ಪುತ್ತೂರು: ಕೊರೊನಾ ತೊಲಗಿಸಿ-ರೈತರನ್ನು ಉಳಿಸಿ ಸತ್ಯಾಗ್ರಹದ ನಿಟ್ಟಿನಲ್ಲಿ ರೈತ ಸಂಘದ ವತಿಯಿಂದ ಮನೆ ಮನೆಗಳಲ್ಲಿ ರೈತ ಸಂಘದ ವತಿಯಿಂದ ಸೋಮವಾರ ಮೌನ ಪ್ರತಿಭಟನೆ ನಡೆಯುತ್ತಿದೆ.
ರೈತರು ಹಾಗೂ ಗ್ರಾಮೀಣ ಪ್ರದೇಶದ ಜನತೆ ಮನೆಗಳಲ್ಲಿಯೇ ಇದ್ದು , ಯಾವುದೇ ದಿನಬಳಕೆಯ ವಸ್ತುಗಳ ಖರೀದಿ ಮಾಡದೇ, ಯಾವುದೇ ಕೃಷಿ ಉತ್ಪನ್ನ ಗಳನ್ನು ಮಾರುಕಟ್ಟೆಗೆ ಒಯ್ಯದೇ ತಮ್ಮ ಮನೆ ಮಂದಿಯೊಂದಿಗೆ ಮನೆಯಲ್ಲಿಯೇ ಧರಣಿ ಆರಂಭ ಮಾಡಿದ್ದಾರೆ. ರೈತರ ಜೀವವೂ ಉಳಿಯಲಿ, ಜೀವನವೂ ಉಳಿಯಲಿ, ಮಾರುಕಟ್ಟೆ ಮುಕ್ತವಾಗಿರಲಿ , ಬೆಳೆಗಳಿಗೆ ಬೆಲೆ ಬರಲಿ , ಕೃಷಿ ಉತ್ಪನ್ನಗಳ ಆಮದು ನಿಲ್ಲಲಿ, ಬೆಳೆಗಳಿಗೆ ಬೆಲೆ ಬರಲಿ ಎಂಬ ಉದ್ದೇಶದಿಂದ ಧರಣಿ ನಡೆಯುತ್ತಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ರೈತ ಸಂಘದ ರಾಜ್ಯ ಕಾರ್ಯದರ್ಶಿ ರವಿಕಿರಣ ಪುಣಚ, ಲಾಕ್ಡೌನ್ ನಿಂದಾಗಿ ಕೃಷಿಕ್ಷೇತ್ರಕ್ಕೆ ರಾಜ್ಯದಲ್ಲಿ ಸಮಸ್ಯೆಯಾಗಿದೆ. ಫರಂಗಿ ಹಣ್ಣು,ಬಾಳೆ,ಕಲ್ಲಂಗಡಿ,ಕರಬುಜ, ಹೂವು ಹಣ್ಣು, ತರಕಾರಿ ಅಲಿಕಲ್ಲು ಮಳೆಯಿಂದಾಗಿ ಭತ್ತದ ಬೆಳೆ ಸುಮಾರು 1 ಲಕ್ಷ ಕೋಟಿಗಿಂತಲೂ ಹೆಚ್ಚು ಫಸಲು ನಷ್ಠ ಅಲ್ಲದೇ ತೋಟಗಾರಿಕೆ ಮತ್ತು ಪ್ಲಾಂಟೇಶನ್ ಬೆಳೆಗಳಾದ ಅಡಿಕೆ,ಕಾಫಿ ,ಟೀ ,ರಬ್ಬರ್ ಬೆಳೆಗಳ ಮಾರುಕಟ್ಟೆ ಕುಸಿತ ಮತ್ತು ಖರೀದಿಯಲ್ಲಿನ ಗೊಂದಲದಿಂದ ಕೃಷಿ ಕ್ಷೇತ್ರ ದಿಕ್ಕೆಟ್ಟಿದೆ. ಮುಂದಿನ ದಿನಗಳಲ್ಲಿ ಆಹಾರ ಸುಭದ್ರತೆಗಾಗಿ ಕೃಷಿ ಕ್ಷೇತ್ರದ ರಕ್ಷಣೆಗಾಗಿ ವಿಷೇಶ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…