ಸುಳ್ಯ: ರಾಜ್ಯದ ಮೈತ್ರಿ ಸರಕಾರ ಪತನಗೊಂಡಿದೆ. ಇದಾದ ಬಳಿಕ ಸುಳ್ಯ ಶಾಸಕ ಎಸ್. ಅಂಗಾರ ಅವರ ಟ್ವಿಟ್ಟರ್ ಖಾತೆ ಮೂಲಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೊನೆಗೂ ದಕ್ಕಿದ ಜಯ ನಮ್ಮ ಜನತೆಗಾಗಿ ಮುಡಿಪು ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಕಳೆದ ಒಂದು ವಾರಗಳಿಂದ ಶಾಸಕರುಗಳೆಲ್ಲಾ ರಾಜಧಾನಿಯಲ್ಲೇ ಬೀಡುಬಿಟ್ಟಿದ್ದರು. ಇದೀಗ ಸರಕಾರ ಪತನಗೊಂಡಿದೆ. ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆಯಾಗಬಹುದೇ ? ಸರಕಾರ ರಚನೆಯಾದರೆ ಯಾರೆಲ್ಲಾ ಸಚಿವರಾಗುತ್ತಾರೆ ? ಯಾವ ಜಿಲ್ಲೆಗೆ ಸಚಿವ ಸ್ಥಾನ ಸಿಗುತ್ತದೆ, ಅಂಗಾರ ಅವರಿಗೆ ಸಿಗುತ್ತಾ ಇತ್ಯಾದಿ ಚರ್ಚೆಗಳು ಆರಂಭವಾಗಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel