Advertisement

ಬುಧವಾರವೂ ನಮಗೆ ಶುಭವಾರ್ತೆ | ದಕ ಜಿಲ್ಲೆಯಲ್ಲಿ ಕೊರೊನಾ ವೈರಸ್ ನೆಗೆಟಿವ್ ವರದಿ | ಉಡುಪಿ- ಕಾಸರಗೋಡಿನಲ್ಲೂ ಯಾವುದೇ ಪ್ರಕರಣವಿಲ್ಲ |

Share

ಮಂಗಳೂರು: ದ. ಕ. ಜಿಲ್ಲೆಯಲ್ಲಿ ಬುಧವಾರವೂ ಕೊರೊನಾ ವೈರಸ್ ನೆಗೆಟಿವ್ ವರದಿ ಬಂದಿದೆ. ಹೀಗಾಗಿ ಸತತ 11 ದಿನಗಳಿಂದ ಕೊರೊನಾ ವೈರಸ್ ಹೊಸಪ್ರಕರಣಗಳು ಇಲ್ಲದೇ ಇರುವುದು ಜಿಲ್ಲೆಯ ಮಟ್ಟಿಗೆ ಶುಭವಾರ್ತೆ. ಈ ನಡುವೆ ಜಿಲ್ಲೆಯಲ್ಲಿ 12 ಜನ ಸೋಂಕಿತರಲ್ಲಿ 9 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಬುಧವಾರ ಸುಮಾರು 42 ಮಂದಿಯ ಪರೀಕ್ಷಾ ಮಾದರಿಗಳು ಲಭ್ಯವಾಗಿದ್ದು, ಎಲ್ಲವೂ ನೆಗೆಟಿವ್ ಆಗಿದೆ. ಇನ್ನು ಇದೇ ದಿನ 15 ಮಂದಿಯನ್ನು ನಿಗಾದಲ್ಲಿರಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದುವರೆಗೆ 658 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಇವರ ಪೈಕಿ 511 ಮಂದಿಯ ವರದಿ ಲಭ್ಯವಾಗಿದೆ. 498 ಮಂದಿಯ ವರದಿ ನೆಗೆಟಿವ್ ಆಗಿದೆ. ಇನ್ನು 25 ಮಂದಿ ಇ ಎಸ್ ಐ ಆಸ್ಪತ್ರೆಯಲ್ಲಿ ಕ್ವಾರಂಟೈನ್ ನಲ್ಲಿದ್ದಾರೆ. ಬುಧವಾರದಂದು 22 ಮಂದಿಯ ಮಾದರಿಗಳನ್ನು ಪರೀಕ್ಷೆಗೆ ರವಾನಿಸಲಾಗಿದೆ.

ಉಡುಪಿ ಜಿಲ್ಲೆಯಲ್ಲಿ ಇದುವರೆಗೆ ದಾಖಲಾದ ಕೇವಲ ಮೂವರು ಕೊರೊನಾ ಸೋಂಕಿತರಲ್ಲಿ ಇಬ್ಬರು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ಇನ್ನೊಬ್ಬರು ಚಿತ್ಸೆಯಲ್ಲಿದ್ದಾರೆ.

ರಾಜ್ಯದಲ್ಲಿ ಬುಧವಾರ ಒಂದೇ ದಿನವೇ ಒಟ್ಟು 19 ಹೊಸ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು 279 ಸೋಂಕಿತರಲ್ಲಿ ಈಗಾಗಲೇ 80 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಕಾಸರಗೋಡು ಜಿಲ್ಲೆಯಲ್ಲಿ ಇಂದು ಯಾವುದೇ ಕೊರೊನಾ ಪ್ರಕರಣ ವರದಿಯಾಗಿಲ್ಲ. ಈ ನಡುವೆ ಬುಧವಾರ ಇಡೀ ಕೇರಳದಲ್ಲಿ ಕೇವಲ ಒಂದೇ ಒಂದು ಪ್ರಕರಣ ದಾಖಲಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ ಇದುವರೆಗೆ 83 ಮಂದಿ ಗುಣಮುಖರಾಗಿದ್ದು, ಇನ್ನು 84 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 

 

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಚಿನ್ನದ ಬೇಟೆ – ಒಂದೇ ದಿನ 4 ಚಿನ್ನ; ಪದಕಗಳ ಸಂಖ್ಯೆ 60ಕ್ಕೆ ಏರಿಕೆ

ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಒಂದೇ ದಿನ 4 ಚಿನ್ನ ಸೇರಿದಂತೆ 7 ಪದಕ…

8 hours ago

ಅಡಿಕೆ ವಹಿವಾಟಿನ ಮೇಲೆ ಹೆಚ್ಚಿದ ಕಣ್ಗಾವಲು..!, ಗಮನ ಸೆಳೆದ ಪ್ರತ್ಯೇಕ ಮೂರು ಘಟನೆಗಳು

ಅಸ್ಸಾಂನಲ್ಲಿ 5.74 ಟನ್ ಅಡಿಕೆ ವಶ, ಕೇರಳದಲ್ಲಿ 380 ಚೀಲ ಅಡಿಕೆ ಬಿಡುಗಡೆಗೆ…

10 hours ago

ಹಿಂಗಾರು ಬೆಳೆಗಳಿಗೆ ಕೇಂದ್ರದಿಂದ ಬೆಂಬಲ ಬೆಲೆ ಹೆಚ್ಚಳ

ರಬಿ(ಹಿಂಗಾರು) ಬೆಳೆಗಳಿಗೆ ಕೇಂದ್ರ ಸರ್ಕಾರ MSP ಹೆಚ್ಚಿಸಿದೆ. ಗೋಧಿ MSP ₹2,610ಕ್ಕೆ, ಕಡಲೆ…

10 hours ago

ಹವಾಮಾನ ವರದಿ | 30-09-2026 | ಅರಬ್ಬಿ ಸಮುದ್ರದ ಗಾಳಿ ದುರ್ಬಲ… ಕರ್ನಾಟಕದ ಮಳೆಯ ಸ್ವರೂಪ ಬದಲಾಗುತ್ತಾ?

ಅಕ್ಟೋಬರ್ 1ರಿಂದ ಅರಬ್ಬಿ ಸಮುದ್ರದ ಗಾಳಿ ದುರ್ಬಲಗೊಳ್ಳುವ ಸಾಧ್ಯತೆ ಇರುವುದರಿಂದ ಕರ್ನಾಟಕದಲ್ಲಿ ಮಳೆಯ…

11 hours ago

ಪಶ್ಚಿಮ ಘಟ್ಟದ ಪರಿಸರ ಸೂಕ್ಷ್ಮ ಪ್ರದೇಶ ವ್ಯಾಪ್ತಿಯ ಭಯದಲ್ಲಿ ಕೇರಳದ ರಬ್ಬರ್ ರೈತರು – ತೋಟಗಾರಿಕೆಗೆ ಮುಂದೆ ಏನು?

ಪಶ್ಚಿಮ ಘಟ್ಟದ ESA ಪ್ರಸ್ತಾವನೆ ಮತ್ತೆ ಕೇರಳದ ರಬ್ಬರ್ ಹಾಗೂ ಇತರ ತೋಟಗಾರಿಕಾ…

23 hours ago

ಫ್ಲೈಓವರ್ ಬಳಿಕ ಕಲ್ಲಡ್ಕದಲ್ಲಿ ಏನು ಬದಲಾವಣೆಯಾಗಿದೆ..?

ಕಲ್ಲಡ್ಕದ 2.1 ಕಿ.ಮೀ. ಉದ್ದದ ಫ್ಲೈಓವರ್ ಸಂಚಾರಕ್ಕೆ ಮುಕ್ತವಾದ ಬಳಿಕ ಪೇಟೆಯೊಳಗಿನ ವಾಹನ…

1 day ago