ಸುಳ್ಯ: ಕರೋನ್ ವೈರಸ್ ಹರಡುವುದನ್ನು ತಡೆಯಲು ಸರಕಾರ ಹಲವು ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಅದರ ಭಾಗವಾಗಿ ಮಾ.31 ರವರೆಗೆ ಬಂದ್ ಆಚರಣೆ ಮಾಡಲಾಗುತ್ತಿದೆ. ಪೆಟ್ರೋಲ್, ಮೆಡಿಕಲ್, ಹಾಲು ಸೇರಿದಂತೆ ಅಗತ್ಯ ಸೇವೆಗಳು ಇರಲಿದೆ. ಆದರೆ ಹಾಲು ಬೆಳಗ್ಗೆ ಮಾತ್ರವೇ ಲಭ್ಯ ಇರುತ್ತದೆ. ಸುಳ್ಯದಲ್ಲಿ ಕೂಡಾ ಇದೇ ನಿಯಮ ಪಾಲನೆಯಾಗುತ್ತಿದೆ.
ದಿನಸಿ ಅಂಗಡಿ ತರಕಾರಿ ಅಂಗಡಿ ಮಧ್ಯಾಹ್ನದವರೆಗೆ ತೆರೆಯಬಹುದು ಎಂಬ ಸೂಚನೆ ಇದ್ದರೂ ಗೊಂದಲಗಳಿಂದ ಅಂಗಡಿ ಬಾಗಿಲು ತೆರೆದಿಲ್ಲ. ಗ್ರಾಮೀಣ ಭಾಗದಲ್ಲೂ ಇದೇ ಗೊಂದಲ ಇದೆ. ಹೀಗಾಗಿ ಗ್ರಾಮೀಣ ಭಾಗದ ಜನರಿಗೂ ಗೊಂದಲ.
ಪೇಟೆಯಲ್ಲಿ ಅನಗತ್ಯವಾಗಿ ತಿರುಗಾಡುವುದು ಹಾಗೂ ಅಂಗಡಿಗಳಲ್ಲಿ ಜನಸಂದಣಿ ಸೇರುವುದು ಕಂಡುಬರುತ್ತಿದೆ. ಹೀಗಾಗಿ ಬಂದ್ ಮಾಡುವುದು ಅನಿವಾರ್ಯವಾಗಿದೆ. ಜನರೇ ಸ್ವಯಂ ನಿಯಂತ್ರಣ ಮಾಡಿಕೊಂಡು ಕನಿಷ್ಟ ಅಂತರ ಕಾಪಾಡಿಕೊಂಡರೆ ಈ ಸಮಸ್ಯೆ ಉಲ್ಬಣಿಸದು. ಆದರೆ ಕೊರೊನಾ ವೈರಸ್ ಹರಡುವುದು ತಡೆಗೆ ಅಗತ್ಯವಾಗಿ ಆಡಳಿತದ ಜೊತೆ ಕೈಜೋಡಿಸಬೇಕಿದೆ.
ಮನೆಯಿಂದ ಹೊರಬರಬೇಡಿ – ದಿನಸಿ ಖರೀದಿಗೆ ಅವಕಾಶ ಇದೆ : ತಹಶೀಲ್ದಾರ್ ಮನವಿ
ಕೊರೊನಾ ವೈರಸ್ ಹರಡುವುದು ತಡೆಗೆ ಜನರು ಜಾಗೃತರಾಗಿ ಮಾ.31 ರವರೆಗೆ ತುರ್ತು ಅವಶ್ಯಕತೆ ಹೊರತುಪಡಿಸಿ ಸಾಧ್ಯವಾದಷ್ಟು ಮನೆಯಿಂದ ಹೊರಬರಬೇಡಿ ಎಂದು ತಹಶೀಲ್ದಾರ್ ಅನಂತ ಶಂಕರ್ ಮನವಿ ಮಾಡಿದ್ದಾರೆ. ದಿನಸಿ ಖರೀದಿಗೆ ಅವಕಾಶ ಇದೆ. ಯಾವುದೇ ಜನರು ಆತಂಕಕ್ಕೆ ಒಳಗಾಗಬೇಕಾಗಿಲ್ಲ. ದಾಸ್ತಾನು ಖಾಲಿಯಾದರೆ ವರ್ತಕರು ತರಿಸಿಕೊಳ್ಳಬಹುದು. ಬೆಳಗ್ಗೆ 6 ಗಂಟೆಯಿಂದ 12 ಗಂಟೆಯವರೆಗೆ ದಿನಸಿ ಅಂಗಡಿಗಳು ತೆರಯಬಹುದು ಎಂದು ಅನಂತ ಶಂಕರ್ ಹೇಳಿದ್ದಾರೆ. ಆದರೆ ಜನ ಸಂದಣಿ ಕಡಿಮೆ ಮಾಡಬೇಕು , ಎಲ್ಲೂ ಸೇರಬಾರದು ಎಂದು ತಿಳಿಸಿದ್ದಾರೆ.
ಗ್ರಾಮೀಣ ಭಾಗದಲ್ಲಿ ಬಂದ್… ಬಂದ್…
ಕೊರೊನಾ ವೈರಸ್ ಹರಡುವುದು ತಡೆಗೆ ಗ್ರಾಮಿಣ ಭಾಗದ ಜನರು ಉತ್ತಮ ರೀತಿಯಲ್ಲಿ ಸ್ಪಂದನೆ ನೀಡಿದ್ದಾರೆ. ಸುಳ್ಯ ತಾಲೂಕಿನ ಬಹುತೇಕ ಎಲ್ಲಾ ಗ್ರಾಮೀಣ ಭಾಗಗಳೂ ಬಂದ್ ಆಗಿವೆ. ತುರ್ತಾಗಿ ದಿನಸಿ ಅಂಗಡಿಗಳಿಗೆ ತೆರಳುವುದೇ ಈಗ ಗ್ರಾಮೀಣ ಭಾಗದ ಜನರಿಗೆ ತಲೆ ನೋವಾಗಿದೆ.
ಮಾ.31 ರವೆರೆಗ ನಿಗದಿ ಪಡಿಸಿದ ಸಮಯದಲ್ಲಿ ದಿನಸಿ ಖರೀದಿಗೆ ಅವಕಾಶ ಇದೆ:
ಮಾ.31 ರವರೆಗೆ ನಿಗದಿ ಪಡಿಸಿದ ಸಮಯದಲ್ಲಿ ದಿನಸಿ, ಹಾಲು , ತರಕಾರಿ ಖರೀದಿಗೆ ಅವಕಾಶ ಇದೆ. ಈ ಸಮಯ ಹೊರತುಪಡಿಸಿ ಉಳಿದ ಸಮಯದಲ್ಲಿ ಅನಗತ್ಯ ತಿರುಗಾಟ ಕಂಡುಬಂದರೆ ಕೇಸು ದಾಖಲಿಸಲಾಗುವುದು ಎಂದು ಸಿಐ ನವೀನ್ ಚಂದ್ರ ಜೋಗಿ ಎಚ್ಚರಿಸಿದ್ದಾರೆ.
ಬೆಳ್ಳಾರೆಯಲ್ಲಿ ಲಾಠಿ ಬೀಸಿದ ಪೊಲೀಸರು :
ಬೆಳ್ಳಾರೆಯಲ್ಲಿ ಪೇಟೆಯಲ್ಲಿ ಅನಗತ್ಯವಾಗಿ ಓಡಾಟ ಮಾಡುತ್ತಿದ್ದವರನ್ನು ಪೊಲೀಸರು ಲಾಠಿ ಬೀಸಿ ಓಡಿಸಿದ್ದಾರೆ. ಮಾ.31 ರವರೆಗೆ ಈ ಕ್ರಮಗಳು ಅನಿವಾರ್ಯವಾಗಿದೆ. ಇದೀಗ ಠಾಣಾ ವ್ಯಾಪ್ತಿಯಲ್ಲಿ ಧ್ವನಿ ವರ್ಧಕದ ಮೂಲಕ ಮಾಹಿತಿ ತಿಳಿಸಲಾಗುತ್ತಿದೆ.
ಜಿಲ್ಲಾ ಗಡಿಭಾಗದಲ್ಲಿ ತಪಾಸಣೆ:
ಕೊರೊನಾ ವೈರಸ್ ಕೊಡಗು ಹಾಗೂ ಕಾಸರಗೋಡು ಕಡೆಯಲ್ಲಿ ಹರಡಿರುವ ಕಾರಣದಿಂದ ಬೇರೆ ಜಿಲ್ಲೆಗಳಿಂದ ಜಿಲ್ಲೆಗೆ ಆಗಮಿಸುವ ಜನರನ್ನು ತಪಾಸಣೆಗೆ ಒಳಪಡಿಸಿಯೇ ಬಿಡಲಾಗುತ್ತಿದೆ.
ಹೊಸರುಚಿಯ ಮೂಲಕ ಈ ವಾರ ಪಪಾಯ ಹಣ್ಣು ಬರ್ಫಿಯ ಬಗ್ಗೆ ಹೇಳಿದ್ದಾರೆ ಗೃಹಿಣಿ…
ರಾಮಸೀತೆಯರೊಂದಾಗಿ ಕುಶಲವರಿಗೆ ತಂದೆ ತಾಯಿ ಲಭಿಸಿದ ಘಳಿಗೆಯು ಎಲ್ಲರಿಗೂ ಸಂಭ್ರಮಯೋಗ್ಯವಾಗಿ ಕಾಣುತ್ತದೆ. ಹಾಗಾಗಿ…
ಅಲ್ಪಾವಧಿ ಬೆಳೆ ಸಾಲದ ಬಗ್ಗೆ ಕಳೆದ ವಾರ ತಿಳಿಸಲಾಗಿತ್ತು. ಅದರ ಮುಂದುವರಿದ ಭಾಗವಾಗಿ…
ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸಲು ಈಗಾಗಲೇ ತುಮಕೂರು ಜಿಲ್ಲೆಯಲ್ಲಿ ತೆರೆದಿರುವ 10…
ಮಕ್ಕಳ ಆರೋಗ್ಯ ಮತ್ತು ಭವಿಷ್ಯದ ಹಿತದೃಷ್ಟಿಯಿಂದ ರೈತರು ತಮ್ಮ ಬೆಳೆಗಳಲ್ಲಿ ಹೆಚ್ಚಿನ ರಾಸಾಯನಿಕಗಳು…
ಕಾರವಾರದ ರವೀಂದ್ರನಾಥ್ ಟಾಗೋರ್ ಕಡಲ ತೀರದ ಮಯೂರ ವರ್ಮ ವೇದಿಕೆಯಲ್ಲಿ ಏಪ್ರಿಲ್ 18…