ನಿಂತಿಕಲ್ಲು : ಮಾತೃ ಶಕ್ತಿ ಮತ್ತು ಯುವ ಶಕ್ತಿ ಒಂದಾಗಿ ಧರ್ಮದ ಉಳಿವಿಗೆ ಕೈಜೋಡಿಸಬೇಕು. ಧರ್ಮದ ಜಾಗೃತಿಯ ಜೊತೆ ಸಮಾಜದ ಜಾಗೃತಿಯೂ ಅಗತ್ಯವಾಗಿದ್ದು, ಅಂತರ್ಜಾಲದ ಮೋಹಕ್ಕೆ ಬಲಿಯಾಗಿ ದಾರಿ ತಪ್ಪುವ ಬದಲು ಧಾರ್ಮಿಕ ಮೋಹದಿಂದ ಬದುಕು ಹಸನಾಗಿಸಿಕೊಳ್ಳುವುದೇ ಶ್ರೇಷ್ಠ ಕಾರ್ಯ ಎಂದು ಕರಿಂಜೆ ಶ್ರೀ ಲಕ್ಷ್ಮೀ ಸತ್ಯನಾರಾಯಣ ವೀರಾಂಜನೇಯ ಸ್ವಾಮಿ ದೇವಸ್ಥಾನದ ಮುಕ್ತಾನಂದ ಸ್ವಾಮೀಜಿ ನುಡಿದರು.
ಕೇರ್ಪಡ ಶ್ರೀ ಮಹಿಷಮರ್ಧಿನಿ ದೇವಸ್ಥಾನದಲ್ಲಿ ನಡೆದ ‘ಅಮ್ಮನೆಡೆ ನಮ್ಮ ನಡೆ’ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಅವರು ಅಶೀರ್ವಚನ ನೀಡಿದರು. ದೇವಸ್ಥಾನದ ಗರ್ಭಗುಡಿಯಲ್ಲಿರುವ ದೇವರನ್ನು ಮಾತ್ರ ಪೂಜಿಸಿದರೆ ಸಾಲದು, ದೇವರಿಗೆ ಸಮಾನಳಾದ ತಾಯಿಯನ್ನು ಮನೆಯಲ್ಲಿ ಪ್ರತಿದಿನ ಪೂಜಿಸುವಂತಾಗಬೇಕು. ಮಕ್ಕಳನ್ನು ವಿಕೃತಿ ಭಾವನೆಗಳಿಂದ ತಪ್ಪಿಸಿ ಅವರಿಗೆ ಸುಸಂಸ್ಕೃತ ಜೀವನ ನಡೆಸುವುದನ್ನು ಕಲಿಸಬೇಕು. ಅಮ್ಮನೆಡೆ ನಮ್ಮ ನಡೆ ಅರ್ಥಪೂರ್ಣವಾಗಿದ್ದು, ದೇವರ ಸಾನಿಧ್ಯಕ್ಕೆ ಭಕ್ತರು ನಡೆದು ಬರುವುದು ವೈಶಿಷ್ಟ್ಯಪೂರ್ಣ ಕಾರ್ಯಕ್ರಮ ಎಂದು ಸ್ವಾಮೀಜಿ ಹೇಳಿದರು.
ಕಡಬ ಸರಸ್ವತಿ ವಿದ್ಯಾ ಸಂಸ್ಥೆಯ ಸಂಚಾಲಕ ವೆಂಕಟ್ರಮಣ ಭಟ್ ಧಾರ್ಮಿಕ ಉಪನ್ಯಾಸ ನೀಡಿದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅಕ್ಷಯ ಆಳ್ವ ಪಿ.ಡಿ ಅಧ್ಯಕ್ಷತೆ ವಹಿಸಿದ್ದರು. ನಿಂತಿಕಲ್ಲು ಕೆ.ಎಸ್ ಗೌಡ ವಿದ್ಯಾ ಸಂಸ್ಥೆಯ ನಿರ್ದೇಶಕ ಕುಮಾರಸ್ವಾಮಿ ಕೆ.ಎಸ್, ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ವಸಂತ ನಡುಬೈಲು, ತಾ.ಪಂ. ಮಾಜಿ ಸದಸ್ಯೆ ಭಾಗ್ಯ ಪ್ರಸನ್ನ, ಪ್ರಗತಿಪರ ಕೃಷಿಕ ಪದ್ಮನಾಭ ರೈ ಎಂಜೀರು, ವಿಶೇಷ ಪಾದಯಾತ್ರೆ ಸಂಚಾಲಕ ರಘುನಾಥ ರೈ ಅಲೆಂಗಾರ ಉಪಸ್ಥಿತರಿದ್ದರು. ರಘುನಾಥ ರೈ ಸ್ವಾಗತಿಸಿದರು. ಪ್ರದೀಪ್ ರೈ ಎಣ್ಮೂರು ಕಾರ್ಯಕ್ರಮ ನಿರೂಪಿಸಿದರು.
ಅಮ್ಮನಡೆ ನಮ್ಮ ನಡೆ ಕಾರ್ಯಕ್ರಮದ ಅಂಗವಾಗಿ ಎಣ್ಮೂರು ಭಜನಾ ಮಂದಿರದಿಂದ ದೇವಸ್ಥಾನದವರೆಗೆ ಆಕರ್ಷಕ ಪಾದಯಾತ್ರೆ ನಡೆಯಿತು. ಎಣ್ಮೂರು ಕೋಟಿ ಚೆನ್ನಯ ನಗರದ ಸೀತಾರಾಮಾಂಜನೇಯ ಭಜನಾ ಮಂದಿರದಲ್ಲಿ ಪಂಜ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತಾಧಿಕಾರಿ ಡಾ.ದೇವಿಪ್ರಸಾದ್ ಕಾನತ್ತೂರು ಮತ್ತು ಕಾಣಿಯೂರು ಪ್ರಗತಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಜಯಸೂರ್ಯ ರೈ ಪಾದಾಯಾತ್ರೆ ಉದ್ಘಾಟಿಸಿದರು.
ಪ್ರಗತಿ ಶಾಲೆಯ ವಿದ್ಯಾರ್ಥಿಗಳಿಂದ ಆಕರ್ಷಕ ನೃತ್ಯ ಭಜನೆ, ಶ್ರೀ ಕಪಿಲೇಶ್ವರ ಸಿಂಗಾರಿ ಮೇಳದವರಿಂದ ಆಕರ್ಷಕ ಚೆಂಡೆ ಪ್ರದರ್ಶನ, ಹತ್ತಕ್ಕೂ ಅಧಿಕ ಹುಲಿವೇಷದ ಕುಣಿತದೊಂದಿಗೆ ಎಣ್ಮೂರು ಭಜನಾ ಮಂದಿರದಿಂದ ಸಾಗಿ ನಿಂತಿಕಲ್ಲು ಪೇಟೆ, ಅಲೆಕ್ಕಾಡಿ ಮಾರ್ಗವಾಗಿ ಕೇರ್ಪಡ ದೇವಸ್ಥಾನದವರೆಗೆ ಜಾಥಾ ನಡೆಯಿತು.
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…