್ಟವಾಗುವಂತವ. ಅವನು  ದೇವರಾದರೂ ನಮ್ಮ ನಿಮ್ಮೆಲ್ಲರಂತೆ.  ಸ್ವಯಂ ಶಕ್ತಿ ವಂತನಾದರೂ ಎಲ್ಲೂ ಅನಗತ್ಯ ಪ್ರದರ್ಶನ ಮಾಡದೆ  ಅಗತ್ಯವಿದ್ದಾಗ ಪ್ರಯೋಗಿಸುವವ. ಯಾರು ಸಂಪೂರ್ಣ ಆತನಿಗೆ ಶರಣಾಗುತ್ತರೋ ಅವರನ್ನು ಸದಾ ಕಾಯುವವ.  ಕಷ್ಟಗಳು ಬಂದಾಗ , ನೆನೆದವರ ಮನದಲ್ಲಿ ನಾ ಬಂದೆ ಎಂದು ಅಲ್ಲಿರುವನಾತ.
ಬದುಕಿನ  ದುಃಖದ ಕ್ಷಣದಲ್ಲಿ ಎಲ್ಲರನ್ನು ನೆನಪಿಸಿ ಕೊಳ್ಳುತ್ತೇವೆ. ಆದರೆ ಖುಷಿಯಲ್ಲಿದ್ದಾಗಲೂ ನೆನಪಾಗುವವರು, ಮನಸ್ಸಿಗೆ  ಹತ್ತಿರದವರು. ಕೃಷ್ಣ ಕಷ್ಟದಲ್ಲೂ, ಖುಷಿಯಲ್ಲೂ  ನೆನಪಾಗುವವ. ಅವನ ಹುಟ್ಟು ಹಬ್ಬವೆಂದರೆ ಸಂಭ್ರಮವಲ್ಲವೆ?  ತಿಂಡಿಗಳೆಂದರೆ  ,ಅದರಲ್ಲೂ ಸಿಹಿಯೆಂದರೆ ಬಲು ಇಷ್ಟ. ಕೃಷ್ಣಾಷ್ಟಮಿಯಂದು  ತರತರದ ಉಂಡೆಗಳು , ಚಕ್ಕುಲಿಗಳು, ಉದ್ದಿನ ಕಡುಬು, ಪಾಯಸ , ರಸಾಯನ , ಹಾಲು, ಬೆಣ್ಣೆ , ಮೊಸರು ಹೀಗೆ ಬಗೆಬಗೆಯ ನೈವೇದ್ಯವನ್ನು ಸಮರ್ಪಿಸುವುದು  ಮೆಚ್ಚಿನ ಕೆಲಸ.  ಬಹಳ ನಿರೀಕ್ಷಿಸಿ ಆಚರಿಸುವ ತಿಂಡಿಗಳ ಹಬ್ಬವೇ ಅಷ್ಟಮಿ.
ಎಲ್ಲರಿಗೂ ಹಬ್ಬದ ಶುಭಾಶಯ ಗಳು.
#ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಮಕ್ಕಳ ಭ್ರಮೆ ಮತ್ತು ವಾಸ್ತವ

ಮಣ್ಣಿನಲ್ಲಿ ಬಿದ್ದ ಬೀಜವು ಜೀವಂತಿಕೆಯಿಂದ ತನ್ನ ಬೇರುಗಳನ್ನು ಸಿಕ್ಕಿದ ಬಿರುಕುಗಳಲ್ಲಿ ಹಬ್ಬಿಸುತ್ತ ತೆವಳುತ್ತ…

4 hours ago

ಮುಂದಿನ ವರ್ಷದಿಂದ ಎಪಿಎಂಸಿಗಳಲ್ಲಿ ಸಾವಯವ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ

ಮುಂದಿನ ಆರ್ಥಿಕ ವರ್ಷದಿಂದ ರಾಜ್ಯದ ಸಾವಯವ ಉತ್ಪನ್ನಗಳ ಮಾರಾಟಕ್ಕೆ ಎಪಿಎಂಸಿಗಳಲ್ಲಿ ಮಾರುಕಟ್ಟೆ ವ್ಯವಸ್ಥೆ…

5 hours ago

ಶ್ರೀಲಂಕಾದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾದರಿ |

ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಬಗ್ಗೆ ಅಧ್ಯಯನ ಮಾಡಲು ಶ್ರೀಲಂಕಾದಿಂದ 38 ಮಂದಿ “ಲಂಕಾ…

15 hours ago

ರೈತ ಉಪಯೋಗಿ ಬಗೆ ಬಗೆಯ ಸರಕು ಸಾಗಣೆ ಗಾಡಿಗಳು

ಬದಲಾದ ಕಾಲದಲ್ಲಿ ನಾವು ಇಂತಹ ಪರಿಕರಕೊಳ್ಳುವ ಮೊದಲು ನಮಗೆಷ್ಟು ಇದು ಪ್ರಯೋಜನಕಾರಿ ಎಂದು…

1 day ago

ಪ್ರಯಾಗ್ ರಾಜ್ ನಲ್ಲಿ  ಮಹಾ ಕುಂಭಮೇಳ | 150ಕ್ಕೂ ಹೆಚ್ಚು ವಿಶೇಷ ರೈಲು

ಐತಿಹಾಸಿಕ ಕುಂಭಮೇಳ ನಡೆಯುತ್ತಿರುವ  ಪ್ರಯಾಗ್ ರಾಜ್ ನಲ್ಲಿ ಮುಖ್ಯಮಂತ್ರಿ  ಯೋಗಿ ಆದಿತ್ಯನಾಥ್ ಅಧ್ಯಕ್ಷತೆಯಲ್ಲಿ …

1 day ago

ಆಧುನಿಕತೆಯಿಂದಾಗಿ ಕೃಷಿ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ

ರಾಸಾಯನಿಕಗಳನ್ನು ಹೊಂದಿರುವ ಗೊಬ್ಬರದ ಅತಿಯಾದ ಬಳಕೆಯಿಂದಾಗಿ ಭೂಮಿಯಲ್ಲಿ ಎರೆಹುಳು ಸೇರಿದಂತೆ ಎಲ್ಲ ಜೀವಿಗಳು…

1 day ago