Advertisement
ಮಾಹಿತಿ

ವಿಷ್ಣುಗುಪ್ತ ವಿಶ್ವವಿದ್ಯಾಪೀಠ: ಅಧ್ಯಯನಕ್ಕೆ ಅರ್ಜಿ ಆಹ್ವಾನ

Share

ಬೆಂಗಳೂರು: ಆಧುನಿಕ ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ತಕ್ಷಶಿಲೆ ವಿವಿ ಮಾದರಿಯಲ್ಲಿ ಸಮಗ್ರ ಭಾರತೀಯ ಶಿಕ್ಷಣ ಹಾಗೂ ಕಲೆಗಳನ್ನು ಒಂದೇ ಸೂರಿನಡಿ ಕಲಿಸುವ ಗೋಕರ್ಣದ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಲೋಕಾರ್ಪಣೆ ಏಪ್ರಿಲ್ 26ರಂದು ನಡೆಯಲಿದ್ದು, ಮೊದಲ ಬ್ಯಾಚ್‍ಗೆ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಕೆಗೆ ಮೇ 15 ಕೊನೆಯ ದಿನ.

ಮೊದಲ ವರ್ಷ ಮೂಲಾಧಾರ ಎಂಬ ಎರಡು ವರ್ಷದ ಕೋರ್ಸ್ ಆರಂಭಿಸಲಾಗುತ್ತದೆ. ಆದರೆ 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಒಂದು ವರ್ಷದ ಬಾಲ ತರಗತಿ ಇರುತ್ತದೆ ಎಂದು ವಿವಿವಿ ಪ್ರಕಟಣೆ ಹೇಳಿದೆ.

ಮೂಲಾಧಾರ ಕೋರ್ಸ್ ಪಠ್ಯವಿಷಯದಲ್ಲಿ ವೇದಪಥ (ವೇದಮೂಲವಾದ ಭಾರತೀಯ ವಿದ್ಯೆ- ಕಲೆಗಳ ಸಮಗ್ರ ಪರಿಚಯ), ರಾಮಾಯಣ, ಮಹಾಭಾರತ, ಸಂಸ್ಕೃತ ವ್ಯಾಕರಣ, ಆಯುರ್ವೇದ, ಯೋಗ, ಸಂಗೀತ, ಮಹಾಪುರುಷ ಚರಿತ್ರೆ, ಇಂಗ್ಲಿಷ್, ಕಂಪ್ಯೂಟರ್, ವಿಜ್ಞಾನ, ಸಂಪರ್ಕ ಸಂವಾದ ಕೌಶಲ, ಭಾರತದ ಸಂವಿಧಾನ, ಲೋಕಜ್ಞಾನ ಮತ್ತಿತರ ವಿಷಯಗಳು ಸೇರಿವೆ. ಭಾರತೀಯ ವಿದ್ಯೆ, ಕಲೆಗಳ ಅಧ್ಯಯನಕ್ಕೆ ಬೇಕಾದ ಅರ್ಹತೆ, ಸಾಮಥ್ರ್ಯ ಮತ್ತು ಮನೋಭೂಮಿಕೆ ರೂಪಿಸುವುದು, ಪದವಿ ತರಗತಿಯಲ್ಲಿ ವಿಷಯದ ಆಯ್ಕೆಗೆ ಬೇಕಾದ ಸಮಗ್ರ ಭಾರತೀಯ ವಿದ್ಯೆ- ಕಲೆಗಳ ಸಾಮಾನ್ಯ ಜ್ಞಾನ ಪ್ರಾಪ್ತಿ, ವಿಶೇಷ ಕಲಿಕೆಗೆ ಬೇಕಾಗುವ ಭಾಷಾನೈಪುಣ್ಯ ಕರಗತ ಮಾಡಿಕೊಳ್ಳುವುದು ಹಾಗೂ ಸಮಗ್ರ ಭಾರತ- ಭಾರತೀಯ ಸಂಸ್ಕೃತಿಯ ಪರಿಚಯವನ್ನು ಈ ಎರಡು ವರ್ಷಗಳ ಕೋರ್ಸ್‍ನಲ್ಲಿ ಪಡೆಯಬಹುದಾಗಿದೆ.

ಪೂರ್ವಾಂಕುರ (8-16 ವಯಸ್ಸು), ಉತ್ತರಾಂಕುರ (16 ರಿಂದ 24 ವರ್ಷ) ಹಾಗೂ ಫಲಿತ ಹೀಗೆ ಮೂರು ವಿಭಾಗಗಳಲ್ಲಿ ಕಲಿಕೆಗೆ ಅವಕಾಶವಿದ್ದು, ಜಾತಿ, ಮತ, ಲಿಂಗ, ಭಾಷಾಭೇದವಿಲ್ಲದೇ ಹಿರಿಯ ನಾಗರಿಕರು ಕೂಡಾ ಅರ್ಜಿ ಸಲ್ಲಿಸಬಹುದಾಗಿದೆ. ಸಂಸ್ಥೆ ನಡೆಸುವ ದ್ವಾರಪರೀಕ್ಷೆಯೇ ಅರ್ಹತಾ ಮಾನದಂಡವಾಗಿರುತ್ತದೆ. ಕಲಿಕಾರ್ಥಿಗಳಿಗೆ ಸೂಕ್ತ ವಸತಿ ಮತ್ತು ಆಹಾರ ವ್ಯವಸ್ಥೆ ಇರುತ್ತದೆ.

ಗೋಕರ್ಣ ಸಮೀಪದ ಅಶೋಕೆಯಲ್ಲಿರುವ ವಿವಿವಿ ಕಾರ್ಯಾಲಯ, ಗೋಕರ್ಣ ಮಹಾಬಲೇಶ್ವರ ದೇವಾಲಯ, ಬೆಂಗಳೂರು ಗಿರಿನಗರದ ಶ್ರೀರಾಮಾಶ್ರಮ, ಹೊಸನಗರದ ರಾಮಚಂದ್ರಾಪುರ ಮಠ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಮಾಣಿಯಲ್ಲಿರುವ ಶ್ರೀರಾಮಚಂದ್ರಾಪುರ ಮಠದಲ್ಲಿ ಅರ್ಜಿ ನಮೂನೆಗಳು ಲಭ್ಯವಿದ್ದು, ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಬೇಕಾದ ವಿಳಾಸ: ವ್ಯವಸ್ಥಾಪಕರು, ವಿಷ್ಣುಗುಪ್ತ ವಿಶ್ವವಿದ್ಯಾಪೀಠ, ಅಶೋಕೆ, ಗೋಕರ್ಣ ಅಂಚೆ, ಕುಮಟಾ ತಾಲೂಕು, ಉತ್ತರ ಕನ್ನಡ ಜಿಲ್ಲೆ, ಕರ್ನಾಟಕ- 5581326. ದೂರವಾಣಿ: 9449595248, 9449595288.
ಆನ್‍ಲೈನ್ ಮೂಲಕವೂ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿಗಳನ್ನು www.srisamsthana.org/vvvನಿಂದ ಡೌನ್‍ಲೋಡ್ ಮಾಡಿಕೊಳ್ಳಬಹುದು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಭಾರತದ ಆಹಾರ ನಾಳೆ ಬೆಳೆಯೋರು ಯಾರು? ರೈತರ ವಯಸ್ಸು ಹೆಚ್ಚುತ್ತಿದೆ, ಯುವಕರು ಕೃಷಿಯಿಂದ ದೂರವಾಗುತ್ತಿದ್ದಾರೆ..!

ಭಾರತ ಯುವ ದೇಶವಾಗಿದ್ದರೂ ಕೃಷಿಕರ ಸರಾಸರಿ ವಯಸ್ಸು 50–55 ವರ್ಷವಾಗಿದ್ದು, ಗ್ರಾಮೀಣ ಯುವಕರಲ್ಲಿ…

10 hours ago

ಹಸು ಕರು ಹಾಕಿದ ಬಳಿಕದ “ಪ್ಲಾಸೆಂಟಾ” ದಿಂದ ತಯಾರಿಸಬಹುದೇ ನೈಸರ್ಗಿಕ ದ್ರಾವಣ?

ಹಸು ಕರು ಹಾಕಿದ ಬಳಿಕ ಸಿಗುವ ಪ್ಲಾಸೆಂಟಾ ಅಥವಾ ‘ಮಾಸ’ವನ್ನು ತ್ಯಾಜ್ಯವಾಗಿ ಬಿಸಾಡದೆ,…

10 hours ago

ಹವಾಮಾನ ವರದಿ | 07-09-2026 | ಕರ್ನಾಟಕದಲ್ಲಿ ಮುಂದಿನ ಮಳೆಯ ಚಿತ್ರಣ ಹೇಗಿದೆ..?

ಸೆ.8 ರಿಂದ 10ರವರೆಗೆ ಕರಾವಳಿಯಲ್ಲಿ ಮೋಡ ಹೆಚ್ಚಾಗಿ ಅಲ್ಲಲ್ಲಿ ತುಂತುರು ಅಥವಾ ಸಾಮಾನ್ಯ…

18 hours ago

ಹೆಬ್ರಿಯ ಗೋಡಂಬಿ ತ್ಯಾಜ್ಯದಿಂದ ಹಡಗುಗಳಿಗೆ ಇಂಧನ..!

ಉಡುಪಿ ಜಿಲ್ಲೆಯ ಹೆಬ್ರಿ ಸಮೀಪ ಗೋಡಂಬಿ ಸಂಸ್ಕರಣಾ ತ್ಯಾಜ್ಯದಿಂದ ಜೈವಿಕ ಇಂಧನ ಮತ್ತು…

23 hours ago

ಮಡಿಕೇರಿಯಲ್ಲಿ ಅಡಿಕೆ ಹಾಳೆ ತಟ್ಟೆಗೂ ನಿಷೇಧ..!

ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ಅಡಿಕೆ ತಟ್ಟೆ, ಪೇಪರ್ ಕಪ್, ಪೇಪರ್ ಪ್ಲೇಟ್ ಸೇರಿದಂತೆ…

24 hours ago

ಹವಾಮಾನ ವರದಿ | 06-09-2026 | ಕರ್ನಾಟಕದಲ್ಲಿ ಮಳೆ ಇಳಿಮುಖದ ಲಕ್ಷಣ

ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮಳೆಯ ಸಾಧ್ಯತೆ ಇಳಿಮುಖವಾಗುತ್ತಿದ್ದು, ಕರಾವಳಿ–ಮಲೆನಾಡಿನಲ್ಲಿ ಸೆ.8ರಿಂದ 10ರವರೆಗೆ ಅಲ್ಲಲ್ಲಿ…

2 days ago