Advertisement
Political mirror

ಕೊನೆಗೂ “ಥಂಡ”ವಾಗಲಿಲ್ಲ ಬಂಡಾಯ…!, ಬಿಜೆಪಿ, ಕಾಂಗ್ರೆಸ್ ಇಲ್ಲ “ಕೂಲ್..ಕೂಲ್”

Share

ಸುಳ್ಯ: ನ.ಪಂ.ಚುನಾವಣೆಯಲ್ಲಿ ಕೆಲವು ವಾರ್ಡ್‍ಗಳಲ್ಲಿ ಟಿಕೆಟ್ ಆಕಾಂಕ್ಷಿಗಳಾಗಿದ್ದು ಪಕ್ಷೇತರರಾಗಿ ಕಣದಲ್ಲಿ ಉಳಿದಿರುವುದು ಕಾಂಗ್ರೆಸ್ ಮತ್ತು ಬಿಜೆಪಿಗೆ ಬಂಡಾಯ ತಣ್ಣಗಾಗದ ಹಿನ್ನೆಲೆಯಲ್ಲಿ  ಈ ಬಾರಿ ಕೆಲ ವಾರ್ಡ್ ಗಳಲ್ಲಿ  ಎರಡೂ ಪಕ್ಷಗಳಿಗೆ ಬಿಸಿ ತಟ್ಟಲಿದೆ.

ಬೋರುಗುಡ್ಡೆಯಲ್ಲಿ ಆರ್.ಕೆ.ಮಹಮ್ಮದ್, ಬೂಡು ವಾರ್ಡ್‍ನಲ್ಲಿ ಮಹಮ್ಮದ್ ರಿಯಾಝ್ ಕಟ್ಟೆಕ್ಕಾರ್, ಬೀರಮಂಗಲ ವಾರ್ಡ್‍ನಲ್ಲಿ ಅಬ್ದುಲ್ ರಹಿಮಾನ್ ಎಂ.ಎಂ. ಜಯನಗರ ವಾರ್ಡ್‍ನಲ್ಲಿ ನವೀನ್ ಮಚಾದೋ ಪಕ್ಷೇತರರಾಗಿ ಸ್ಪರ್ಧಿಸುವುದು ಕಾಂಗ್ರೆಸ್‍ಗೆ ಸವಾಲಾಗಲಿದೆ.

ಶಾಂತಿನಗರ ವಾರ್ಡ್‍ನಲ್ಲಿ ಜನಾರ್ಧನ ಬೆಟ್ಟಂಪಾಡಿ ಮತ್ತು 19ನೇ ವಾರ್ಡ್‍ನಲ್ಲಿ ಮೋಹಿನಿ ಎ.ಪಕ್ಷೇತರರಾಗಿ ಸ್ಪರ್ಧಿಸುವುದು ಬಿಜೆಪಿಗೆ ತಲೆ ನೋವು ಸೃಷ್ಠಿಸಲಿದೆ.

ಎರಡೂ ಪಕ್ಷಗಳ ನೇತೃತ್ವ ಕಳೆದ ಕೆಲವು ದಿನಗಳಿಂದದ ನಡೆಸಿದ ಪ್ರಯತ್ನದಿಂದ ತಲಾ ಒಂದೊಂದು ವಾರ್ಡ್‍ಗಳ ಬಂಡಾಯ ಶಮನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

15ನೇ ವಾರ್ಡ್‍ನಲ್ಲಿ ಪಕ್ಷೇತರನಾಗಿದ್ದ ಅಬ್ದುಲ್ ಮಜೀದ್ ನಾಮಪತ್ರ ಹಿಂಪಡೆದಿರುವುದು ಕಾಂಗ್ರೆಸ್‍ಗೆ ಮತ್ತು 20ನೇ ವಾರ್ಡ್‍ನಲ್ಲಿ ಜಯಂತಿ ಆರ್.ರೈ ನಾಮಪತ್ರ ಹಿಂಪಡೆದಿರುವುದು ಬಿಜೆಪಿಗೆ ಕೊಂಚ ರಿಲೀಫ್ ಕೊಟ್ಟಿದೆ.

ಜಯನಗರ ವಾರ್ಡ್‍ನಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಸುರೇಶ್ ಕಾಮತ್ ಜೆಡಿಎಸ್ ನೇತೃತ್ವದ ಸೂಚನೆಯ ಮೇರೆಗೆ ನಾಮಪತ್ರ ಹಿಂಪಡೆದಿದ್ದಾರೆ. ಬೋರುಗುಡ್ಡೆ ವಾರ್ಡ್‍ನಲ್ಲಿ ಜೆಡಿಎಸ್ ಅಭ್ಯರ್ಥಿ ಅಬ್ದುಲ್ ರಹೀಂ ಫ್ಯಾನ್ಸಿ ಕಣದಲ್ಲಿದ್ದಾರೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಫ್ಲೈಓವರ್ ಬಳಿಕ ಕಲ್ಲಡ್ಕದಲ್ಲಿ ಏನು ಬದಲಾವಣೆಯಾಗಿದೆ..?

ಕಲ್ಲಡ್ಕದ 2.1 ಕಿ.ಮೀ. ಉದ್ದದ ಫ್ಲೈಓವರ್ ಸಂಚಾರಕ್ಕೆ ಮುಕ್ತವಾದ ಬಳಿಕ ಪೇಟೆಯೊಳಗಿನ ವಾಹನ…

3 hours ago

ಹಲಸಿನಂತೆಯೇ ಕಾಣುವ ಈ ಹಣ್ಣು ನಿಮಗೆ ಗೊತ್ತೇ?

ಹಲಸಿನ ಹಣ್ಣಿನಂತೆ ಕಾಣುವ ಚೆಂಪೆಡಕ್ ಹಣ್ಣು ರುಚಿ ಮತ್ತು ಸುವಾಸನೆಯ ಜತೆಗೆ ವಿಟಮಿನ್‌…

4 hours ago

ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಮಹಿಳೆಯರ ಓಟಕ್ಕೆ ಚಿನ್ನದ ಹೊಳಪು – 4×400 ಮೀ. ರಿಲೇಯಲ್ಲಿ ಭರ್ಜರಿ ಗೆಲುವು

ಏಷ್ಯನ್ ಗೇಮ್ಸ್‌ನಲ್ಲಿ ಮಹಿಳೆಯರ 4×400 ಮೀಟರ್ ರಿಲೇಯಲ್ಲಿ ಭಾರತ 3:29.69 ಸಮಯದೊಂದಿಗೆ ಚಿನ್ನ…

4 hours ago

ಕಾಳುಮೆಣಸು ಮಾರುಕಟ್ಟೆಯಲ್ಲಿ ಏನಾಗುತ್ತಿದೆ?

ಆಗಮನ ಕಡಿಮೆಯಾಗಿದ್ದರೂ ದೇಶದ ಕಾಳುಮೆಣಸು ಬೆಲೆಯಲ್ಲಿ ಇಳಿಕೆ ಕಂಡುಬಂದಿದ್ದು, ದಾಸ್ತಾನು ಮತ್ತು ಬೇಡಿಕೆ…

14 hours ago

ಹವಾಮಾನ ವರದಿ | 29-09-2026 | ಅ.6 ರವರೆಗೆ ಹಲವು ಜಿಲ್ಲೆಗಳಲ್ಲಿ ಮಳೆಯ ಸಾಧ್ಯತೆ

ಅರಬ್ಬಿ ಸಮುದ್ರದ ಗಾಳಿಯು ಶ್ರೀಲಂಕಾ ಹಾಗೂ ತಮಿಳುನಾಡು ಕರಾವಳಿ ಮೂಲಕ ರಾಜ್ಯಕ್ಕೆ ಪ್ರವೇಶಿಸುತ್ತಿರುವ…

14 hours ago

ಕೃಷಿ ವೆಚ್ಚ ಕಡಿಮೆ ಮಾಡಲು ಇಲ್ಲಿ ರೈತರ ಹೊಸ ಹೆಜ್ಜೆ…

ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ವೆಚ್ಚ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಚಿತ್ರಕೂಟದ…

19 hours ago