ಸುಬ್ರಹ್ಮಣ್ಯ: ಕ್ರಿಕೇಟ್ ಪಂದ್ಯಾಟಗಳು ಗ್ರಾಮೀಣ ಕ್ರೀಡಾಳುಗಳ ಪ್ರತಿಭಾ ಅನಾವರಣಕ್ಕೆ ವೇದಿಕೆ. ಸಮಾಜಮುಖಿ ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳುವುದರ ಮೂಲಕ ಯುವಕರು ಕ್ರೀಡಾ ಕ್ಷೇತ್ರಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇಂತಹ ಪಂದ್ಯಾಟಗಳು ಮಹತ್ತರವಾದುದು. ಕೃಷ್ಣ ಕುಮಾರ್ ರುದ್ರಪಾದ ಅವರು ಸಾಮಾಜಿಕ, ಧಾರ್ಮಿಕ, ಸಮಾಜಮುಖಿ ಮತ್ತು ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಶ್ರೇಷ್ಠ ವ್ಯಕ್ತಿ. ಬಡವರ ಬಗ್ಗೆ ಅತೀವ ಕಾಳಜಿ ಇದ್ದ ಜನಪರ ವ್ಯಕ್ತಿತ್ವದ ಶ್ರೇಷ್ಠ ನಾಯಕತ್ವ ಗುಣ ಹೊಂದಿದ ಕೃಷ್ಣ ಕುಮಾರ್ ಅವರ ನೆನಪಿಗಾಗಿ ನಡೆಸಿದ ಪಂದ್ಯಾಟವು ಶ್ಲಾಘನೀಯ. ಸುಮಾರು 40 ವರ್ಷ ಇತಿಹಾಸ ಹೊಂದಿದ ಗಾಂಗೇಯ ಕ್ರಿಕೇಟ್ ತಂಡ ನಡೆಸಿದ ಈ ಪಂದ್ಯಾಟವು ಯುವಕರ ಕ್ರಿಕೇಟ್ ಆಸಕ್ತಿಯನ್ನು ಉತ್ತೇಜಿಸಲು ವಿಶೇಷ ಅವಕಾಶ ಒದಗಿಸಿದೆ ಎಂದು ಕೆ.ಎಸ್.ಎಸ್.ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಕೆ.ಆರ್.ಶೆಟ್ಟಿಗಾರ್ ಹೇಳಿದರು.
ಸುಮಾರು 40 ವರ್ಷ ಇತಿಹಾಸ ಹೊಂದಿರುವ ಸುಬ್ರಹ್ಮಣ್ಯದ ಗಾಂಗೇಯ ಕ್ರಿಕೇಟರ್ಸ್ ಆಶ್ರಯದಲ್ಲಿ ದಿ|| ಕೃಷ್ಣಕುಮಾರ್ ರುದ್ರಪಾದ ಸ್ಮರಣಾರ್ಥವಾಗಿ, ಅವಿಭಜಿತ ದ.ಕ ಮತ್ತು ಕಾಸರಗೋಡು ಜಿಲ್ಲೆಗಳ ಪ್ರತಿಷ್ಠಿತ ಆಯ್ದ 20 ತಂಡಗಳ ಅಂಡರ್ ಆರ್ಮ್ ಕ್ರಿಕೇಟ್ ಪಂದ್ಯಾಟ ಗಾಂಗೇಯ ಟ್ರೋಫಿ-2020ಯ ಉದ್ಘಾಟನಾ ಸಮಾರಂಭದಲ್ಲಿ ಅವರು ದಿಕ್ಸೂಚಿ ಮಾತುಗಳನ್ನಾಡಿದರು. ಕ್ರಿಕೇಟ್ ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಪ್ರಾಶಸ್ತ್ಯ ಹೊಂದಿದೆ. ಇದರೊಂದಿಗೆ ಗ್ರಾಮೀಣರು ಆಡುವ ಅಂಡರ್ ಆರ್ಮ್ ಕ್ರಿಕೇಟ್ ಪಂದ್ಯಾಟಗಳನ್ನೂ ಪ್ರೋತ್ಸಾಹಿಸಿ ಬೆಳೆಸುವುದು ಕೂಡಾ ಉತ್ತಮವಾದುದು ಎಂದರು.
ಉದ್ಘಾಟನೆ: ಪಂದ್ಯಾಟವನ್ನು ಕಲಾವಿದ ಮತ್ತು ಗಾಂಗೇಯ ತಂಡದ ಮಾಜಿ ನಾಯಕ ಹರೀಶ್ ಕಾಮತ್ ಉದ್ಘಾಟಿಸಿದರು. ಗಾಂಗೇಯ ತಂಡದ ಸ್ಥಾಪಕ ನಾಯಕ ಎಂ.ಸರ್ವೋತ್ತಮ ಕಾಮತ್ ಬಲೂನ್‍ಗಳನ್ನು ಆಗಸಕ್ಕೆ ಹಾರಿಸುವ ಮೂಲಕ ಪಂದ್ಯಾಟಕ್ಕೆ ಚಾಲನೆ ನೀಡಿದರು. ಗಾಂಗೇಯ ಕ್ರಿಕೇಟರ್ಸ್‍ನ ಅಧ್ಯಕ್ಷ ರವೀಂದ್ರ ಕುಮಾರ್ ರುದ್ರಪಾದ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ.ಸದಸ್ಯ ಅಶೋಕ್ ನೆಕ್ರಾಜೆ, ಜೇಸಿಸ್ ವಲಯಾಧಿಕಾರಿ ರವಿ ಕಕ್ಕೆಪದವು, ಗ್ರಾ.ಪಂ.ಸದಸ್ಯ ಮೋಹನದಾಸ ರೈ, ಭೂಮಾಪಕ ಪ್ರಸಾದ್ ರೈ, ಕುಲ್ಕುಂದ ವಿಷ್ಣುಮೂರ್ತಿ ದೈವಸ್ಥಾನದ ಆಡಳಿತ ಮಂಡಳಿ ಸದಸ್ಯ ರಾಜೇಶ್ ಕಾಶಿಕಟ್ಟೆ, ರೋಟರಿ ಪೂರ್ವಾಧ್ಯಕ್ಷ ಕಿಶೋರ್ ಕುಮಾರ್ ಕೂಜುಗೋಡು, ಮುಖ್ಯಅತಿಥಿಗಳಾಗಿದ್ದರು. ತಂಡದ ನಾಯಕ ಪ್ರಕಾಶ್ ಸುಬ್ರಹ್ಮಣ್ಯ, ಗಾಂಗೇಯ ತಂಡದ ಹಿರಿಯ ಆಟಗಾರರಾದ ಗಿರಿಧರ್ ಸ್ಕಂಧ, ರಾಮಕೃಷ್ಣ ಭಟ್ ನೂಚಿಲ, ಸುಭಾಸ್ ರೈ ಬಾಳಿಲ ವೇದಿಕೆಯಲ್ಲಿದ್ದರು.
ಗೌರವಾರ್ಪಣೆ: ಸಮಾರಂಭದಲ್ಲಿ ಗಾಂಗೇಯ ತಂಡದ ಪ್ರಾರಂಭದ ನಾಯಕ ಎಂ.ಸರ್ವೋತ್ತಮ ಕಾಮತ್ ಮತ್ತು ಗಾಂಗೇಯ ತಂಡದ ಆಟಗಾರ ಮತ್ತು ಹಿರಿಯರ ಅಂತರಾಷ್ಟ್ರೀಯ ಕ್ರೀಡಾಪಟು ಸುಭಾಶ್ ರೈ ಬಾಳಿಲ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಗಾಂಗೇಯ ತಂಡದ ಹಿರಿಯ ಆಟಗಾರ ರತ್ನಾಕರ.ಎಸ್ ಸ್ವಾಗತಿಸಿದರು. ತಂಡದ ಹಿರಿಯ ಸದಸ್ಯ ಗಿರಿಧರ್ ಸ್ಕಂಧ ಪ್ರಸ್ತಾಪಿಸಿದರು. ತಂಡದ ಸದಸ್ಯ ದೀಪಕ್ ನಂಬಿಯಾರ್ ವಂದಿಸಿದರು.ಚಂದಪ್ಪ ಬೆಳ್ತಂಗಡಿ ಕಾರ್ಯಕ್ರಮ ನಿರೂಪಿಸಿದರು. ಪಂದ್ಯಾಟದಲ್ಲಿ ತ್ರಿವಳಿ ಜಿಲ್ಲೆಗಳ ಪ್ರತಿಷ್ಠಿತ ಆಹ್ವಾನಿತ ತಂಡಗಳು ಪ್ರಶಸ್ತಿಗಾಗಿ ಸೆಣೆಸಾಡುತ್ತಿವೆ.
ಈಗಿನಂತೆ ಈ ಮಳೆಯು ನವೆಂಬರ್ 4ರ ವರೆಗೆ ಮುಂದುವರಿಯುವ ಲಕ್ಷಣಗಳಿವೆ.
ಕತ್ತಲಿನಿಂದ ಬೆಳಕಿನೆಡೆಗೆ ಸಾಗುವ ದೀಪಾವಳಿಗೆ ದೀಪವೇ ವಿಶೇಷ. ವಿವಿಧ ವಿನ್ಯಾಸದ ಬಣ್ಣದ ದೀಪಗಳನ್ನು…
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರ ದಟ್ಟಣೆ ನಿವಾರಿಸಲು ನೈರುತ್ಯ ರೈಲ್ವೆ ರಾಜ್ಯದ ವಿವಿಧ…
ಕಂದಾಯ ಅಧಿಕಾರಿಗಳು ಸಂವೇದನಾಶೀಲತೆಯಿಂದ ಕಾರ್ಯ ನಿರ್ವಹಿಸಿದರೆ ಸಾರ್ವಜನಿಕರಿಗೆ ಅತ್ಯುತ್ತಮ ಸೇವೆ ನೀಡಬಹುದು ಎಂದು…
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸರಬರಾಜು ಮಾಡುವ ಅಗತ್ಯ ಔಷಧಿಗಳ ಪಟ್ಟಿಯನ್ನು 250 ರಿಂದ…
ದೀಪಾವಳಿಯ ವೇಳೆ ಪಟಾಕಿ ಸಿಡಿಸುವಾಗ ಇರಲಿ ಎಚ್ಚರ.