ಕೊರೊನಾ ವೈರಸ್ ತಡೆಗೆ ಲಾಕ್ ಡೌನ್ ಆದರೆ ಮುಗಿಯುವುದಿಲ್ಲ | ಈಗ ಬೇಕಾದ್ದು ಸಾಮಾಜಿಕ ಅಂತರ | ಸಾಕಷ್ಟು ಮುಂಜಾಗ್ರತೆ

March 24, 2020
11:41 PM

ಕೊರೊನಾ ವೈರಸ್ ಹರಡುವುದು ತಡೆಗೆ ವಿವಿಧ ಪ್ರಯತ್ನ ಮಾಡಲಾಗುತ್ತಿದೆ. ಎರಡು ದಿನಗಳ ಹಿಂದೆ ಜನತಾ ಕರ್ಫ್ಯೂ ಆಚರಿಸಲಾಯಿತು. ಅದಾದ ಬಳಿಕ ಮಾ.31 ರವರೆಗೆ ಲಾಕ್ ಡೌನ್ ಎಂದೂ ಹೇಳಲಾಯಿತು. ಅದಾದ ಮರುದಿನವೇ ನೋಡಿದರೆ ಅಂಗಡಿಗಳಲ್ಲಿ, ಹಾಲು ಖರೀದಿಯಲ್ಲಿ, ಎಲ್ಲೆಂದರಲ್ಲಿ  ಜನ ಮುಗಿಬಿದ್ದಿದ್ದಾರೆ. ಎಲ್ಲಾ ಜಾಗೃತಿಯ ಜೊತೆಗೆ ಪ್ರಮುಖವಾಗಿ ಈಗ ಆಗಬೇಕಾದ್ದು ಲಾಕ್ ಡೌನ್ ಜೊತೆಗೆ ಸಾಮಾಜಿಕ ಅಂತರ. ಆಗಾಗ ಸ್ವಚ್ಛತೆ.

Advertisement
Advertisement

ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ನಡೆಸಿದ ಅಧ್ಯಯನ ವರದಿ ಕೂಡಾ ಇದನ್ನೇ ಹೇಳಿದೆ, ಭಾರತದಲ್ಲಿ ಕೊರೊನಾ ವೈರಸ್  ಹರಡುವಿಕೆ ತಡೆಗಟ್ಟಲು ಸಾಮಾಜಿಕ ಅಂತರವೇ ಪ್ರಮುಖ ಪರಿಹಾರ. ಇದರ ಹೊರತಾಗಿ  ಬೇರೆ ದಾರಿ ಇಲ್ಲ. ಇದು ತಪ್ಪಿದರೆ  ಭಾರತದಂತಹ  ದೇಶ ಅತ್ಯಂತ ಅಪಾಯಕಾರಿ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ. ಈಗ ಕೊರೊನಾ ವೈರಸ್ ಹರಡುವುದು ತಡೆಯುವಲ್ಲಿ  ಪ್ರತಿಯೊಬ್ಬನ ಜವಾಬ್ದಾರಿ ಇದೆ. ಸರಕಾರದಿಂದ , ಯಾವುದೇ ಅಧಿಕಾರಿಯಿಂದ, ಪೊಲೀಸರಿಂದ , ಸ್ವಯಂಸೇವಾ ಸಂಸ್ಥೆಗಳಿಂದ ಸಾದ್ಯವಿಲ್ಲ, ಪ್ರತೀ ವ್ಯಕ್ತಿ ಜಾಗೃತವಾದರೆ, ಜವಾಬ್ದಾರಿಯಿಂದ ಕೆಲಸ ಮಾಡಿದರೆ ಮಾತ್ರವೇ ವೈರಸ್ ಹರಡುವುದು  ತಡೆಯಲು ಸಾಧ್ಯವಿದೆ. ಒಂದು ವೇಳೆ ದೇಶದ ಆರೋಗ್ಯ ಸೇವೆಯಲ್ಲಿನ  ಇಂತಹ ತುರ್ತು ಪರಿಸ್ಥಿಯನ್ನು ಜನರಿಗೆ ನಿಭಾಯಿಸಲಾಗದೇ ಹೋದರೆ ,ವಿಷಮ ಪರಿಸ್ಥಿತಿಗೆ ತಲುಪುವ ಅಪಾಯವಿದೆ ಎಂದೂ ಅಧ್ಯಯನ ವರದಿ ಎಚ್ಚರಿಸಿದೆ.

Advertisement

ಸೋಂಕಿತ ವ್ಯಕ್ತಿಯನ್ನು ಪ್ರತ್ಯೇಕವಾಗಿರಿಸಿ, ಚಿಕಿತ್ಸೆ ನೀಡುವುದು  ಒಂದು ದಾರಿಯಾದರೆ ಉಳಿದವರು ಅಂತರ ಕಾಯ್ದುಕೊಳ್ಳುವುದು ಇನ್ನೊಂದು ದಾರಿ. ಚೀನಾ, ಇಟಲಿಯ ಮಾದರಿಯಲ್ಲಿ ಈ ವೈರಸ್ ಭಾರತದಲ್ಲೂ ಮುಂದೆ ಹರಡಿದರೆ ನಿಯಂತ್ರವೇ ಅಸಾಧ್ಯ ಎಂದು ವೈದ್ಯ ಪರಿಷತ್ತು ಆತಂಕ ವ್ಯಕ್ತಪಡಿಸಿದೆ. ಹೀಗಾಗಿ ಈಗಿನ ಎಲ್ಲಾ ಕ್ರಮಗಳು ಭವಿಷ್ಯ ನಿರ್ಧಾರ ಮಾಡುವುದೇ ಆಗಿದೆ.

ಸಂಶೋಧನೆಗಳ ಪ್ರಕಾರ ವೈರಸ್ ಹರಡುವಿಕೆಯ ಪ್ರಮಾಣ ಈಗ ಹೆಚ್ಚುತ್ತಿದೆ. ಆರಂಭದಲ್ಲಿ  ಒಬ್ಬ ಸೋಂಕಿತ ವ್ಯಕ್ತಿಯಿಂದ ಸರಿಸುಮಾರು 2 ರಿಂದ 5 ಮಂದಿಗೆ  ಹರಡುವ ಸಾಧ್ಯತೆಗಳಿವೆ. ಮುಂದಿನ ಹಂತದಲ್ಲಿ 2 ರಿಂದ 5 ಮಂದಿಗೆ ಹರಡುವ ಸಾಧ್ಯತೆ ಇದೆ. ಇದು ತೀರಾ ಅಪಾಯಕಾರಿ ಸನ್ನಿವೇಶ. ಈ ನಿಟ್ಟಿನಲ್ಲಿ ತುರ್ತು ಕ್ರಮ ಅಗತ್ಯವಾಗುತ್ತದೆ. ಹೀಗಾಗಿ ಕೊರೊನಾ ವೈರಸ್‌ ಸೋಂಕಿನ ಲಕ್ಷಣಗಳನ್ನು ಹೊಂದಿರುವವರಿಂದ ಅಂತರ ಕಾಯ್ದುಕೊಂಡರೆ ಹೊಸ ಪ್ರಕರಣಗಳು ಕಡಿಮೆಯಾಗಬಹುದು. ಈ ನಿಯಮ ಪಾಲಿಸಿದರೆ ಭಾರತ ಸುರಕ್ಷಿತವಾಗಬಲ್ಲುದು ಎಂದು ಸಂಶೋಧನೆ ಹೇಳಿದೆ.

Advertisement
Advertisement
Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಳೆ ಇಲ್ಲ, ನೀರಿಲ್ಲ, ಬರಗಾಲ ಎಂದು ಬೊಬ್ಬೆ ಹೊಡೆಯದಿರಿ : ಮಳೆ ನೀರನ್ನು ಹಿಡಿದಿಡುವ ಕಾರ್ಯ ಅಗತ್ಯ :
May 19, 2024
5:57 PM
by: The Rural Mirror ಸುದ್ದಿಜಾಲ
ಮಾನವರಾದ ನಮಗೆ ಪರಿಸರ ಎಷ್ಟು ಮುಖ್ಯ..? ಪರಿಸರಿದಿಂದ ನಮಗಾಗುವ ಪ್ರಯೋಜನವೇನು..?
May 19, 2024
5:28 PM
by: The Rural Mirror ಸುದ್ದಿಜಾಲ
ಸಮುದ್ರದ ಉಪ್ಪು, ಅಯೋಡಿಕರಿಸಿದ ಟೇಬಲ್ ಉಪ್ಪು, ಸೈಂಧವ ಉಪ್ಪು, ಕಪ್ಪು ಉಪ್ಪು : ಯಾವ ಉಪ್ಪು ಆರೋಗ್ಯಕ್ಕೆ ಒಳ್ಳೆಯದು?
May 19, 2024
5:08 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror