ಮಂಗಳೂರು: ಸಾಕಷ್ಟು ಮುಂಜಾಗ್ರತಾ ಕ್ರಮದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರದಂದು ಕೂಡ ಯಾವುದೇ ಕೊರೊನಾ ಸೋಂಕು ಪ್ರಕರಣದಲ್ಲಿ ಪಾಸಿಟಿವ್ ಬಂದಿಲ್ಲ. ಗುರುವಾರದಂದು 46 ಮಂದಿಯನ್ನು ಸ್ಕ್ರೀನಿಂಗ್ ನಡೆಸಲಾಗಿದೆ. ಆ ಮೂಲಕ ಗುರುವಾರದ ತನಕ ಒಟ್ಟು 38051 ಮಂದಿಯನ್ನು ಸ್ಕ್ರೀನಿಂಗ್ ನಡೆಸಲಾಗಿದೆ. ದೊರೆತಿರುವ ಪರೀಕ್ಷಾ ಎಲ್ಲಾ 9 ವರದಿಗಳು ನೆಗೆಟಿವ್ ಆಗಿತ್ತು.
ಆದರೆ ರಾಜ್ಯದಲ್ಲಿ ಗುರುವಾರ ಕೂಡಾ 4 ಪ್ರಕರಣ ಪತ್ತೆಯಾಗುವ ಮೂಲಕ ಒಟ್ಟು 55 ಪ್ರಕರಣ ದಾಖಲಾಗಿದೆ. ದೇಶದಲ್ಲಿ ಗುರುವಾರದಂದು ಒಟ್ಟು 62 ಹೊಸ ಪ್ರಕರಣ ಪತ್ತೆಯಾಗುವ ಮೂಲಕ ಒಟ್ಟು 719 ಪ್ರಕರಣ ದಾಖಲಾದಂತಾಗಿದೆ. ಇದರಲ್ಲಿ 45 ಮಂದಿ ಗುಣಮುಖರಾಗಿದ್ದು ಸದ್ಯ 658 ಮಂದಿ ಕೊರೊನಾ ವೈರಸ್ ಸೋಂಕಿತರು ಇದ್ದಾರೆ.
ಚೀನಾದಲ್ಲಿ ಗುರುವಾರ 67 ಹೊಸ ಪ್ರಕರಣ ಪತ್ತೆಯಾದರೆ ಅಮೇರಿಕಾದಲ್ಲಿ 6858 ಹೊಸ ಪ್ರಕರಣ ಪತ್ತೆಯಾಗಿದೆ. ಉಳಿದೆಲ್ಲಾ ದೇಶದಲ್ಲಿ ಕೊರೊನಾ ವೈರಸ್ ವೇಗವಾಗಿ ಹರಡುತ್ತಿದೆ.ಇತರ ದೇಶಕ್ಕೆ ಹೋಲಿಸಿದರೆ ಭಾರತ ಈಗ 41 ನೇ ಸ್ಥಾನದಲ್ಲಿ ಇದೆ. ಭಾರತದಲ್ಲಿ ಈಗ ಕೈಗೊಂಡಿರುವ ಕಟ್ಟುನಿಟ್ಟಿನ ಕ್ರಮ ಕೈಗೊಂಡರೆ ಮುಂದಿನ 14 ದಿನಗಳಲ್ಲಿ ದೇಶದ ಜನತೆ ನೆಮ್ಮದಿಯ ನಿಟ್ಟಿಸಿರು ಬಿಡಬಹುದು ಎನ್ನುವ ಆಶಾವಾದ ಇದೆ. ಹೀಗಾಗಿ ಈಗ ಜನತೆಯು ಸರಕಾರ ಕೈಗೊಂಡಿರುವ ಲಾಕ್ ಡೌನ್ ಪಾಲನೆ ಮಾಡಿದರೆ ನೆಮ್ಮದಿಯ ದಿನಗಳು ದೇಶದ್ದಾಗಲಿದೆ.
12.07.2025 ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ…
ಜ್ಯೋತಿಷ್ಯ ಶಾಸ್ತ್ರದಲ್ಲಿ ಕೇತು ಒಂದು ನಿಗೂಢ ಗ್ರಹವಾಗಿದ್ದು, ಆಧ್ಯಾತ್ಮಿಕತೆ, ಕರ್ಮ, ಮತ್ತು ಜೀವನದಲ್ಲಿ…
ಕೋಲಾರ ಜಿಲ್ಲೆಯ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ ಗ್ರಾಮ ಪಂಚಾಯತಿ ಸೇರಿದಂತೆ ಯಾವುದೇ…
ಹಾವೇರಿ ಜಿಲ್ಲೆಯಲ್ಲಿ ಹರಿಯುವ ವರದಾ ಹಾಗೂ ತುಂಗಭದ್ರಾ ನದಿಗಳಲ್ಲಿ ನೀರಿನ ಮಟ್ಟ ಕ್ರಮೇಣ…
ಅಸಂಘಟಿತ ಕಾರ್ಮಿಕರ ಹಿತರಕ್ಷಣೆಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದ್ದು, 23 ಅಸಂಘಟಿತ ವರ್ಗಗಳ…
ಹಾವೇರಿ ಜಿಲ್ಲೆಯಲ್ಲಿ ಪೂರ್ವ ಮುಂಗಾರು ಹಾಗೂ ಮುಂಗಾರು ಮಳೆಯಿಂದಾಗಿ 148.57 ಹೆಕ್ಟೇರ್ ಪ್ರದೇಶದಲ್ಲಿದ್ದ…