ಕೊರೊನಾ ವೈರಸ್ | ಗುರುವಾರವೂ ದ ಕ ಜಿಲ್ಲೆಯಲ್ಲಿ ನೆಗೆಟಿವ್ ರಿಪೋರ್ಟ್ | ದೇಶದಲ್ಲಿಒಟ್ಟು 719 ಪ್ರಕರಣ | ರಾಜ್ಯದಲ್ಲಿಒಟ್ಟು 55 ಪ್ರಕರಣ |

March 26, 2020
10:55 PM

ಮಂಗಳೂರು: ಸಾಕಷ್ಟು ಮುಂಜಾಗ್ರತಾ ಕ್ರಮದ ಹಿನ್ನೆಲೆಯಲ್ಲಿ  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರದಂದು ಕೂಡ ಯಾವುದೇ ಕೊರೊನಾ ಸೋಂಕು ಪ್ರಕರಣದಲ್ಲಿ ಪಾಸಿಟಿವ್ ಬಂದಿಲ್ಲ.  ಗುರುವಾರದಂದು 46 ಮಂದಿಯನ್ನು ಸ್ಕ್ರೀನಿಂಗ್ ನಡೆಸಲಾಗಿದೆ. ಆ ಮೂಲಕ ಗುರುವಾರದ ತನಕ ಒಟ್ಟು 38051 ಮಂದಿಯನ್ನು ಸ್ಕ್ರೀನಿಂಗ್ ನಡೆಸಲಾಗಿದೆ. ದೊರೆತಿರುವ ಪರೀಕ್ಷಾ ಎಲ್ಲಾ 9 ವರದಿಗಳು ನೆಗೆಟಿವ್ ಆಗಿತ್ತು.

ಆದರೆ ರಾಜ್ಯದಲ್ಲಿ ಗುರುವಾರ ಕೂಡಾ 4 ಪ್ರಕರಣ ಪತ್ತೆಯಾಗುವ ಮೂಲಕ ಒಟ್ಟು 55 ಪ್ರಕರಣ ದಾಖಲಾಗಿದೆ. ದೇಶದಲ್ಲಿ ಗುರುವಾರದಂದು ಒಟ್ಟು 62 ಹೊಸ ಪ್ರಕರಣ ಪತ್ತೆಯಾಗುವ ಮೂಲಕ ಒಟ್ಟು 719 ಪ್ರಕರಣ ದಾಖಲಾದಂತಾಗಿದೆ. ಇದರಲ್ಲಿ 45 ಮಂದಿ ಗುಣಮುಖರಾಗಿದ್ದು ಸದ್ಯ 658 ಮಂದಿ ಕೊರೊನಾ ವೈರಸ್ ಸೋಂಕಿತರು ಇದ್ದಾರೆ.

ಚೀನಾದಲ್ಲಿ ಗುರುವಾರ 67 ಹೊಸ ಪ್ರಕರಣ ಪತ್ತೆಯಾದರೆ ಅಮೇರಿಕಾದಲ್ಲಿ 6858 ಹೊಸ ಪ್ರಕರಣ ಪತ್ತೆಯಾಗಿದೆ. ಉಳಿದೆಲ್ಲಾ ದೇಶದಲ್ಲಿ  ಕೊರೊನಾ ವೈರಸ್ ವೇಗವಾಗಿ ಹರಡುತ್ತಿದೆ.ಇತರ ದೇಶಕ್ಕೆ ಹೋಲಿಸಿದರೆ  ಭಾರತ ಈಗ 41 ನೇ ಸ್ಥಾನದಲ್ಲಿ ಇದೆ. ಭಾರತದಲ್ಲಿ ಈಗ ಕೈಗೊಂಡಿರುವ ಕಟ್ಟುನಿಟ್ಟಿನ ಕ್ರಮ ಕೈಗೊಂಡರೆ ಮುಂದಿನ 14 ದಿನಗಳಲ್ಲಿ  ದೇಶದ ಜನತೆ ನೆಮ್ಮದಿಯ ನಿಟ್ಟಿಸಿರು ಬಿಡಬಹುದು ಎನ್ನುವ ಆಶಾವಾದ ಇದೆ. ಹೀಗಾಗಿ ಈಗ ಜನತೆಯು ಸರಕಾರ ಕೈಗೊಂಡಿರುವ ಲಾಕ್ ಡೌನ್ ಪಾಲನೆ ಮಾಡಿದರೆ ನೆಮ್ಮದಿಯ ದಿನಗಳು ದೇಶದ್ದಾಗಲಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಸಂಪತ್ತು ಹೆಚ್ಚಾದರೆ ಬದುಕು ಶ್ರೀಮಂತವಾಗುತ್ತದೆಯೇ..?
September 10, 2026
10:45 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಹವಾಮಾನ ವರದಿ | 10-09-2026 | ಕರ್ನಾಟಕದಲ್ಲಿ ಮಳೆ ಏಕೆ ಇಳಿಮುಖವಾಗುತ್ತಿದೆ..?
September 10, 2026
11:29 AM
by: ಸಾಯಿಶೇಖರ್ ಕರಿಕಳ
ರಾಜ್ಯದಲ್ಲಿ ವಿದ್ಯುತ್‌ ಸಂಕಷ್ಟದ ಸುಳಿವು – ರಾತ್ರಿ 6.30 ರಿಂದ 9ರವರೆಗೆ ಪೂರೈಕೆ ವ್ಯತ್ಯಯ ಸಾಧ್ಯತೆ
September 10, 2026
10:59 AM
by: ದ ರೂರಲ್ ಮಿರರ್.ಕಾಂ
ಪರಿಸರ ಸ್ನೇಹಿ ಗೌರಿ-ಗಣೇಶ ಹಬ್ಬ : ಮಂಗಳೂರು ಮಹಾನಗರಪಾಲಿಕೆ ಸೂಚನೆ
September 9, 2026
9:26 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror