ಕೊರೊನಾ ವೈರಸ್ ಹರಡುವುದು ತಡೆಗೆ ವಿವಿಧ ಪ್ರಯತ್ನ ಮಾಡಲಾಗುತ್ತಿದೆ. ಎರಡು ದಿನಗಳ ಹಿಂದೆ ಜನತಾ ಕರ್ಫ್ಯೂ ಆಚರಿಸಲಾಯಿತು. ಅದಾದ ಬಳಿಕ ಮಾ.31 ರವರೆಗೆ ಲಾಕ್ ಡೌನ್ ಎಂದೂ ಹೇಳಲಾಯಿತು. ಅದಾದ ಮರುದಿನವೇ ನೋಡಿದರೆ ಅಂಗಡಿಗಳಲ್ಲಿ, ಹಾಲು ಖರೀದಿಯಲ್ಲಿ, ಎಲ್ಲೆಂದರಲ್ಲಿ ಜನ ಮುಗಿಬಿದ್ದಿದ್ದಾರೆ. ಎಲ್ಲಾ ಜಾಗೃತಿಯ ಜೊತೆಗೆ ಪ್ರಮುಖವಾಗಿ ಈಗ ಆಗಬೇಕಾದ್ದು ಲಾಕ್ ಡೌನ್ ಜೊತೆಗೆ ಸಾಮಾಜಿಕ ಅಂತರ. ಆಗಾಗ ಸ್ವಚ್ಛತೆ.
ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ನಡೆಸಿದ ಅಧ್ಯಯನ ವರದಿ ಕೂಡಾ ಇದನ್ನೇ ಹೇಳಿದೆ, ಭಾರತದಲ್ಲಿ ಕೊರೊನಾ ವೈರಸ್ ಹರಡುವಿಕೆ ತಡೆಗಟ್ಟಲು ಸಾಮಾಜಿಕ ಅಂತರವೇ ಪ್ರಮುಖ ಪರಿಹಾರ. ಇದರ ಹೊರತಾಗಿ ಬೇರೆ ದಾರಿ ಇಲ್ಲ. ಇದು ತಪ್ಪಿದರೆ ಭಾರತದಂತಹ ದೇಶ ಅತ್ಯಂತ ಅಪಾಯಕಾರಿ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ. ಈಗ ಕೊರೊನಾ ವೈರಸ್ ಹರಡುವುದು ತಡೆಯುವಲ್ಲಿ ಪ್ರತಿಯೊಬ್ಬನ ಜವಾಬ್ದಾರಿ ಇದೆ. ಸರಕಾರದಿಂದ , ಯಾವುದೇ ಅಧಿಕಾರಿಯಿಂದ, ಪೊಲೀಸರಿಂದ , ಸ್ವಯಂಸೇವಾ ಸಂಸ್ಥೆಗಳಿಂದ ಸಾದ್ಯವಿಲ್ಲ, ಪ್ರತೀ ವ್ಯಕ್ತಿ ಜಾಗೃತವಾದರೆ, ಜವಾಬ್ದಾರಿಯಿಂದ ಕೆಲಸ ಮಾಡಿದರೆ ಮಾತ್ರವೇ ವೈರಸ್ ಹರಡುವುದು ತಡೆಯಲು ಸಾಧ್ಯವಿದೆ. ಒಂದು ವೇಳೆ ದೇಶದ ಆರೋಗ್ಯ ಸೇವೆಯಲ್ಲಿನ ಇಂತಹ ತುರ್ತು ಪರಿಸ್ಥಿಯನ್ನು ಜನರಿಗೆ ನಿಭಾಯಿಸಲಾಗದೇ ಹೋದರೆ ,ವಿಷಮ ಪರಿಸ್ಥಿತಿಗೆ ತಲುಪುವ ಅಪಾಯವಿದೆ ಎಂದೂ ಅಧ್ಯಯನ ವರದಿ ಎಚ್ಚರಿಸಿದೆ.
ಸೋಂಕಿತ ವ್ಯಕ್ತಿಯನ್ನು ಪ್ರತ್ಯೇಕವಾಗಿರಿಸಿ, ಚಿಕಿತ್ಸೆ ನೀಡುವುದು ಒಂದು ದಾರಿಯಾದರೆ ಉಳಿದವರು ಅಂತರ ಕಾಯ್ದುಕೊಳ್ಳುವುದು ಇನ್ನೊಂದು ದಾರಿ. ಚೀನಾ, ಇಟಲಿಯ ಮಾದರಿಯಲ್ಲಿ ಈ ವೈರಸ್ ಭಾರತದಲ್ಲೂ ಮುಂದೆ ಹರಡಿದರೆ ನಿಯಂತ್ರವೇ ಅಸಾಧ್ಯ ಎಂದು ವೈದ್ಯ ಪರಿಷತ್ತು ಆತಂಕ ವ್ಯಕ್ತಪಡಿಸಿದೆ. ಹೀಗಾಗಿ ಈಗಿನ ಎಲ್ಲಾ ಕ್ರಮಗಳು ಭವಿಷ್ಯ ನಿರ್ಧಾರ ಮಾಡುವುದೇ ಆಗಿದೆ.
ಸಂಶೋಧನೆಗಳ ಪ್ರಕಾರ ವೈರಸ್ ಹರಡುವಿಕೆಯ ಪ್ರಮಾಣ ಈಗ ಹೆಚ್ಚುತ್ತಿದೆ. ಆರಂಭದಲ್ಲಿ ಒಬ್ಬ ಸೋಂಕಿತ ವ್ಯಕ್ತಿಯಿಂದ ಸರಿಸುಮಾರು 2 ರಿಂದ 5 ಮಂದಿಗೆ ಹರಡುವ ಸಾಧ್ಯತೆಗಳಿವೆ. ಮುಂದಿನ ಹಂತದಲ್ಲಿ 2 ರಿಂದ 5 ಮಂದಿಗೆ ಹರಡುವ ಸಾಧ್ಯತೆ ಇದೆ. ಇದು ತೀರಾ ಅಪಾಯಕಾರಿ ಸನ್ನಿವೇಶ. ಈ ನಿಟ್ಟಿನಲ್ಲಿ ತುರ್ತು ಕ್ರಮ ಅಗತ್ಯವಾಗುತ್ತದೆ. ಹೀಗಾಗಿ ಕೊರೊನಾ ವೈರಸ್ ಸೋಂಕಿನ ಲಕ್ಷಣಗಳನ್ನು ಹೊಂದಿರುವವರಿಂದ ಅಂತರ ಕಾಯ್ದುಕೊಂಡರೆ ಹೊಸ ಪ್ರಕರಣಗಳು ಕಡಿಮೆಯಾಗಬಹುದು. ಈ ನಿಯಮ ಪಾಲಿಸಿದರೆ ಭಾರತ ಸುರಕ್ಷಿತವಾಗಬಲ್ಲುದು ಎಂದು ಸಂಶೋಧನೆ ಹೇಳಿದೆ.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…