ಕೊರೊನಾ ಲಾಕ್ಡೌನ್ | ಹೇರ್ ಕಟ್ಟಿಂಗ್ ಮಾಡಿಸಲಾಗದೆ ತಡಕಾಡುವ ಜನ | ಈಗ ಫೇಮಸ್ಸಾಗುತ್ತಿದೆ ಕೊರೊನಾ ಕಟ್ಟಿಂಗ್ |

April 15, 2020
8:18 PM

ಸುಳ್ಯ: ಕೊರೊನಾ ಲಾಕ್ಡೌನ್ ಇನ್ನೂ ಮುಂದುವರಿದಿದೆ. ಮೇ.3 ರವೆರೆಗೆ ಕೊರೊನಾ ಲಾಕ್ಡೌನ್ ಕಾರಣದಿಂದ ಅಗತ್ಯ ವಸ್ತುಗಳ ಸೇವೆ ಹೊರತುಪಡಿಸಿ ಇತರ ಅಂಗಡಿಗಳು ತೆರೆಯುವಂತಿಲ್ಲ. ಹೀಗಾಗಿ ಸೆಲೂನ್ ಅಂಗಡಿಗಳೂ ಬಂದ್. ಈ ಕಾರಣದಿಂದ ಜನರು ಹೇರ್ ಕಟ್ಟಿಂಗ್ ಮಾಡಿಸಲಾಗದೆ ತಡಕಾಡುತ್ತಿದ್ದಾರೆ. ಅನೇಕರು ತಾವೇ ಸ್ವತ: ಹೇರ್ ಕಟ್ಟಿಂಗ್ ಮಾಡಿಸಿ ಕೊರೊನಾ ಕಟ್ಟಿಂಗ್ ಎಂದು ಹೇಳಿಕೊಳ್ಳುತ್ತಿದ್ದಾರೆ. ಈ ನಡುವೆಯೂ ಸುಳ್ಯ ಸೇರಿದಂತೆ ಕೆಲವು ಕಡೆ ಬೆಳ್ಳಂಬೆಳಗ್ಗೆ ಕೆಲವು ಪ್ರಮುಖ ಅಂಗಡಿಗಳು ಅರ್ಧ ಬಾಗಿಲು ತೆರೆದು ಕೆಲವೇ ವ್ಯಕ್ತಿಗಳ ಹೇರ್ ಕಟ್ಟಿಂಗ್ ಗೆ ಅವಕಾಶ  ನೀಡುತ್ತಿದೆ ಎಂಬ ಮಾಹಿತಿ  ಇದೆ. ಇಂತಹ ಅವಕಾಶಗಳು ಗ್ರಾಮೀಣ ಭಾಗದವರೆಗೂ ಸಿಗಲಿ ಎಂದೂ ಒತ್ತಾಯ ಕೇಳಿಬಂದಿದೆ.

ಕೊರೊನಾ ವೈರಸ್ ಹರಡುವುದನ್ನು  ತಡೆಯಲು ಬ್ಯೂಟಿ ಪಾರ್ಲರ್, ಮೆನ್ಸ್ ಪಾರ್ಲರ್ ಸೇರಿದಂತೆ ಸೆಲೂನ್ ಗಳು ಬಂದ್ ಆಗಿದ್ದವು. ಇದ್ದಕ್ಕಿದ್ದಂತೆ ಬಂದ್ ಆದ ಪರಿಣಾಮ ಹೇರ್ ಕಟ್ಟಿಂಗ್ ಮಾಡಿಸಲಾಗದೇ ಉಳಿದವರು  ತಲೆ ಕೆಡಿಸಿಕೊಂಡಿದ್ದಾರೆ. ಇದೇ ಕಾರಣದಿಂದ ಹಲವರಿಗೆ ಶೀತ-ತಲೆನೋವು ಕಂಡುಬಂದು ಸ್ವತ: ಹೇರ್ ಕಟ್ಟಿಂಗ್ ಗೆ ಮುಂದಾದರು. ಇದಕ್ಕೆ ಕೊರೊನಾ ಕಟ್ಟಿಂಗ್ ಎಂದೂ ಹೆಸರಿಟ್ಟಿದ್ದಾರೆ. ಅಗತ್ಯ ಸೇವೆ ಇದು ಎಂದು ಮುಂಜಾಗ್ರತಾ ಕ್ರಮಗಳೊಂದಿಗೆ ಅವಕಾಶ ನೀಡಬೇಕು ಎಂಬ ಒತ್ತಾಯ ಜನರು ಮಾಡಿದರೆ,  ವೃತ್ತಿಯವರಿಗೆ ಮುಂದಿನ ರಶ್ ಕಡಿಮೆ ಮಾಡಲು ಈಗಲೂ ಮುಂಜಾಗ್ರತಾ ಕ್ರಮಗಳೊಂದಿಗೆ ಅವಕಾಶ ನೀಡಬೇಕು ಎಂಬ ಒತ್ತಾಯ ಇದೆ. ಈ ನಡುವೆ ಕೆಲವು ಕಡೆ ಬೆಳಗ್ಗೆ ಅಂಗಡಿಗಳು ಅರ್ಧ ಬಾಗಿಲಿನಿಂದ ಕೆಲಸ ಮಾಡುತ್ತವೆ ಎಂದೂ ಹೇಳಲಾಗುತ್ತದೆ. ಹೀಗಾಗಿ ಅವಕಾಶ ಇದ್ದರೆ ಎಲ್ಲಾ ಕಡೆಯೂ ಅವಕಾಶ ಸಿಗಬೇಕು ಎಂಬುದು ಇನ್ನೊಂದು ಒತ್ತಾಯ.

ಒಟ್ಟಿನಲ್ಲಿ ಕೊರೊನಾ ವೈರಸ್ ಈಗ ಹೇರ್ ಕಟ್ಟಿಂಗ್ ಗೂ ಸಂಕಷ್ಟ ತಂದಿಟ್ಟಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ದೇಶಾದ್ಯಂತ 9.25 ಕೋಟಿ ರೈತ ಐಡಿ ನಿರ್ಮಾಣ | ರಸಗೊಬ್ಬರ ಬ್ಲಾಕ್‌ ಮಾರ್ಕೆಟ್‌ ವಿರುದ್ಧ ಕಟ್ಟುನಿಟ್ಟಾಗಿ ಕ್ರಮಕ್ಕೆ ಕೇಂದ್ರ ಕೃಷಿ ಸಚಿವರ ಸೂಚನೆ
April 4, 2026
7:34 AM
by: ದ ರೂರಲ್ ಮಿರರ್.ಕಾಂ
ಮಕ್ಕಳ ಆಟದ ಹಿಂದೆ ಅಡಗಿರುವ ಅಪಾಯ ಗೊತ್ತಾ? ಬೇಸಿಗೆ ರಜೆಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಇರಲಿ ಎಚ್ಚರಿಕೆ
April 3, 2026
9:24 PM
by: ಮಹೇಶ್ ಪುಚ್ಚಪ್ಪಾಡಿ
ಹವಾಮಾನ ವರದಿ | 03-04-2026 | ಕರ್ನಾಟಕದಲ್ಲಿ ಗುಡುಗು-ಮಳೆಯ ಸರಣಿ | ಎ.5 ರಿಂದ ವಿರಾಮ, 10 ರಿಂದ ಮಳೆ ವಾಪಸ್..!
April 3, 2026
4:02 PM
by: ಸಾಯಿಶೇಖರ್ ಕರಿಕಳ
ರೈತರ ಮಕ್ಕಳಿಗೆ 10 ತಿಂಗಳ ತೋಟಗಾರಿಕಾ ತರಬೇತಿ – ಅರ್ಜಿ ಆಹ್ವಾನ
April 3, 2026
3:55 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror