Advertisement
ಸುದ್ದಿಗಳು

ಕೆಸಿಎಫ್ ಒಮಾನ್: ರಾಷ್ಟ್ರೀಯ ಮಟ್ಟದ ಪ್ರತಿಭೋತ್ಸವ: ಸೊಹಾರ್ ಝೋನ್ ಚಾಂಪಿಯನ್

Share

ಸುಳ್ಯ: ಕರ್ನಾಟಕ ಕಲ್ಚರಲ್ ಫೌಂಡೇಷನ್ ಒಮಾನ್ ಇದರ ವತಿಯಿಂದ 3ನೇ ಆವೃತ್ತಿಯ ರಾಷ್ಟ್ರೀಯ ಮಟ್ಟದ ಪ್ರತಿಭೋತ್ಸವ – 2019 ವು ನಿಝ್ವದ ಹೈತುರಾತ್ ನ ಅಲ್ ಬುಸ್ತಾನ್ ಫಾರ್ಮ್ ಹೌಸ್ ನಲ್ಲಿ ಶುಕ್ರವಾರದಂದು ಬಹಳ ಯಶಸ್ವಿಯಾಗಿ ನಡೆಯಿತು. ಏಳು ಝೋನ್ ಗಳನ್ನು (ಮಸ್ಕತ್,ಬೌಶರ್,ಸೊಹಾರ್, ನಿಝ್ವ, ಸೀಬ್,ಸಲಾಲ,ಬುರೈಮಿ) ಒಳಗೊಂಡ ಪ್ರತಿಭೋತ್ಸವದಲ್ಲಿ ಕೆಸಿಎಫ್ ಸೊಹಾರ್ ಝೋನ್ ಚಾಂಪಿಯನ್ ಪಟ್ಟವನ್ನು ಉಳಿಸಿಕೊಂಡರೆ, ದ್ವಿತೀಯ ಸ್ಥಾನವನ್ನು ಕೆಸಿಎಫ್ ಸೀಬ್ ಝೋನ್, ತೃತೀಯ ಸ್ಥಾನವನ್ನು ಕೆಸಿಎಫ್ ಬೌಶರ್ ಝೋನ್ ಪಡೆದು ಕೊಂಡರು. ವೈಯಕ್ತಿಕ ಚಾಂಪಿಯನ್ ಆಗಿ ಕೆಸಿಎಫ್ ಸೊಹಾರ್ ಝೋನ್ ನ ಆರಿಫ್ ಮದಕ ಗಿಟ್ಟಿಸಿಕೊಂಡರು.

ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಜನಾಬ್ ಅಯ್ಯೂಬ್ ಕೊಡಿ ಇವರ ಅಧ್ಯಕ್ಷತೆಯಲ್ಲಿ ಜರುಗಿದ ಸಮಾರೋಪ ಸಮಾರಂಭದ
ಉದ್ಘಾಟನೆಯನ್ನು ಕೆಸಿಎಫ್ ಅಂತರರಾಷ್ಟ್ರೀಯ ಸಮಿತಿಯ ಶಿಕ್ಷಣ ವಿಭಾಗದ ಕಾರ್ಯದರ್ಶಿ ಬಹು ಉಮರ್ ಸಖಾಫಿ ಮಿತ್ತೂರ್, ಪ್ರಾಸ್ತಾವಿಕ ಭಾಷಣವನ್ನು ಕೆಸಿಎಫ್ ಒಮಾನ್ ಇದರ ಪ್ರಧಾನ ಕಾರ್ಯದರ್ಶಿ ಸಾದಿಕ್ ಹಾಜಿ ಸುಳ್ಯ ಇವರು ನೆರವೇರಿಸಿದರು.

ಮುಖ್ಯ ಅಥಿತಿಯಾಗಿ ಸಯ್ಯಿದ್ ಮುಹಮ್ಮದ್ ಇಲ್ಯಾಸ್ ಅಹ್ಸನಿ ಅಲ್ ಜೀಲಾನಿ ನಿಝ್ವ, ಕೆಸಿಎಫ್ ಅಂತರರಾಷ್ಟ್ರೀಯ ಸಮಿತಿಯ ಆಡಳಿತ ವಿಭಾಗದ ಕಾರ್ಯದರ್ಶಿ ಇಕ್ಬಾಲ್ ಬೊಲ್ಮಾರ್ ಬರ್ಕ ಹಾಗೂ ಸಂಘಟನಾ ಅಧ್ಯಕ್ಷರಾದ ಸಯ್ಯಿದ್ ಆಬಿದ್ ಅಲ್ ಹೈದ್ರೋಸಿ ತಂಙಳ್ ಕೊಡಗು , ಕೋಶಾಧಿಕಾರಿ ಆರಿಫ್ ಕೊಡಿ , ಶಿಕ್ಷಣ ವಿಭಾಗದ ಅಧ್ಯಕ್ಷರಾದ ಉಬೈದುಲ್ಲಾ ಸಖಾಫಿ, ಹಂಝ ಹಾಜಿ ಕನ್ನಂಗಾರ್ ಅಧ್ಯಕ್ಷರು ಇಹ್ಸಾನ್ ಕರ್ನಾಟಕ, ಇಬ್ರಾಹಿಮ್ ಅತ್ರಾಡಿ ಅಧ್ಯಕ್ಷರು ಸಾಂತ್ವನ ವಿಭಾಗ, ಶಮೀರ್ ಉಸ್ತಾದ್ ಹೂಡೆ ಅಧ್ಯಕ್ಷರು ಪಬ್ಲಿಷಿಂಗ್ ವಿಭಾಗ, ಖಾಸಿಂ ಹಾಜಿ ಅಧ್ಯಕ್ಷರು ಆಡಳಿತ ವಿಭಾಗ ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿ ಮತ್ತ ನಿಝ್ವ ಝೋನ್ ಅಧ್ಯಕ್ಷರಾದ ಬಾಷ‌ ತೀರ್ಥಹಳ್ಳಿ, ಪ್ರತಿಭೋತ್ಸವ ಸ್ವಾಗತ ಸಮಿತಿ ಚಯರ್ಮೆನ್ ಅಬ್ಬಾಸ್ ಮರಕಡ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿವಿಧ ವಿಭಾಗದ ಕಾರ್ಯದರ್ಶಿಗಳಾದ ಸಂಶದ್ದೀನ್ ಪಾಲ್ತಡ್ಕ, ಸಿದ್ದೀಕ್ ಮಾಂಬ್ಲಿ ಸುಳ್ಯ, ಅಶ್ರಫ್ ಭಾರತ್ ಸುಳ್ಯ, ಇಕ್ಬಾಲ್ ಎರ್ಮಾಲ್, ಇರ್ಫಾನ್ ಕೂರ್ನಡ್ಕ, ಹಾಗೂ ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿಯ ನಾಯಕರು ಗಳು ಮತ್ತು ವಿವಿಧ ಝೋನ್ ನಾಯಕರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಫ್ಯಾಮಿಲಿ ಮೀಟ್ ಮತ್ತು ಮಹಿಳೆಯರ ಮತ್ತು ಮಕ್ಕಳ ವಿಭಾಗದ ಸ್ಪರ್ಧಾತ್ಮಕ ಕಾರ್ಯಕ್ರಮ ನಡೆಯಿತು.  ಸ್ವಾಗತ ಸಮಿತಿ ಕನ್ವೀನರ್ ಝುಬೈರ್ ಸ ಅದಿ ಪಾಟ್ರಕೋಡಿ ಸ್ವಾಗತಿಸಿ ,ಕಲಂದರ್ ಬಾವ ಪರಪ್ಪು ಕಾರ್ಯಕ್ರಮ ನಿರೂಪಿಸಿದರು. ಪ್ರಸ್ತುತ ಕಾರ್ಯಕ್ರಮದ ಸಂಪೂರ್ಣ ಉಸ್ತುವಾರಿಯನ್ನು ಕೆಸಿಎಫ್ ನಿಝ್ವ ಝೋನ್ ಸಮಿತಿಯರು ವಹಿಸಿದ್ದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಭಾರತದ ಆಹಾರ ನಾಳೆ ಬೆಳೆಯೋರು ಯಾರು? ರೈತರ ವಯಸ್ಸು ಹೆಚ್ಚುತ್ತಿದೆ, ಯುವಕರು ಕೃಷಿಯಿಂದ ದೂರವಾಗುತ್ತಿದ್ದಾರೆ..!

ಭಾರತ ಯುವ ದೇಶವಾಗಿದ್ದರೂ ಕೃಷಿಕರ ಸರಾಸರಿ ವಯಸ್ಸು 50–55 ವರ್ಷವಾಗಿದ್ದು, ಗ್ರಾಮೀಣ ಯುವಕರಲ್ಲಿ…

11 hours ago

ಹಸು ಕರು ಹಾಕಿದ ಬಳಿಕದ “ಪ್ಲಾಸೆಂಟಾ” ದಿಂದ ತಯಾರಿಸಬಹುದೇ ನೈಸರ್ಗಿಕ ದ್ರಾವಣ?

ಹಸು ಕರು ಹಾಕಿದ ಬಳಿಕ ಸಿಗುವ ಪ್ಲಾಸೆಂಟಾ ಅಥವಾ ‘ಮಾಸ’ವನ್ನು ತ್ಯಾಜ್ಯವಾಗಿ ಬಿಸಾಡದೆ,…

12 hours ago

ಹವಾಮಾನ ವರದಿ | 07-09-2026 | ಕರ್ನಾಟಕದಲ್ಲಿ ಮುಂದಿನ ಮಳೆಯ ಚಿತ್ರಣ ಹೇಗಿದೆ..?

ಸೆ.8 ರಿಂದ 10ರವರೆಗೆ ಕರಾವಳಿಯಲ್ಲಿ ಮೋಡ ಹೆಚ್ಚಾಗಿ ಅಲ್ಲಲ್ಲಿ ತುಂತುರು ಅಥವಾ ಸಾಮಾನ್ಯ…

19 hours ago

ಹೆಬ್ರಿಯ ಗೋಡಂಬಿ ತ್ಯಾಜ್ಯದಿಂದ ಹಡಗುಗಳಿಗೆ ಇಂಧನ..!

ಉಡುಪಿ ಜಿಲ್ಲೆಯ ಹೆಬ್ರಿ ಸಮೀಪ ಗೋಡಂಬಿ ಸಂಸ್ಕರಣಾ ತ್ಯಾಜ್ಯದಿಂದ ಜೈವಿಕ ಇಂಧನ ಮತ್ತು…

1 day ago

ಮಡಿಕೇರಿಯಲ್ಲಿ ಅಡಿಕೆ ಹಾಳೆ ತಟ್ಟೆಗೂ ನಿಷೇಧ..!

ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ಅಡಿಕೆ ತಟ್ಟೆ, ಪೇಪರ್ ಕಪ್, ಪೇಪರ್ ಪ್ಲೇಟ್ ಸೇರಿದಂತೆ…

1 day ago

ಹವಾಮಾನ ವರದಿ | 06-09-2026 | ಕರ್ನಾಟಕದಲ್ಲಿ ಮಳೆ ಇಳಿಮುಖದ ಲಕ್ಷಣ

ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮಳೆಯ ಸಾಧ್ಯತೆ ಇಳಿಮುಖವಾಗುತ್ತಿದ್ದು, ಕರಾವಳಿ–ಮಲೆನಾಡಿನಲ್ಲಿ ಸೆ.8ರಿಂದ 10ರವರೆಗೆ ಅಲ್ಲಲ್ಲಿ…

2 days ago