ಸುಳ್ಯ: ಕೊರೊನಾ ಲಾಕ್ಡೌನ್ ಇನ್ನೂ ಮುಂದುವರಿದಿದೆ. ಮೇ.3 ರವೆರೆಗೆ ಕೊರೊನಾ ಲಾಕ್ಡೌನ್ ಕಾರಣದಿಂದ ಅಗತ್ಯ ವಸ್ತುಗಳ ಸೇವೆ ಹೊರತುಪಡಿಸಿ ಇತರ ಅಂಗಡಿಗಳು ತೆರೆಯುವಂತಿಲ್ಲ. ಹೀಗಾಗಿ ಸೆಲೂನ್ ಅಂಗಡಿಗಳೂ ಬಂದ್. ಈ ಕಾರಣದಿಂದ ಜನರು ಹೇರ್ ಕಟ್ಟಿಂಗ್ ಮಾಡಿಸಲಾಗದೆ ತಡಕಾಡುತ್ತಿದ್ದಾರೆ. ಅನೇಕರು ತಾವೇ ಸ್ವತ: ಹೇರ್ ಕಟ್ಟಿಂಗ್ ಮಾಡಿಸಿ ಕೊರೊನಾ ಕಟ್ಟಿಂಗ್ ಎಂದು ಹೇಳಿಕೊಳ್ಳುತ್ತಿದ್ದಾರೆ. ಈ ನಡುವೆಯೂ ಸುಳ್ಯ ಸೇರಿದಂತೆ ಕೆಲವು ಕಡೆ ಬೆಳ್ಳಂಬೆಳಗ್ಗೆ ಕೆಲವು ಪ್ರಮುಖ ಅಂಗಡಿಗಳು ಅರ್ಧ ಬಾಗಿಲು ತೆರೆದು ಕೆಲವೇ ವ್ಯಕ್ತಿಗಳ ಹೇರ್ ಕಟ್ಟಿಂಗ್ ಗೆ ಅವಕಾಶ ನೀಡುತ್ತಿದೆ ಎಂಬ ಮಾಹಿತಿ ಇದೆ. ಇಂತಹ ಅವಕಾಶಗಳು ಗ್ರಾಮೀಣ ಭಾಗದವರೆಗೂ ಸಿಗಲಿ ಎಂದೂ ಒತ್ತಾಯ ಕೇಳಿಬಂದಿದೆ.
ಕೊರೊನಾ ವೈರಸ್ ಹರಡುವುದನ್ನು ತಡೆಯಲು ಬ್ಯೂಟಿ ಪಾರ್ಲರ್, ಮೆನ್ಸ್ ಪಾರ್ಲರ್ ಸೇರಿದಂತೆ ಸೆಲೂನ್ ಗಳು ಬಂದ್ ಆಗಿದ್ದವು. ಇದ್ದಕ್ಕಿದ್ದಂತೆ ಬಂದ್ ಆದ ಪರಿಣಾಮ ಹೇರ್ ಕಟ್ಟಿಂಗ್ ಮಾಡಿಸಲಾಗದೇ ಉಳಿದವರು ತಲೆ ಕೆಡಿಸಿಕೊಂಡಿದ್ದಾರೆ. ಇದೇ ಕಾರಣದಿಂದ ಹಲವರಿಗೆ ಶೀತ-ತಲೆನೋವು ಕಂಡುಬಂದು ಸ್ವತ: ಹೇರ್ ಕಟ್ಟಿಂಗ್ ಗೆ ಮುಂದಾದರು. ಇದಕ್ಕೆ ಕೊರೊನಾ ಕಟ್ಟಿಂಗ್ ಎಂದೂ ಹೆಸರಿಟ್ಟಿದ್ದಾರೆ. ಅಗತ್ಯ ಸೇವೆ ಇದು ಎಂದು ಮುಂಜಾಗ್ರತಾ ಕ್ರಮಗಳೊಂದಿಗೆ ಅವಕಾಶ ನೀಡಬೇಕು ಎಂಬ ಒತ್ತಾಯ ಜನರು ಮಾಡಿದರೆ, ವೃತ್ತಿಯವರಿಗೆ ಮುಂದಿನ ರಶ್ ಕಡಿಮೆ ಮಾಡಲು ಈಗಲೂ ಮುಂಜಾಗ್ರತಾ ಕ್ರಮಗಳೊಂದಿಗೆ ಅವಕಾಶ ನೀಡಬೇಕು ಎಂಬ ಒತ್ತಾಯ ಇದೆ. ಈ ನಡುವೆ ಕೆಲವು ಕಡೆ ಬೆಳಗ್ಗೆ ಅಂಗಡಿಗಳು ಅರ್ಧ ಬಾಗಿಲಿನಿಂದ ಕೆಲಸ ಮಾಡುತ್ತವೆ ಎಂದೂ ಹೇಳಲಾಗುತ್ತದೆ. ಹೀಗಾಗಿ ಅವಕಾಶ ಇದ್ದರೆ ಎಲ್ಲಾ ಕಡೆಯೂ ಅವಕಾಶ ಸಿಗಬೇಕು ಎಂಬುದು ಇನ್ನೊಂದು ಒತ್ತಾಯ.
ಒಟ್ಟಿನಲ್ಲಿ ಕೊರೊನಾ ವೈರಸ್ ಈಗ ಹೇರ್ ಕಟ್ಟಿಂಗ್ ಗೂ ಸಂಕಷ್ಟ ತಂದಿಟ್ಟಿದೆ.
ದೇಶದಲ್ಲಿ 19 ರಾಜ್ಯಗಳಲ್ಲಿ 9.25 ಕೋಟಿ ರೈತ ಐಡಿ ನಿರ್ಮಾಣವಾಗಿದೆ. ಮುಂದಿನ 6…
ಬೇಸಿಗೆ ರಜೆಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಪೋಷಕರಿಗೆ ತುಮಕೂರು ಪೊಲೀಸ್ ಎಚ್ಚರಿಕೆ ನೀಡಿದೆ.…
ಕರ್ನಾಟಕದಲ್ಲಿ ಏಪ್ರಿಲ್ 5ರವರೆಗೆ ಗುಡುಗು ಸಹಿತ ಮಳೆಯ ಚಟುವಟಿಕೆ ಮುಂದುವರಿಯಲಿದೆ. ಏಪ್ರಿಲ್ 10ರಿಂದ…
ರೈತರ ಮಕ್ಕಳಿಗೆ 10 ತಿಂಗಳ ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ದಕ್ಷಿಣ ಕನ್ನಡ…
ಮಂಗಳೂರು ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ₹500 ಮತ್ತು ಹಳೆ ಅಡಿಕೆ ₹555…
ರಸ್ತೆ ಬದಿ ಕಸ ಎಸೆಯುವವರಿಗೆ ದಂಡ ವಿಧಿಸಲಾಗುತ್ತದೆ, ಪಾವತಿಸದಿದ್ದರೆ FIR ದಾಖಲಾಗುತ್ತದೆ. ಗ್ರಾಮ…