ಕೊರೊನಾ ತೊಲಗಿಸಿ-ರೈತರನ್ನು ಉಳಿಸಿ | ರೈತ ಸಂಘದಿಂದ ಪ್ರತಿಭಟನೆ | ಮನೆ ಮನೆಗಳಲ್ಲೇ ನಡೆಯುತ್ತಿರುವ ಮೌನ ಪ್ರತಿಭಟನೆ |

April 20, 2020
11:46 AM

ಪುತ್ತೂರು: ಕೊರೊನಾ ತೊಲಗಿಸಿ-ರೈತರನ್ನು ಉಳಿಸಿ ಸತ್ಯಾಗ್ರಹದ ನಿಟ್ಟಿನಲ್ಲಿ ರೈತ ಸಂಘದ ವತಿಯಿಂದ ಮನೆ ಮನೆಗಳಲ್ಲಿ ರೈತ ಸಂಘದ ವತಿಯಿಂದ ಸೋಮವಾರ ಮೌನ ಪ್ರತಿಭಟನೆ ನಡೆಯುತ್ತಿದೆ.

ರೈತರು ಹಾಗೂ ಗ್ರಾಮೀಣ ಪ್ರದೇಶದ ಜನತೆ ಮನೆಗಳಲ್ಲಿಯೇ ಇದ್ದು , ಯಾವುದೇ ದಿನಬಳಕೆಯ ವಸ್ತುಗಳ ಖರೀದಿ ಮಾಡದೇ,  ಯಾವುದೇ ಕೃಷಿ ಉತ್ಪನ್ನ ಗಳನ್ನು ಮಾರುಕಟ್ಟೆಗೆ ಒಯ್ಯದೇ ತಮ್ಮ ಮನೆ ಮಂದಿಯೊಂದಿಗೆ ಮನೆಯಲ್ಲಿಯೇ ಧರಣಿ ಆರಂಭ ಮಾಡಿದ್ದಾರೆ. ರೈತರ ಜೀವವೂ ಉಳಿಯಲಿ, ಜೀವನವೂ ಉಳಿಯಲಿ, ಮಾರುಕಟ್ಟೆ ಮುಕ್ತವಾಗಿರಲಿ , ಬೆಳೆಗಳಿಗೆ ಬೆಲೆ ಬರಲಿ , ಕೃಷಿ ಉತ್ಪನ್ನಗಳ ಆಮದು ನಿಲ್ಲಲಿ, ಬೆಳೆಗಳಿಗೆ ಬೆಲೆ ಬರಲಿ ಎಂಬ ಉದ್ದೇಶದಿಂದ ಧರಣಿ ನಡೆಯುತ್ತಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ರೈತ ಸಂಘದ ರಾಜ್ಯ ಕಾರ್ಯದರ್ಶಿ ರವಿಕಿರಣ ಪುಣಚ,  ಲಾಕ್ಡೌನ್ ನಿಂದಾಗಿ ಕೃಷಿಕ್ಷೇತ್ರಕ್ಕೆ ರಾಜ್ಯದಲ್ಲಿ ಸಮಸ್ಯೆಯಾಗಿದೆ.  ಫರಂಗಿ ಹಣ್ಣು,ಬಾಳೆ,ಕಲ್ಲಂಗಡಿ,ಕರಬುಜ, ಹೂವು ಹಣ್ಣು, ತರಕಾರಿ ಅಲಿಕಲ್ಲು ಮಳೆಯಿಂದಾಗಿ ಭತ್ತದ ಬೆಳೆ ಸುಮಾರು 1 ಲಕ್ಷ ಕೋಟಿಗಿಂತಲೂ ಹೆಚ್ಚು ಫಸಲು ನಷ್ಠ ಅಲ್ಲದೇ ತೋಟಗಾರಿಕೆ ಮತ್ತು ಪ್ಲಾಂಟೇಶನ್ ಬೆಳೆಗಳಾದ ಅಡಿಕೆ,ಕಾಫಿ ,ಟೀ ,ರಬ್ಬರ್ ಬೆಳೆಗಳ ಮಾರುಕಟ್ಟೆ ಕುಸಿತ ಮತ್ತು ಖರೀದಿಯಲ್ಲಿನ ಗೊಂದಲದಿಂದ ಕೃಷಿ ಕ್ಷೇತ್ರ ದಿಕ್ಕೆಟ್ಟಿದೆ. ಮುಂದಿನ ದಿನಗಳಲ್ಲಿ ಆಹಾರ ಸುಭದ್ರತೆಗಾಗಿ ಕೃಷಿ ಕ್ಷೇತ್ರದ ರಕ್ಷಣೆಗಾಗಿ ವಿಷೇಶ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 13- 08-2026 | ಕರ್ನಾಟಕದಲ್ಲಿ ಮಳೆ ಮುಂದುವರಿಕೆ| ಸುಳ್ಯ, ಘಟ್ಟದ ಕೆಳಭಾಗದಲ್ಲಿ ಮಧ್ಯಾಹ್ನದ ಬಳಿಕ ಹೆಚ್ಚು ಮಳೆ ಸಾಧ್ಯತೆ
August 13, 2026
2:01 PM
by: ಸಾಯಿಶೇಖರ್ ಕರಿಕಳ
ಎಲ್ ನಿನೊ ಪರಿಣಾಮ 15 ರಾಜ್ಯಗಳ 342 ಜಿಲ್ಲೆಗಳಲ್ಲಿ ಮಳೆ ಕೊರತೆ
August 13, 2026
6:59 AM
by: ದ ರೂರಲ್ ಮಿರರ್.ಕಾಂ
ಇನ್ನೊಂದು ಮನೆಯ ಸಮಸ್ಯೆ ನಮಗೆ ಸುದ್ದಿ ; ನಮ್ಮ ಮನೆಯ ನೋವು ಮಾತ್ರ ನಮಗೆ ಸಂಕಟ..! ಯಾಕೆ ?
August 13, 2026
6:50 AM
by: ಮಹೇಶ್ ಪುಚ್ಚಪ್ಪಾಡಿ
ಕೈಗಾರಿಕಾ ಕೋಳಿ ಸಾಕಾಣಿಕೆ ಆಹಾರ ವಿಷಬಾಧೆಗೆ ಕಾರಣವಾಗುತ್ತಿದೆಯೇ? – ಹೊಸ ಅಧ್ಯಯನದ ಎಚ್ಚರಿಕೆ
August 13, 2026
6:35 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror