ಕೊರೊನಾ ವೈರಸ್ | ಲೋಕಹಿತಕ್ಕಾಗಿ ನಡೆಯುತ್ತಿದೆ ಯಜ್ಞಾನುಷ್ಠಾನ | ವೈದ್ಯಕೀಯದ ಜೊತೆ ವೇದ ಸಾರ | ಸರ್ವೇ ಜನಾ: ಸುಖಿನೋ ಭವಂತು

March 26, 2020
8:10 PM

ಸುಳ್ಯ: ನಾಡಿನೆಲ್ಲೆಡೆ ಕರೋನಾ ವೈರಸ್ ಹರಡುವುದನ್ನು ತಡೆಯಲು ಇನ್ನಿಲ್ಲದ ಪ್ರಯತ್ನ ನಡೆಯುತ್ತಿದೆ. ಇದೇ ವೇಳೆ ರೋಗನಾಶಕವಾದ ಮಂತ್ರಗಳಿಂದ ಲೋಕಕಲ್ಯಾಣಕ್ಕಾಗಿ ಮನೆಮನೆಗಳಲ್ಲಿ ಯಜ್ಞಾನುಷ್ಠಾನ ನಡೆಯತ್ತಿದೆ. ಸುಳ್ಯ ತಾಲೂಕಿನ ವಿವಿದೆಡೆ ಈ ಯಜ್ಞ ನಡೆಯುತ್ತಿದೆ. ಈ ಮೂಲಕ ಲೋಕ ಹಿತ, ಜನರಿಗೆ ಮಾನಸಿಕ ಧೈರ್ಯ ತುಂಬುವ ಕಾರ್ಯ ನಡೆಯುತ್ತಿದೆ.

Advertisement
Advertisement

ಗುತ್ತಿಗಾರು ಗ್ರಾಮದ ಹಿರಿಯ ವೈದಿಕ ವಿದ್ವಾಂಸರೂ, ಮಾರ್ಗದರ್ಶಕರೂ ಆಗಿರುವ ವೇದಗುರು ಕರುವಜೆ ಕೇಶವ ಜೋಯಿಸರ ನೇತೃತ್ವದಲ್ಲಿ ಮಾ.20 ನೇ ತಾರೀಕಿನಿಂದ ನಿರಂತರವಾಗಿ ರೋಗನಾಶಕವಾದ ಮಂತ್ರಗಳಿಂದ ಲೋಕಕಲ್ಯಾಣಕ್ಕಾಗಿ ಮನೆಮನೆಗಳಲ್ಲಿ ಯಜ್ಞಾನುಷ್ಠಾನ ನಡೆಯತ್ತಿದೆ.  ಯಜ್ಞದ ಸಂದರ್ಭ ವೈಜ್ಞಾನಿಕ ರೀತಿಯಲ್ಲಿ ಅಂತರ ಕಾಪಾಡಿಕೊಂಡು ಯಜ್ಞಾನುಷ್ಠಾನ ನಡೆಯತ್ತಿರುವುದು ವಿಶೇಷವಾಗಿದೆ.

Advertisement

ಲೋಕಕ್ಕೆ ಬಾಧಿತವಾದಂತ ಕೋವಿಡ್-19 (ಕರೋನಾ) ವೈರಸ್ ಶೀಘ್ರದಲ್ಲಿ ನಾಶವಾಗುವುದರ ಜೊತೆ ಈ ಸಮರದಲ್ಲಿ ನಿರಂತರ ತೊಡಗಿಸಿಕೊಂಡಿರುವ ಈ ದೇಶದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಡಳಿತ ವರ್ಗ , ಅಧಿಕಾರಿಗಳು, ವೈದ್ಯಕೀಯ ವಿಭಾಗ , ಆರಕ್ಷಕರು ,ಸೈನ್ಯ , ಹಾಗೂ ದೇಶದ ಸಮಸ್ತ ಪ್ರಜಾಜನರ ಕ್ಷೇಮವನ್ನು ಸಂಕಲ್ಪಿಸಿ ಔಷಧೀಯ ವಸ್ತಗಳು ಹಾಗೂ ವನಸ್ಪತಿಗಳನ್ನು ಯಜ್ಞ ದ ಮೂಲಕ ಭಗವಂತನಿಗೆ ಸಮರ್ಪಿಸಲಾಗಿದೆ.

Advertisement

ಸುಳ್ಯ ಹಾಗೂ ಕಡಬ ತಾಲೂಕಿನ ಹಲವೆಡೆಗಳಲ್ಲಿ ಈ ಕಾರ್ಯ ನಡೆಸಲಾಗಿದ್ದು ಈ ಗುತ್ತಿಗಾರು ಭಾಗದಲ್ಲಿ ಮುರಳೀಕೃಷ್ಣ ವಳಲಂಬೆ ,ಪ್ರಸಾದ ಜೋಷಿ, ಶ್ಯಾಮಕೃಷ್ಣ ಹೊಸವಳಿಕೆ , ಅಚಿಂತ್ಯರಾಮ ಶರ್ಮ, ಕರುವಜೆ ಶಿವಸುಬ್ರಹ್ಮಣ್ಯ ಶರ್ಮಾ ಮೊದಲಾದವರ ನಿರಂತರ ಸಹಕಾರದೊಂದಿಗೆ ಈ ಯಜ್ಞ ಸಂಪನ್ನಗೊಳ್ಳುತ್ತಿದೆ.

ಸಮಾಜದ ಎಲ್ಲ ಮನೆಗಳಲ್ಲಿ ಇಂತಹ ಯಜ್ಞದ ಅನುಷ್ಠಾನ ನಡೆಯಲಿ ಎಂಬ ಸದಾಶಯದೊಂದಿಗೆ ಕೇಶವ ಜೋಯಿಸರು ಈ ಕಾರ್ಯವನ್ನು ನಡೆಸುತ್ತಿದ್ದಾರೆ.

Advertisement

Advertisement
Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಲೆನಾಡಗಿಡ್ಡ ಉಳಿಸುವ ಆಂದೋಲನಕ್ಕೆ ತೊಡಗುವ ಅನಿವಾರ್ಯತೆ ಇದೆ | ಯಾಕೆ ಗೊತ್ತಾ…?
April 25, 2024
11:48 PM
by: The Rural Mirror ಸುದ್ದಿಜಾಲ
ಏರಿದ ತಾಪಮಾನ | ರಾಜ್ಯದಲ್ಲಿ ಮುಂದಿನ 5 ದಿನ ಬೀಸಲಿದೆ ಬಿಸಿಗಾಳಿ ಎಚ್ಚರಿಕೆ..!
April 25, 2024
11:01 PM
by: The Rural Mirror ಸುದ್ದಿಜಾಲ
ನೆಲ್ಯಾಡಿ | ವಿಶ್ವವಿದ್ಯಾನಿಲಯ ಕಾಲೇಜು ಶಿಕ್ಷಕ-ರಕ್ಷಕ ಸಂಘದ ಮಹಾಸಭೆ | ನೂತನ ಪದಾಧಿಕಾರಿಗಳ ನೇಮಕ
April 25, 2024
10:12 PM
by: ದ ರೂರಲ್ ಮಿರರ್.ಕಾಂ
ಇತ್ತೀಚಿಗೆ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತಿದೆ | ಮಕ್ಕಳ ತೂಕ ಮತ್ತು ಎತ್ತರವನ್ನು ಹೆಚ್ಚಿಸುವ ಆಹಾರಗಳು |
April 25, 2024
3:13 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror