ಅನುಕ್ರಮ

ಕೊರೊನಾ ಅಲ್ಲ, ಇದು “ಎಲ್ನಿನೋ” ಎಚ್ಚರಿಕೆ…!

Share

ನಾನು ಅಂದೊಂದು ಲೇಖನದಲ್ಲಿ ಬರೆದಿದ್ದೆ…

Advertisement

” ಎಲ್ನಿನೋ” ಅಂದರೆ ಪ್ರಕೃತಿಯ ಎಚ್ಚರಿಕೆ ಅಂತ.

ಎಲ್ ನಿ ನೋ … ಈ ಶಬ್ದದ ವಿಸ್ತರಿತ ರೂಪ ಅಂದರೆ

ಎಲ್… ಲೋ,

ನಿ.. ನಿನ್ನ,

ನೋ… ನೋಡ್ಕೋತಿನಿ.

ಅಂದರೆ ಪ್ರಕೃತಿ ಮಾನವನ ಆಟಾಟೋಪಕ್ಕೆ ಲೋ ನಿನ್ನ ನೋಡ್ಕೊತಿನಿ ಅಂತ ಮಳೆ,ಗಾಳಿ,ಬಿಸಿಲು,ಶೀತ,ಉಷ್ಣತೆ,ಮೂಲಕ ಎಚ್ಚರಿಸಿದರೂ ಗಮನವೇ ಕೊಡದ ಮಾನವನಿಗೆ ,ತಾನೇ ಮಾಯಾವಿ ರಾಕ್ಷಸ ವೈರಸ್ ರೂಪದಲ್ಲಿ ಬಂದೆರಗಿದಾಗ ಪ್ರತಿಯೊಬ್ಬನೂ ಪ್ರಕೃತಿಯ ಶಕ್ತಿಯೆದುರು ಎಷ್ಟು ಕುಬ್ಜ ಎಂಬುದನರಿತು ಶರಣಾಗಿದ್ದಾನೆ. ನಾವು ಪ್ರಕೃತಿಯ ಮೇಲೆ ಅಭಿವೃದ್ಧಿ ಎಂಬ ಹೆಸರಿನಲ್ಲಿ ಮಾಡಿದ ಅವ್ಯಾಹತ ದಾಳಿ ನಮಗೇ ಬೂಮ್ ರಾಂಗ್ ಆಗಿ ಪುನ ಭೂಮಾಕಾರದಲ್ಲಿ ವೈರಸ್ ರೂಪತಾಳಿ ಹಿಂತಿರುಗಿ ಬಂತು.ಈ ವೈರಸ್ ನ ರುದ್ರ ನರ್ತನ ಇನ್ನೆಷ್ಟು ಸಮಯವೋ ದೇವನೇ ಬಲ್ಲ.ಈ ವೈಪರೀತ್ಯಗಳ ಮದ್ಯೆ ನಮ್ಮ ಜೀವನ ಪದ್ದತಿಯಲ್ಲಿ ನಾವೆಷ್ಟು ಬದಲಾಗಬೇಕಿದೆ ಎಂಬ ಪಾಠವನ್ನು ನಾವೇ ಮನನಮಾಡಿಕೊಂಡು ಪಾಲಿಸುವ ದಿನಗಳು ಬಂದೇ ಬಿಟ್ಟಿತು.ನಾನು ಅವುಗಳನ್ನು ಈ ರೀತಿಯಾಗಿ ಕಂಡುಕೊಳ್ಳುತ್ತೆನೆ.

1. ಬದಲಾದ ಕೃಷಿ ಪದ್ದತಿ.

2.ಬದಲಾದ ಕೃಷಿ ಮಾನಸಿಕತೆ

3.ಬದಲಾದ ಕೃಷಿ ಕೊಂಡಿ

4.ವಿಶ್ವ ಮಾರುಕಟ್ಟೆ ಎಂಬ ಭ್ರಮೆ.

 

1 ಬದಲಾದ ಕೃಷಿ ಪದ್ದತಿ.: ಹೌದು ನನ್ನ ತಂದೆಯವರ ಕಾಲಕ್ಕೂ ನನ್ನ ಕಾಲಕ್ಕೂ ಕಂಡುಕೇಳರಿಯದ ಬದಲಾವಣೆ ಕೃಷಿ ಕ್ಷೇತ್ರದಲ್ಲಿ ಆಗಿಹೋದದ್ದು ನನ್ನನುಭವಕ್ಕೆ ಧಾರಾಳವಾಗಿ ಬರುತ್ತಿದೆ. ಆ ಕಾಲದಲ್ಲಿ ಗದ್ದೆ ಬೇಸಾಯ, ತರಕಾರಿ ಕೃಷಿ, ಸಮೃದ್ಧ ದೇಶೀ ಜಾನುವಾರುಗಳು, ಅದರೊಂದಿಗೆ ಅಡಿಕೆ ತೋಟಗಳಿತ್ತು. ಈ ಪದ್ದತಿಯಲ್ಲಿ ಯಾವುದೇ ಧಾವಂತ ಪೈಪೋಟಿಗಳಿರಲಿಲ್ಲ.ಸಾಧಾರಣವಾಗಿ 90% ಜನಮಾನಸವೂ ಸ್ವ ಪರಿಪೂರ್ಣ ಜೀವನ. ಪರಸ್ಪರ ಅವಲಂಬನೆ ಬೇಕಾಗಿರಲಿಲ್ಲ.ತನಗೆ ಬೇಕಾದ ಆಹಾರ ಪದಾರ್ಥಗಳು ತನ್ನಲ್ಲೇ ಉತ್ಪಾದನೆ, ಇಂದಿನಂತೆ ಊರಿಡೀ ಮನಸೆಂದಾಗ ಎದ್ದು ಸಂಚರಿಸುವ ಧಾವಂತ, ಮನಸನ್ನೆಳೆಯುವ ಮೋಹಜಾಲಗಳಿರಲಿಲ್ಲ. ಮಕ್ಕಳು ಶಾಲೆಗೆ,ಶಾಲೆಯಿಂದ ಮನೆಗೆ. ಅಂತೆಯೇ ಹಿರಿಯರು ತಮ್ಮ ಹೊಲಕ್ಕೆ ಹೊಲದಿಂದ ಮನೆಗೆ. ಸಂಜೆಯ ವೇಳೆ ಮನೆಯ ಎಲ್ಲಾ ಸದಸ್ಯರೂ ಮನೆಯಲ್ಲೇ ಹಾಜರು. ಆದರೆ ಇಂದು ಇದೆಲ್ಲಾ ಕಣ್ಮರೆಯಾಗಿ ಗದ್ದೆ ತೋಟವಾಯಿತು…. ತೋಟ ಹಣದ ಹಿಂದೊಡುವ ಸಮರಭೂಮಿಯಾಯಿತು. ಪರಸ್ಪರ ಏನೆನೋ ಧಾವಂತದ ಅವಲಂಬನೆ ಅಧಿಕವಾಯಿತು. ಶಾಲೆಗೆ ಹೋದ ಮಕ್ಕಳು ಮನೆ ಸೇರದೆ ಇನ್ನಷ್ಟು ಅಂಕಗಳಿಸುವ ಓಟದಲ್ಲಿ ತಡರಾತ್ರಿ ಯ ವರೆಗೂ ಟ್ಯೂಷನ್ ಎಂಬ ಅರೆದು ಕುಡಿಸುವ, ಪೈಪೋಟಿಯೇ ಆದ್ಯತೆಯಾದ ರೆಡೀಮೇಡ್ ಕೇಂದ್ರಗಳಲ್ಲಿ ಬಂಧಿಗಳಾದರು. ತೋಟಕ್ಕೋಗ ಬೇಕಾದ ಹಿರಿಯರು ಪೇಟೆಯ ರಂಗು ರಂಗಿನೆಡೆಗೆ ನಡೆಯುವ ಮನಮಾಡಿದರು. ಕೃಷಿ ಕ್ಷೇತ್ರದಲ್ಲೂ ಹಣದ ಹಿಂದೊಡುವ ನಿಟ್ಟಿನಲ್ಲಿ ಅಧಿಕಾಧಿಕ ಅವಲಂಬನೆ ಮತ್ತು ಧಾವಂತ ಶುರುವಿಟ್ಟಿತು. ಸಮೃದ್ಧ ಕೃಷಿ ಬದುಕು ಏಕತಾನತೆಯಡಿಗೆ ಬಂದು ಬಿಟ್ಟಿತು.ಯಂತ್ರ ತಂತ್ರಗಳು ರಾಸಾಯನಿಕದೂಟೆಗಳು ಅನಿವಾರ್ಯವಾಯಿತು. ಮುಂದೆ ನಡೆಯಲಾರದೆ ಹಿಂದೆಯೂ ತಿರುಗಲಾರದ ಸರಿಗೆ ನಡೆ ನಮ್ಮದಾಯಿತು.

2. ಬದಲಾದ ಕೃಷಿ ಮಾನಸಿಕತೆ:

ಈ ಎಲ್ಲಾ ಧಾವಂತಗಳಿಗೆ ಕಾರಣ ಬದಲಾದ ಕೃಷಿ ಮಾನಸಿಕತೆ. ಮೊದಲು ದುಡಿದು,ಬೆವರಿನ ಫಲ ಕೃಷಿಯುತ್ಪನ್ನವಾಗಿ ಲಭಿಸಿದಾಗ ತೃಪ್ತಿ ಇತ್ತು.ಆದರೀಗ ತರಹೇವಾರಿ ಹೋರಾಟಗಳ ಫಲವಾಗಿ ಉತ್ಪನ್ನ ಹೆಚ್ಚಾದರೂ ತೃಪ್ತಿ ಕಾಣದಾಗಿದೆ.ಇನ್ನೂ ಬೇಕು,ಮತ್ತೂ ಬೇಕೆಂಬ ಹುಚ್ಚು ಗೀಳು ತುಂಬಿದೆ. ಏನಕೇನ ಪ್ರಕಾರೇಣ ಹೆಚ್ಚೆಚ್ಚು ಹಣ ಬರಬೇಕೆಂದು ಹೊಸ ಹೊಸ ಕೃಷಿ ಪದ್ದತಿಗಳು ಸ್ಥಾಪಿಸಲ್ಲಟ್ಟು ,ಈ ಹೊಸ ಪದ್ದತಿಯ ಹಿಂದೋಡುವವ ಪ್ರಗತಿಪರನೆಂದೂ ಉಳಿದವರು ಹೆಡ್ಡ ದಡ್ಡ ಬಡ್ಡರೆಂಬ ಮನೋಭೂಮಿಕೆ ನಮಗೆ ಗೊತ್ತಿಲ್ಲದಂತೆ ಆವರಿಸತೊಡಗಿತು. ಪರಿಣಾಮ ಯಂತ್ರ ತಂತ್ರ ,ಪ್ರತಿತಂತ್ರ, ರಾಸಾಯನಿಕ ಒಗ್ಗರಣೆ ಕೃಷಿಕ್ಷೇತ್ರದಲ್ಲಿ ವಿಫುಲವಾಯಿತು. ಈ ನಿಟ್ಟಿನಲ್ಲಿ ಕೃಷಿಗೆ ಒಳಸುರಿಗಳನ್ನೊದಗಿಸುವ ಉದ್ಯಮ ಬೆಳೆಯಿತೇ ಹೊರತು ಕೃಷಿ ಬೆಳೆದದ್ದು ಇಷ್ಟೇ ಇದೆ.ಇಷ್ಟೆಲ್ಲಾ ಮಾಡುತ್ತಾ ಕೃಷಿ ಹಿಂದೆಯೇ ಓಡುತ್ತಿದ್ದರೂ ಕೃಷಿ ನಷ್ಟದ ಬಾಬ್ತು, ಕೃಷಿ ಎಲ್ಲಿಯೂ ಸಲ್ಲದವರ ಕೊನೆಯ ಮನೆ ಎಂಬ ಮಾನಸಿಕತೆಯೂ ಢಾಳಾಗಿ ಮನಸನ್ನು ತುಂಬಿ ಸ್ಪೋಟಗೊಳ್ಳತೊಡಗಿತು.

3.ಬದಲಾದ ಕೃಷಿ ಕೊಂಡಿ:

ಹೌದು ಕೃಷಿ ಎಂದರೆ ಅದೊಂದು ಪರಂಪರಾಗತ ಜೀವನ ಪದ್ದತಿ. ಅದಕ್ಕಾಗಿ ಹೊಸ ಗಿಳಿ ಪಾಠವೋ, ನಿಶ್ಚಿತ ಸೂತ್ರವೋ ಬೇಕಾಗಿಲ್ಲ. ಬಾಲ್ಯಕಾಲದಿಂದಲೇ ನೋಡನೋಡುತ್ತಾ ತನಗರಿವಿಲ್ಲದೇ ಮೈಗೂಡಿಸಿಕೊಂಡು ಅನುಸರಿಸುವ ಕಲೆ ಅಷ್ಟೇ. ಹಣವೊಂದಿದ್ದರೆ ಯಾವುದನ್ನೂ ಕ್ರಯವರಿಸಿಕೊಳ್ಳಬಹುದು ಎಂಬ ಭಾವ ನಿಧಾನವಾಗಿ ಕೃಷಿ ಕೊಂಡಿಗಳಾದ ಯುವ ಮನಸುಗಳನ್ನು ಈ ಕ್ಷೇತ್ರದಿಂದ ನಿದಾನವಾಗಿ ಹಿಂದೋಡುವಂತೆ ಮಾಡಿತು. ಇದಕ್ಕೆ ಕಾರಣ ಹಿರಿಯರೇ…ನನ್ನ ಮಗ/ಮಗಳು ಯಾವಾಗ ಈ ಊರು ಬಿಟ್ಟು ಮಂಗಳೂರು,ಬೆಂಗಳೂರು ಅಲ್ಲಲ್ಲ ಅಮೇರಿಕಾ,ಅಲ್ಲೂ ಅಲ್ಲ ಎಲ್ಲೋ ಕಾಣದೂರಿಗೆ ಹಾರಿ ಹಣದ ಥೈಲಿಯನ್ನು ತನ್ನದಾಗಿಸಿ ನಾನೊಬ್ಬ ಊರಿನ ಮೊದಲಿಗ,ಪ್ರತಿಷ್ಠಿತನಾದೇನು ಎಂಬ ತನ್ನ ಹಿರಿಯರು ಬೆಳೆಸಿಕೊಂಡು ಬಂದ ಸುಭದ್ರ ವ್ಯವಸ್ಥೆಯ ಕೊಂಡಿಯನ್ನು ಕಳಚಿದ್ದಲ್ಲವೇ.(ಗಮನಿಸೋಣ…ಮೂಡದ,ಬಲಿಯದ,ಒಗ್ಗದ ರೆಕ್ಕೆಪುಕ್ಕಗಳನ್ನು ಯುವ ಮನಗಳಿಗೆ ಕಟ್ಟಿ, ಹೊಲಿದು,ಹೊಸೆದು ಬಾನೆತ್ತರಕೆ ಹಾರೆಂದು ಹಾರಿಸಿದವರು ನಾವೇ ಹಿರಿಯರಲ್ಲವೇ. )

4 . ವಿಶ್ವ ಮಾರುಕಟ್ಟೆ ಎಂಬ ಭ್ರಮೆ:

ಹುಮ್….ಭ್ರಮೆಗಳೆಂದೂ ಏಕಮುಖ. ವಿಶ್ವ ಮಾರುಕಟ್ಟೆಯಾದರೆ ನನ್ನ ಉತ್ಪನ್ನಗಳಿಗೆ ವ್ಯಾಪಕ ಮಾರುಕಟ್ಟೆ ದೊರಕೀತು…ಹಣದ ಹೊಳೆ ನನ್ನೆಡೆ ಹರಿದೀತು ಎಂಬ ಗಗನಕುಸುಮ ಕಲ್ಪನೆಯಲ್ಲೋಡುವ ದಿನಗಳು ಬಂದಾಗ ನಮ್ಮ ಮನೆಯಂಗಳದಲ್ಲಿ ಮತ್ತೊಬ್ಬನ ಸರಕಿನ ಮೂಟೆ ತುಂಬಿದ್ದು ಗೊತ್ತೇ ಅಗಲಿಲ್ಲ. ಯಾವ ರೀತಿ ನಮ್ಮ ನಮ್ಮ ಊರುಗಳಲ್ಲಿ ನಮ್ಮ “ಗುರುತು” ಇರುತ್ತೋ ,ಅದೇ ಪರ ಊರಿಗೆ ಹೋದಾಗ ಎಲ್ಲದರೊಳಗೊಂದಷ್ಟೇ ಎಂಬ ವಿಷಯ ಅರಿವಾದಾಗ ಓಟದ ಕಾಲುಗಳು ಕುಸಿಯುವ ಹಂತಕ್ಕೆ ತಲುಪಿತಲ್ಲವೇ.

ಸರಿ… ಈ ಎಲ್ಲಾ ಧಾವಂತ,ಹಪಾಹಪಿಗಳು ನಮ್ಮನ್ನು ಇಂದಿನ ಘೋಷಿತ ಏಕತಾನತೆಯ ಮಧ್ಯೆ ತಂದು ನಿಲ್ಲಿಸಿಬಿಟ್ಟಿತು. ಕಾಣದ ಒಂದು ವೈರಸ್ ಮಾನವನ ಓಟಕ್ಕೆ ಬೇಡಿ ತೊಡಿಸಿತು…ಬಂಧಿಯನ್ನಾಗಿಸಿತು. ಈ ಹಂತದಲ್ಲಿ ನಾವು ಬದಲಾಗಬೇಡವೇ…ಹೌದು ಬದಲಾಗಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ. ಹೇಗೆ ಹೇಗೆ ಹೇಗೆ……ಯಕ್ಷ ಪ್ರಶ್ನೆ….ಉತ್ತರ ನಮ್ಮಂತರಾಳದಲ್ಲೇ ಇದೆಯಲ್ಲವೇ…..” ಬೇಕು”ಗಳಿಗೆ ಕಡಿವಾಣ ಹಾಕೋಣ ಅಷ್ಟೇ.

ಇದೆಲ್ಲದರ ನಡುವೆ ನಮ್ಮೆಲ್ಲರ ಮಧ್ಯೆ ಕಾಣುತ್ತಿರುವ ಆಶಾಕಿರಣ ಎಂದರೆ “ದೂರದ ಬೆಟ್ಟ ನುಣ್ಣಗೆ” ಎಂಬ ಮಿಥ್ಯಾ ಗುಳ್ಳೆ ಅಲ್ಲೊಂದಿಲ್ಲೊಂದು ಒಡೆದು ಹೋಗಿ ನನ್ನೂರಿನ ಮಣ್ಣೇ, ನನ್ನೂರಿನ ಜನವೇ, ನನ್ನೂರಿನ ಜೀವನ ಶೈಲಿಯೇ ಶ್ರೇಷ್ಠ ಎಂಬ ಮನಸ್ಥಿತಿ ಚಿಗುರೊಡೆಯುತ್ತಿದೆ. ಈ ಚಿಗುರಿಗೆ ನೆರಳಾಗಿ,ಬೇರಾಗಿ ಬೆಳೆಸುವ ಜವಾಬ್ದಾರಿಯುತ ಸಂಕ್ರಮಣ ಕಾಲ ನಮ್ಮದು ಎಂಬ ಅರಿವು ನಮ್ಮಲ್ಲಿ ಜಾಗೃತವಾಗಬೇಕು.ಹಾಗಾದಾಗ ಪ್ರಕೃತಿಯನ್ನೂ ಮನಸ್ಸನ್ನು ತುಂಬಿದ ವೈರಸ್ ನಮ್ಮನ್ನು ಬಿಟ್ಟು ಓಡೀತು…..ಅಲ್ಲವೇ…

ಕೆಳಗಿನ ಓಶೋ ಮಾತಿನ ಸಾಲುಗಳು ಎಷ್ಟು ಚೆನ್ನಾಗಿದೆಯಲ್ಲವೇ..

If u love a flower, don’t pick it up
Because if u pick, it dies.
And it ceases to be what u love.
So if u love a flower let it be
Love is not about possession
Love is about appreciation.

ದಿನ ಬೆಳಗಾಗಿ ಇರುಳಾಗುವ ಪ್ರಕೃತಿಯ ತಿದ್ದಲು ಹೊರಡದೇ ಒಂದಾಗಿ ನಡೆಯುವುದೇ ಸಂತೋಷದ ಜೀವನಕ್ಕೆ ದಾರಿ. ಅಷ್ಟೇ …

* ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ, ಕಲ್ಮಡ್ಕ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ

‌ ಪ್ರಗತಿಪರ ಕೃಷಿಕ, ಬರಹಗಾರ

Published by
ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ

Recent Posts

ಹರಿಯಾಣ | 800 ಮೆ.ವ್ಯಾ.ವಿದ್ಯುತ್ ಉತ್ಪಾದನಾ ಘಟಕಕ್ಕೆ ಪ್ರಧಾನಿ ಮೋದಿ ಚಾಲನೆ

ಹರಿಯಾಣ ಪ್ರವಾಸದಲ್ಲಿರುವ  ಪ್ರಧಾನಿ ನರೇಂದ್ರ ಮೋದಿ ಯಮುನಾ ನಗರದಲ್ಲಿ ಇಂದು ಧೀನಬಂಧು ಚೋಟು…

2 hours ago

ಚಾಮರಾಜನಗರ ಜಿಲ್ಲೆ ಸಿದ್ದಾಪುರ ಜಮೀನು ವಿವಾದ | ರೈತರು ಆತಂಕಪಡುವ ಅಗತ್ಯವಿಲ್ಲ

ಚಾಮರಾಜನಗರ ಜಿಲ್ಲೆಯ ಸಿದ್ದಾಪುರ ಗ್ರಾಮದ ಸಾವಿರಾರು ಎಕರೆ ಜಮೀನು ರಾಜವಂಶಸ್ಥರಿಗೆ ಸೇರಿದ್ದು, ಅದನ್ನು…

2 hours ago

ಹವಾಮಾನ ವರದಿ |14.04.2025 | ಕರಾವಳಿ ಕೆಲವು ಕಡೆ ಗುಡುಗು ಸಹಿತ ಮಳೆ | ಎ.19ರ ನಂತರ ಮಳೆಯ ಪ್ರಮಾಣ ತೀರಾ ಕಡಿಮೆ |

15.04.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…

9 hours ago

ಅನುಭವದ ಕೃಷಿಯಿಂದ ಡಾಟಾ ಆಧಾರಿತ “ಸ್ಮಾರ್ಟ್ ಫಾರ್ಮಿಂಗ್ “‌ ಕಡೆಗೆ ಆಧುನಿಕ ಕೃಷಿ

ಸ್ಮಾರ್ಟ್ ಕೃಷಿಯು ಕೃಷಿ ವಲಯದಲ್ಲಿ ಕ್ರಾಂತಿಕಾರಕ ಬದಲಾವಣೆ ತರುತ್ತಿದೆ. ತಂತ್ರಜ್ಞಾನ, ಯಾಂತ್ರೀಕರಣ ಮತ್ತು…

14 hours ago

ಜೂ.30 ರಿಂದ ಮಂಡ್ಯ ಮೈಶುಗರ್ ಕಾರ್ಖಾನೆಯಲ್ಲಿ  ಕಬ್ಬು ಅರೆಯುವ ಪ್ರಕ್ರಿಯೆ ಆರಂಭ

ಮಂಡ್ಯ ಮೈಷುಗರ್ ಕಾರ್ಖಾನೆಯಲ್ಲಿ ಪ್ರಸಕ್ತ ಸಾಲಿನ ಕಬ್ಬು ಅರೆಯುವ ಪ್ರಕ್ರಿಯೆ ಜೂನ್ 30ರಿಂದ…

15 hours ago

ಸಹಕಾರ ಕ್ಷೇತ್ರದಲ್ಲಿ ಬಹುದೊಡ್ಡ ಕ್ರಾಂತಿ | ಸಚಿವ ಅಮಿತ್‌ ಶಾ ಹೇಳಿಕೆ

ಇಂದು ಸಹಕಾರ ಕ್ಷೇತ್ರದಲ್ಲಿ ಬಹುದೊಡ್ಡ ಕ್ರಾಂತಿಯಾಗುತ್ತಿದೆ. 8 ಲಕ್ಷಕ್ಕೂ ಅಧಿಕ ಸಹಕಾರಿ ಸಂಘಗಳು…

15 hours ago