ಸುಳ್ಯ: ಉದಾತ್ತ ಚಿಂತನೆಗಳ ಮೂಲಕ ಹುಟ್ಟಿಕೊಂಡ ಅಂತಃ ಸತ್ವ ಹಿಂದೂ ಧರ್ಮದಲ್ಲಿ ಅಡಗಿದೆ. ನಮ್ಮ ಸಂಸ್ಕೃತಿಯನ್ನು ಪಾಲಿಸಬೇಕಾದ ಮತ್ತು ಉಳಿಸಬೇಕಾದ ಅಗತ್ಯತೆ ಹಿಂದೆಂದಿಗಿಂತಲೂ ಇಂದು ಹೆಚ್ಚಿದೆ. ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದ ನಮ್ಮ ಸಂಸ್ಕೃತಿಯ ಬಗ್ಗೆ ಉಂಟಾಗಿರುವ ಅಸಡ್ಡೆ ಮತ್ತು ಅನಾದರ ನಮ್ಮ ಬದುಕಿಗೆ ಮಾರಕವಾಗಿದೆ ಎಂದು ಸುಬ್ರಹ್ಮಣ್ಯ ಶ್ರೀ ಸಂಪುಠ ನರಸಿಂಹ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮಿ ಹೇಳಿದ್ದಾರೆ.
ಸುಳ್ಯ ಹಳೆಗೇಟಿನ ಶ್ರೀ ಕೃಶವ ಕೃಪಾ ವೇದ ಯೋಗ ಮತ್ತು ಕಲಾ ಪ್ರತಿಷ್ಠಾನದ ವತಿಯಿಂದ ನಡೆದ ವೇದ-ಯೋಗ-ಕಲಾ ಶಿಬಿರದ ಸಮಾರೋಪ ಮತ್ತು ಕೇಶವ ಸ್ಮೃತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು. ಆರ್ಥಿಕ ಸ್ವಾತಂತ್ರ್ಯ ಮತ್ತು ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದ ಜೀವನದಲ್ಲಿ ಬದ್ಧತೆ ಇಲ್ಲದಂತಾಗಿದೆ. ಆದುದರಿಂದ ಪ್ರತಿಯೊಬ್ಬರ ಜೀವನದಲ್ಲಿ ಮತ್ತು ಪ್ರತಿ ಮನೆಯಲ್ಲಿ ಧರ್ಮ, ಸಂಸ್ಕøತಿಯ ಆಚರಣೆ ಆಗಬೇಕಾಗಿದೆ. ನಮ್ಮ ಸಂಸ್ಕೃತಿ ಮತ್ತು ಆಚಾರವನ್ನು ನಾವು ಚೆನ್ನಾಗಿಟ್ಟರೆ ಅದು ನಮ್ಮನ್ನು ಚೆನ್ನಾಗಿಡುತ್ತದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಸ್ವರ್ಣೋದ್ಯಮಿ ಬಲರಾಮ ಆಚಾರ್ಯ ಮಾತನಾಡಿ, ನಮ್ಮ ಮೂಲ ಸಂಸ್ಕೃತಿ ಉಳಿದಿರುವುದು ವೇದ ಮತ್ತು ಸಂಸ್ಕೃತದಿಂದ ಮಾತ್ರ. ಕೇಶವಕೃಪಾ ವೇದ ಶಿಬಿರದ ಮೂಲಕ ವೇದವನ್ನು ಕಲಿಸಿ ನಮ್ಮ ಸಂಸ್ಕೃತಿ ಮತ್ತು ಧರ್ಮವನ್ನು ಉಳಿಸುವ ಕೆಲಸ ಶ್ಲಾಘನೀಯ ಎಂದರು.
ಕೃಷಿಕ ರಾಜಗೋಪಾಲ ಭಟ್ ಉಂಡೆಮನೆ ಅಧ್ಯಕ್ಷತೆ ವಹಿಸಿದ್ದರು.
ಪ್ರತಿಷ್ಠಾನದ ವತಿಯಿಂದ ನೀಡುವ ಕೇಶವ ಸ್ಮೃತಿ ಪ್ರಶಸ್ತಿ ಗಳನ್ನು ಈ ಸಂದರ್ಭದಲ್ಲಿ ಪ್ರದಾನ ಮಾಡಲಾಯಿತು. ವೇದಸ್ಮೃತಿ ಪ್ರಶಸ್ತಿಯನ್ನು ವೈದಿಕ ವಿದ್ವಾಂಸ ಪುರುಷೋತ್ತಮ ಭಟ್ ದೇರ್ಕಜೆ, ಯೋಗ ಸ್ಮೃತಿ ಪ್ರಶಸ್ತಿಯನ್ನು ಯೋಗ ಸಂಪನ್ಮೂಲ ವ್ಯಕ್ತಿ ಪ್ರಕಾಶ್ ಮೂಡಿತ್ತಾಯ, ಕಲಾಸ್ಮೃತಿ ಪ್ರಶಸ್ತಿಯನ್ನು ಸಾಕ್ಸೋಫೋನ್ ವಾದಕ ಬಾಲಚಂದ್ರ ಪೆರಾಜೆ ಅವರಿಗೆ ನೀಡಿ ಗೌರವಿಸಲಾಯಿತು. ಸ್ವರ್ಣೋದ್ಯಮಿ ಬಲರಾಮ ಆಚಾರ್ಯ ಪ್ರಶಸ್ತಿ ಪ್ರದಾನ ಮಾಡಿದರು.
ಕೇಶವ ಕೃಪಾ ವೇದ-ಯೋಗ-ಕಲಾ ಶಿಬಿರದ ಸಂಚಾಲಕ ಎಂ.ಎಸ್.ನಾಗರಾಜ ರಾವ್ ಅಭಿನಂದನಾ ಭಾಷಣ ಮಾಡಿದರು. ನಟರಾಜ ಶರ್ಮ, ಅಭಿರಾಮ ಶರ್ಮ, ಸುದರ್ಶನ ಭಟ್ ಪ್ರಶಸ್ತಿ ಪತ್ರ ವಾಚಿಸಿದರು. ಕೇಶವಕೃಪಾ ವೇದ-ಯೋಗ-ಕಲಾ ಪ್ರತಿಷ್ಠಾನದ ಗೌರವಾಧ್ಯಕ್ಷ ಎಂ.ಗೋಪಾಲಕೃಷ್ಣ ಭಟ್ ವಗೆನಾಡು ಉಪಸ್ಥಿತರಿದ್ದರು. ಶಿಬಿರದ ವಿದ್ಯಾರ್ಥಿಗಳಿಗೆ ನೀಡುವ ಸರ್ವ ಪ್ರಥಮ ಪ್ರಶಸ್ತಿಯನ್ನು ತೇಜಸ್ವಿನಾರಾಯಣ, ಶಶಾಂಕ ಭಟ್, ಪ್ರತಿಭಾ ಪುರಸ್ಕಾರವನ್ನು ಅಸೀಮಾ ಅಗ್ನಿಹೋತ್ರಿ, ಅದ್ವೈತ್ ಅಗ್ನಿಹೋತ್ರಿ, ಅಭಿಷೇಕ್ ಭಟ್‍ಗೆ ನೀಡಲಾಯಿತು.
ಪ್ರತಿಷ್ಢಾನದ ಅಧ್ಯಕ್ಷ ಪುರೋಹಿತ ನಾಗರಾಜ ಭಟ್ ಸ್ವಾಗತಿಸಿದರು. ಎಂ.ಎಸ್.ನಾಗರಾಜರಾವ್ ಪ್ರಸ್ತಾವನೆಗೈದರು. ಶ್ರೀದೇವಿ ನಾಗರಾಜ ಭಟ್ ಮತ್ತು ರಾಮಚಂದ್ರ ಭಟ್ ಕಾರ್ಯಕ್ರಮ ನಿರೂಪಿಸಿದದರು.
ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ ಮಲೆನಾಡಿನ ಗ್ರಾಮೀಣ ಭಾಗಕ್ಕೂ ಶುದ್ಧವಾಗಿರುವ ಕುಡಿಯುವ…
ದೇಶಾದ್ಯಂತ ನಗರೀಕರಣ ಬೆಳವಣಿಗೆಯಾದಂತೆ ಸಮುದಾಯದ ಸ್ಥಳಗಳು ಕಣ್ಮರೆಯಾಗಿವೆ. ಕರಾವಳಿ ನಗರದಾದ್ಯಂತ ಸುಮಾರು 250…
ರಾಜ್ಯದ ಕಾಡಂಚಿನ ಪ್ರದೇಶದಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಸರ್ಕಾರ…
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಾಳೆ ಮಂಡಿಸಲಿರುವ ಕೇಂದ್ರ ಬಜೆಟ್ 2025…
ಬೆಂಗಳೂರಿನ ಯಲಹಂಕ ತಾಲ್ಲೂಕಿನ ಒಟ್ಟು 5678 ಎಕರೆ ಗುಂಟೆ ಪ್ರದೇಶವನ್ನು ಪರಿಸರ ಸಂರಕ್ಷಣೆ…
ಬೆಳೆಗಾರರಿಗೆ ತರಬೇತಿ ನೀಡಲು ತರಬೇತಿ ಕೇಂದ್ರ ಸ್ಥಾಪನೆ ಮಾಡಲಾಗುವುದು ಎಂದು ಕರ್ನಾಟಕ ಕೊಳಚೆ…