ಕೊರೊನಾ ಏರಿಕೆಯ ಸುದ್ದಿ ದಿನವೂ ಕೇಳುತ್ತಲೇ…. ಆತಂಕವಾಗುತ್ತಲೇ ಇರುವ ಕಾಲ ಇನ್ನು ದೂರ ಮಾಡಬೇಕಿದೆ. ದೇಶದಲ್ಲಿ , ರಾಜ್ಯದಲ್ಲಿ , ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಸರಕಾರಗಳು ಇದುವರೆಗೆ ಇನ್ನಿಲ್ಲದ ಪ್ರಯತ್ನ ಮಾಡಿದವು. ಈಗ ಆರೋಪ, ಪ್ರತ್ಯಾರೋಪ, ರಾಜಕೀಯ ಎಲ್ಲವೂ ನುಸುಳುತ್ತದೆ. ಆದರೆ ಜನಸಾಮಾನ್ಯರಿಗೆ ಈ ರಾಜಕೀಯಗಳು ಅಗತ್ಯವೇ ಇಲ್ಲ. ಅವರಿಗೆ ಈಗ ಮತ್ತೆ ಬದುಕು ಕಟ್ಟುವ ಹೊತ್ತು. ಮಳೆಗಾಲ ಆರಂಭವಾಗಿದೆ. ಕೃಷಿಯಿಂದ ತೊಡಗಿ ಅನೇಕ ಕಾಯಕಗಳು ಬಾಕಿ ಉಳಿದಿವೆ. ಇದುವರೆಗಿನ ಗೊಂದಲಗಳೇ ನಿವಾರಣೆ ಆಗಿಲ್ಲ. ಇನ್ನು ಬೇಕಿರುವುದು ಮುಂಜಾಗ್ರತೆ, ತನಗೂ, ತನ್ನ ಮನೆಯವರಿಗೂ ಕೊರೊನಾ ವೈರಸ್ ಬರದಂತೆ ಎಚ್ಚರಿಕೆ ವಹಿಸುವುದೊಂದೇ ದಾರಿ….
ಈಗಾಗಲೇ ಲಾಕ್ಡೌನ್ ಹಂತ ಮುಗಿಯುತ್ತಿದೆ. ಮುಂದೆ ಕೆಲವೊಂದು ನಿಯಮಗಳು ಯಥಾ ಪ್ರಕಾರ ಚಾಲ್ತಿಯಲ್ಲಿರಲೇಬೇಕಾಗಬಹುದು. ಆದರೆ ಜನಸಾಮಾನ್ಯರಿಗೆ ಇನ್ನಂತೂ ತುರ್ತು. ಮಳೆಗಾಲ ಆರಂಭವಾಗಿದೆ ವಿವಿಧ ಅಗತ್ಯ ಕೆಲಸಗಳ ಕಡೆಗೆ ಗಮನಹರಿಸಲೇಬೇಕಿದೆ. ಇನ್ನೂ ಕೊರೊನಾ ಸುದ್ದಿ ಕೇಳುತ್ತಲೇ ಮನೆಯಲ್ಲೇ ಇರುವ ಕಾಲವನ್ನು ದಾಟಿ ಬರಲೇಬೇಕಿದೆ. ಈಗ ಅಗತ್ಯವಾಗಿ ಬೇಕಿರುವುದು ಮುಂಜಾಗ್ರತಾ ಕ್ರಮಗಳು. ನನಗೂ-ನನ್ನ ಮನೆಯವರಿಗೂ ಕೊರೊನಾ ವೈರಸ್ ಬಾರದಂತೆ ಏನು ಮಾಡಬಹುದು ಎಂಬುದರ ಕಡೆಗೆ ಗಮನ.
ಈಗಾಗಲೇ ಬಸ್ಸು ಹಾಗೂ ಖಾಸಗಿ ವಾಹನಗಳ ಓಡಾಟ ಆರಂಭವಾಗಿದೆ. ಎಲ್ಲೆಡೆಯೂ ಮಾಸ್ಕ್ ಧರಿಸುತ್ತಲೇ ಓಡಾಟ ನಡೆಯುತ್ತಿದೆ. ಸಾರ್ವಜನಿಕ ಪ್ರದೇಶಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಅಗತ್ಯ ಎಂದೂ ಸರಕಾರ ಹೇಳಿದೆ, ಇದಕ್ಕಾಗಿ ದಂಡ ಪ್ರಯೋಗಕ್ಕೂ ಮುಂದಾಗಿದೆ. ಆದರೆ ಖಾಸಗಿ ವಾಹನಗಳಲ್ಲಿ ಈಗ ಸಾರ್ವಜನಿಕರು ಸಾಮಾಜಿಕ ಅಂತರದ ಪ್ರಶ್ನೆಯೇ ಬರುತ್ತಿಲ್ಲ. ವ್ಯಾನ್ ಗಳಲ್ಲಿ, ಜೀಪುಗಳಲ್ಲಿ ಫುಲ್ ರಶ್…!. ಸ್ಯಾನಿಟೈಸರ್ ಬಳಕೆ ಕಡಿಮೆ ಕಾಣುತ್ತದೆ.ಸಾರ್ವಜನಿಕ ವಾಹನ ಏರುವ ಮುನ್ನ ಸ್ಯಾನಿಟೈಸರ್ ಬಳಕೆ ಅಗತ್ಯವಾಗಿದೆ. ಆದರೆ ಬಳಕೆ ಕಾಣುತ್ತಿಲ್ಲ. ಒಂದು ವೇಳೆ ಬಸ್ಸು, ವ್ಯಾನ್ ಗಳಲ್ಲಿ ಕಟ್ಟು ನಿಟ್ಟಿನ ಕ್ರಮಗಳು ಇಲ್ಲದೇ ಹೋದರೆ ಪ್ರತೀ ಗ್ರಾಮಗಳಲ್ಲೂ ಸಾಮಾನ್ಯ ವ್ಯಕ್ತಿಯೂ ಕೊರೊನಾ ಭಯಕ್ಕೆ ಒಳಗಾಗಬೇಕಾದ ಅನಿವಾರ್ಯತೆ ಇದೆ. ಇದರ ಬಗ್ಗೆ ಆಯಾ ಪಂಚಾಯತ್ ಗಳು ಏಕೆ ಗಮನಹರಿಸಬಾರದು ? ಎಂಬ ಪ್ರಶ್ನೆ ಇದೆ. ಪಂಚಾಯತ್ ಗಳು ತಮ್ಮ ಗ್ರಾಮಕ್ಕೆ ಸಾಮಾಜಿಕ ಮಾದರಿಯಲ್ಲಿ ವೈರಸ್ ಬಾರದಂತೆ ತಡೆಯಲು ಮುಂಜಾಗ್ರತಾ ಕ್ರಮಗಳ ಬಗ್ಗೆ ಹೆಚ್ಚು ಆಸಕ್ತಿ ವಹಿಸಬೇಕಿದೆ. ಜನರು ತನಗೆ ಹಾಗೂ ತನ್ನ ಮನೆಯವರಿಗೆ ವೈರಸ್ ಬಾರದಂತೆ ಹೆಚ್ಚು ಗಮನಹರಿಸಬೇಕಿದೆ. ಇದೆರಡೂ ಪಾಲನೆಯಾದರೆ ಕೊರೊನಾ ವೈರಸ್ ಜೊತೆಯೇ ಬದುಕಲು ಸಾಧ್ಯವಿದೆ, ಕೊರೊನಾ ವೈರಸ್ ನಿವಾರಣೆಯೂ ಸಾಧ್ಯವಿದೆ.
ಈಗಾಗಲೇ ಕೊರೊನಾ ವೈರಸ್ ಗ್ರಾಮೀಣ ಭಾಗದಿಂದ ತೊಡಗಿ ನಗರದ ಉದ್ಯಮಗಳಿಗೂ ಸಾಕಷ್ಟು ಹೊಡೆತ ನೀಡಿದೆ. ಇನ್ನು ಈ ಹೊಡೆತಗಳನ್ನು ದಾಟಿ ಆರ್ಥಿಕತೆ ಸಹಜ ಸ್ಥಿತಿಯತ್ತ ಬರಲು ಯೋಜನೆ ರೂಪಿಸಲೇಬೇಕಾದ್ದರಿಂದ ಇನ್ನೂ ಕೊರೊನಾ ವೈರಸ್ ಭಯದಿಂದ , ಭಯಗೊಳಿಸುವ ದಾರಿಯಿಂದ ಹೊರಬರಬೇಕಿದೆ. ಇದಕ್ಕಾಗಿ ಪಂಚಾಯತ್ ಮಟ್ಟದಿಂದ ರಾಜ್ಯದವರೆಗೆ ನೂತನ ಯೋಜನೆಗಳು ಸಿದ್ಧವಾಗಬೇಕಿದೆ.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…